June 2023

ಸುಬ್ರಹ್ಮಣ್ಯ:ಕೆ ಎಸ್ ಎಸ್ ಕಾಲೇಜ್ ವತಿಯಿಂದ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆ ಕಾರ್ಯಕ್ರಮ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ವತಿಯಿಂದ ಶ್ರೀ ಸುಬ್ರಹ್ಮಣ್ಯೇಶ್ವರ ಪ್ರೌಢಶಾಲಾ(SSPU) ವಿಭಾಗದ ಸಂಸ್ಕೃತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳನ್ನು ಜೂ.27 ರಂದು ಹಮ್ಮಿಕೊಂಡರು. ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ವಿದ್ಯಾರ್ಥಿಗಳಾದ ಕು.ಪೃಥ್ವಿಶ್ರೀ, ಕು. ಮೋಕ್ಷಿತ, ಕು. ದೇವಿ ಪ್ರಸಾದ್ ಇವರು ಪ್ರೌಢಶಾಲಾ ಸಂಸ್ಕೃತ ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ನಡೆಸಿದರು. ಈ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ಶ್ರೀ ಯಶವಂತ ರೈ ಹಾಗೂ ಸಂಸ್ಕೃತ ಶಿಕ್ಷಕರಾದ ಶ್ರೀ ರಘು ಬಿಜೂರು […]

ಸುಬ್ರಹ್ಮಣ್ಯ:ಕೆ ಎಸ್ ಎಸ್ ಕಾಲೇಜ್ ವತಿಯಿಂದ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆ ಕಾರ್ಯಕ್ರಮ Read More »

ಸುಳ್ಯ: ಕೋವಿಯಿಂದ ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ!?

ಸಮಗ್ರ ನ್ಯೂಸ್: ಕೋವಿಯಿಂದ ತಾನೇ ಗುಂಡು ಹೊಡೆದುಕೊಂಡು ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ‌ ಉಬರಡ್ಕದಲ್ಲಿ ನಡೆದಿದೆ. ಮೃತ ಯುವಕನನ್ನು ಅರಂತೋಡು ಗ್ರಾಮದ ರವಿ ಎಂದು ಗುರುತಿಸಲಾಗಿದೆ. ಈತ ಉಬರಡ್ಕ ಗ್ರಾಮದ ಬೆಳ್ರಂಪಾಡಿ‌ ಎಂಬಲ್ಲಿನ ಗುಡ್ಡದಲ್ಲಿ ಕೋವಿಯಿಂದ ಗುಂಡು‌ ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಲಾಗಿದೆ. ಬೆಳ್ರಂಪಾಡಿಯ ಮನೆಯೊಂದರಲ್ಲಿ ರವಿ ಕೆಲಸಮಯದಿಂದ ಕೆಲಸಕ್ಕಿದ್ದು ಕುಡಿತದ ಚಟ ಹೊಂದಿದ್ದ ಎನ್ನಲಾಗಿದೆ. ಕಳೆದ ರಾತ್ರಿ ಕೋವಿ ಹಿಡಿದು ಗುಡ್ಡಕ್ಕೆ ಹೋಗಿದ್ದ ರವಿ ಅಲ್ಲಿ‌ ತಲೆಗೆ ಗುಂಡು ಹೊಡೆದುಕೊಂಡಿದ್ದಾನೆ

ಸುಳ್ಯ: ಕೋವಿಯಿಂದ ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ!? Read More »

ಪಂಜ: ಪಂಚಶ್ರೀ ಜೆಸಿಐ ವತಿಯಿಂದ ಗದ್ದೆನಾಟಿ

ಸಮಗ್ರ ನ್ಯೂಸ್: ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಪಂಜದಲ್ಲಿ ಜೇಸಿಐ ಪಂಜ ಪಂಚಶ್ರೀಯ ಬೆಳ್ಳಿ ಹಬ್ಬ ಸಂಭ್ರಮದ ಸವಿನೆನಪಿಗಾಗಿ ದಾನಿಗಳಿಂದ ದೇವಳದ ಗದ್ದೆಯಲ್ಲಿ ಎರಡನೇ ವರ್ಷದ ಸಾಗುವಳಿ ಮಾಡಲಾಯಿತು. ಜೇಸಿಐ ಪಂಜ ಪಂಚಶ್ರೀ ಹಾಗೂ ಶ್ರೀ ಪರಿವಾರ ಪಂಚಲಿಗೇಶ್ವರ ದೇವಸ್ಥಾನದ ಜಂಟಿ ಆಶ್ರಯದಲ್ಲಿ ದೇವಳದ ಗದ್ದೆಗೆ ತೆರಳಿ ನಾಟಿ ಮಾಡಲಾಯಿತು. ಜೇಸಿಐ ಪಂಜ ಪಂಚಶ್ರೀಯ ಪೂರ್ವ ಅಧ್ಯಕ್ಷರಾದ ಜೇಸಿ.ತೀರ್ಥಾನಂದ ಕೊಡಂಕಿರಿಯವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ನಡೆನಡೆಯಿತು. ಈ ಸಂದರ್ಭದಲ್ಲಿ ಪಂಜ ಜೇಸಿಐ ಪಂಚಶ್ರೀಯ ರಜತ ವರ್ಷದ ಅಧ್ಯಕ್ಷ

ಪಂಜ: ಪಂಚಶ್ರೀ ಜೆಸಿಐ ವತಿಯಿಂದ ಗದ್ದೆನಾಟಿ Read More »

ಕಡಬ: ಆಡನ್ನು ನುಂಗಲು ಯತ್ನಿಸಿದ ಹೆಬ್ಬಾವು !

ಸಮಗ್ರ ನ್ಯೂಸ್: ಭಾರೀ ಗಾತ್ರದ ಹೆಬ್ಬಾವು, ಆಡೊಂದನ್ನು ನುಂಗಲು‌ ಸುಮಾರು ಒಂದು ತಾಸು ಸೆಣಸಿ ವಿಫಲ ಯತ್ನ ನಡೆಸಿದ ಘಟನೆ ಮಂಗಳವಾರ ಸಂಜೆ ಕಡಬ ತಾಲೂಕಿನ ಐತ್ತೂರು ಗ್ರಾಮದ ಬ್ರಾಂತಿಕಟ್ಟೆ ಕೊಡೆಂಕಿರಿ ಎಂಬಲ್ಲಿ ನಡೆದಿದೆ. ಸ್ಥಳೀಯ ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಸುಮಾರು 45 ಕೆಜಿ ತೂಕದ ಗಂಡು ಆಡು ಹೆಬ್ಬಾವಿನ ಉರುಳಿಗೆ ಸಿಕ್ಕಿ ಉಸಿರುಗಟ್ಟಿ ಪ್ರಾಣ ಬಿಟ್ಟಿದೆ. ಆಡಿನ ತಲೆಯ ಭಾಗವನ್ನು ಹೆಬ್ಬಾವು ನುಂಗಿದರೂ ಉಳಿದ ಭಾಗವನ್ನು ನುಂಗಲು ಸಾಧ್ಯವಾಗದೆ ಸೋತು ಸತ್ತ ಆಡನ್ನು ಸ್ಥಳದಲ್ಲೇ

ಕಡಬ: ಆಡನ್ನು ನುಂಗಲು ಯತ್ನಿಸಿದ ಹೆಬ್ಬಾವು ! Read More »

ನೀವು ಪಾನಿಪುರಿ ಪ್ರಿಯರೇ? ಹಾಗಿದ್ರೆ ಇದನ್ನ ತಪ್ಪದೇ ಓದಿ!

ಸಮಗ್ರ ನ್ಯೂಸ್:ಗೋಲ್ಗಪ್ಪ ಅಥವಾ ಪಾನಿಪುರಿ ದೇಶದ ಅತ್ಯಂತ ಪ್ರಿಯ ಆಹಾರವಾಗಿದೆ. ಇದಕ್ಕೆ ರಸ್ತೆ ಬದಿಯಲ್ಲಿ ಎಲ್ಲಿಲ್ಲದ ಬೇಡಿಕೆ ಇದ್ದು, ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಗೋಲ್ಗಪ್ಪದ ಹೆಸರು ಕೇಳಿದರೆ ಅನೇಕರ ಬಾಯಲ್ಲಿ ನೀರುರೂರುದು ಸಹಜ. ಇದು ಆಹಾರದ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಪಾನಿಪುರಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದಾಗುವಷ್ಟು ಕೆಟ್ಟದಾಗುವ ಸಾಧ್ಯತೆಗಳು ಕೂಡ ಇದೆ. ಹಾಗಾದರೆ ಗೋಲ್ಗಪ್ಪ ತಿನ್ನುವುದರಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ನಿಮಗೆ ಗೊತ್ತಾ? ಹಾಗಿದ್ರೆ ಇದನ್ನು ಪೂರ್ತಿ ಓದಿ. ಆಹಾರ ತಜ್ಞರ ಪ್ರಕಾರ

ನೀವು ಪಾನಿಪುರಿ ಪ್ರಿಯರೇ? ಹಾಗಿದ್ರೆ ಇದನ್ನ ತಪ್ಪದೇ ಓದಿ! Read More »

ಅಬ್ಬಾ..! ಚಿಕನ್, ಮಟನ್ ರೇಟೂ| ಹಿಂಗಾದ್ರೆ ನಾನ್ ವೆಜ್ ತಿನ್ನೋದೆಂಗೆ!?

ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಿಂದೆಂದೂ ಕಾಣದಂತೆ ಮಾಂಸದ ಬೆಲೆ ಏರಿಕೆಯಾಗುತ್ತಲೇ ಇದ್ದು, ಬಾಡೂಟ ಪ್ರಿಯರಿಗೆ ಕೋಳಿ ಮಾಂಸ ಈಗ ಬಲು ದುಬಾರಿಯಾಗಿದೆ. ಬೇಸಿಗೆಯಲ್ಲಿ ಉತ್ಪಾದನೆ ಕಡಿಮೆ ಹಾಗೂ ಬೇಡಿಕೆ ಹೆಚ್ಚು ಜೊತೆಗೆ ಕೋಳಿ ಆಹಾರದ ಬೆಲೆ ಹೆಚ್ಚಳದ ಪರಿಣಾಮ ಚಿಕನ್ ಬೆಲೆ ಗಗನಕ್ಕೇರಿದ್ದು, ಮಾಂಸ ಪ್ರಿಯರಿಗೆ ಬಾರಿ ಹೊರೆಯಾಗಿ ಪರಿಣಮಿಸಿದೆ. ಕೋಳಿ ಮಾಂಸ ಹಾಗೂ ಮೊಟ್ಟೆ ತಿನ್ನುವವರು ಈಗ ಖರೀದಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಚಿಕನ್ ದರವು ಈಗ ಪ್ರತಿ ಕೆಜಿಗೆ 280-300 ತನಕ ಏರಿಕೆಯಾಗಿದೆ. ಪ್ರತಿ

ಅಬ್ಬಾ..! ಚಿಕನ್, ಮಟನ್ ರೇಟೂ| ಹಿಂಗಾದ್ರೆ ನಾನ್ ವೆಜ್ ತಿನ್ನೋದೆಂಗೆ!? Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ದ.ಕ ಮತ್ತು ಕೊಡಗಿನ 6 ಕಡೆ ಎನ್ಐಎ ದಾಳಿ

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಎನ್ ಐ ಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಎನ್ ಐ ಎ ದಾಳಿ ನಡೆಸಿದ್ದು, ನಿಷೇಧಿತ ಪಿಎಫ್ಐ ಸಂಘಟನೆ ಕಾರ್ಯಕರ್ತರ ಮನೆ ಮೇಲೂ ದಾಳಿ ನಡೆದಿದೆ. ಒಟ್ಟು 6 ಕಡೆ ಏಕಕಾಲಕ್ಕೆ ಎನ್ ಐ ಎ ಅಧಿಕಾರಿಗಳು ದಾಳಿ ನಡೆಸಿದ್ದು, ಎಲೆಕ್ಟ್ರಾನಿಕ್ ಡಿವೈಸ್ ಸೇರಿದಂತೆ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ದ.ಕ ಮತ್ತು ಕೊಡಗಿನ 6 ಕಡೆ ಎನ್ಐಎ ದಾಳಿ Read More »

ಹಾಸನದಲ್ಲಿ ನಡುಗಿದ ಭೂಮಿ; ಮನೆಯಿಂದ ಹೊರಗೋಡಿದ ಜನತೆ

ಸಮಗ್ರ ನ್ಯೂಸ್: ಹಾಸನ ಜಿಲ್ಲೆಯ ಅರಕಲಗೂಡು ‌ಪಟ್ಟಣ ಸೇರಿದಂತೆ ‌ವಿವಿಧೆಡೆ ಮಂಗಳವಾರ ಬೆಳಿಗ್ಗೆ ಭೂಮಿ ಕಂಪಿಸಿದ್ದು, ಜನರು ಆತಂಕದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಹಾಸನ ಪಟ್ಟಣದಲ್ಲಿ ಕೆಲವು ಕಡೆ ಬೆಳಿಗ್ಗೆ 10.25, ಇನ್ನೂ ಕೆಲವು ಕಡೆ 10.34 ರ ಸಮಯದಲ್ಲಿ ಭೂಮಿ ಕಂಪಿಸಿದೆ. ಜನರಿಗೆ ಭೂಕಂಪನದ ಅನುಭವವಾಗಿದ್ದು, ಗಾಬರಿಯಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದರು. ಭೂಮಿ ಕಂಪಿಸಿದ್ದರಿಂದ ಜನರಲ್ಲಿ ಆತಂಕ ಮನೆ ಮಾಡಿದ್ದು, ಭೂಕಂಪನದ ಅನುಭವದಿಂದ ಮನೆಯ ಹೊರಗಡೆಯೇ ಸ್ಥಳೀಯರು ನಿಂತಿದ್ದರು. ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು,

ಹಾಸನದಲ್ಲಿ ನಡುಗಿದ ಭೂಮಿ; ಮನೆಯಿಂದ ಹೊರಗೋಡಿದ ಜನತೆ Read More »

ಇಂದಿನಿಂದ (ಜೂ.27) ‘ಗೃಹಲಕ್ಷ್ಮಿ’ ಯೋಜನೆಗೆ ಅರ್ಜಿ ಸ್ವೀಕಾರ| ಅರ್ಜಿ ಸಲ್ಲಿಸುವ ‌ಸಂಪೂರ್ಣ ಮಾಹಿತಿ ಇಲ್ಲಿದೆ…

ಸಮಗ್ರ ನ್ಯೂಸ್: ಇಂದಿನಿಂದ (ಜೂನ್ 27) ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು, ಆಗಸ್ಟ್ 17 ಅಥವಾ 18 ರಂದು ಮನೆ ಒಡತಿಯರ ಖಾತೆಗೆ 2 ಸಾವಿರ ರೂ ಹಣ ಜಮಾ ಮಾಡಲಾಗುತ್ತದೆ ಎಂದು ಈಗಾಗಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆಗೆ ಸರ್ಕಾರದ ಸೇವಾಸಿಂಧು ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಭೌತಿಕವಾಗಿ ಅರ್ಜಿ ಸಲ್ಲಿಸಬಹುದು. ಯಾವೆಲ್ಲಾ ದಾಖಲೆಗಳು ಬೇಕು..?1) ರೇಷನ್ ಕಾರ್ಡ್

ಇಂದಿನಿಂದ (ಜೂ.27) ‘ಗೃಹಲಕ್ಷ್ಮಿ’ ಯೋಜನೆಗೆ ಅರ್ಜಿ ಸ್ವೀಕಾರ| ಅರ್ಜಿ ಸಲ್ಲಿಸುವ ‌ಸಂಪೂರ್ಣ ಮಾಹಿತಿ ಇಲ್ಲಿದೆ… Read More »

ವಿಟ್ಲ: ನಿಯಂತ್ರಣ ತಪ್ಪಿ ಪಲ್ಟಿಯಾದ ರಿಕ್ಷಾ| ಪಂಜ ಮೂಲದ ಚಾಲಕ ಸಾವು

ಸಮಗ್ರ ನ್ಯೂಸ್: ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾಗಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ವಿಟ್ಲ ಸಮೀಪದ ಮಾಣಿಲ ತಿರುವಿನಲ್ಲಿ ನಡೆದಿದೆ. ಮೃತ ಆಟೋ ಚಾಲಕನನ್ನು ಸುಬ್ರಹ್ಮಣ್ಯ ಪಂಜ ನಿವಾಸಿ ಸುದರ್ಶನ್ (35) ಎಂದು ಗುರುತಿಸಲಾಗಿದೆ. ಸುದರ್ಶನ್ ಹಾಗೂ ಇನ್ನೋರ್ವ ನಿನ್ನೆ ರಾತ್ರಿ ಮಾಣಿಲ ಬಾವಲಿಮೂಲೆಗೆ ಬರುತ್ತಿದ್ದ ವೇಳೆ ಪಲ್ಟಿಯಾಗಿದ್ದು , ಗಂಭೀರ ಗಾಯಗೊಂಡು ರಿಕ್ಷಾ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆನ್ನಲಾಗಿದೆ. ಆಟೋ ರಿಕ್ಷಾದಲ್ಲಿದ್ದ ಇನ್ನೋರ್ವ ವ್ಯಕ್ತಿಗೆ ಅಲ್ಪ ಸ್ವಲ್ಪ ಗಾಯವಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ವಿಟ್ಲ ಠಾಣೆಗೆ

ವಿಟ್ಲ: ನಿಯಂತ್ರಣ ತಪ್ಪಿ ಪಲ್ಟಿಯಾದ ರಿಕ್ಷಾ| ಪಂಜ ಮೂಲದ ಚಾಲಕ ಸಾವು Read More »