June 2023

ಕಾರಿನ ಚಕ್ರದಂತೆ ರೈಲಿನ ಟೈಯರ್ ಅನ್ನೂ ಬದಲಾಯಿಸ್ತಾರಂತೆ! ಹೇಗೆ ಗೊತ್ತಾ?

ಸಮಗ್ರ ನ್ಯೂಸ್: ನಾವೆಲ್ಲಾ ಸಾಮನ್ಯವಾಗಿ ಬೈಕ್, ಕಾರಿನ ಚಕ್ರಗಳು ಹಾನಿಯಾದಾಗ ಅದನ್ನು ಬದಲಾಯಿಸಲಾಗುತ್ತದೆ ಎಂಬುದನ್ನು ಕೇಳಿರುತ್ತೇವೆ, ಮತ್ತು ನೋಡಿರುತ್ತೇವೆ. ಆದ್ರೆ ರೈಲಿನ ಚಕ್ರವನ್ನು ಸಹ ಚೇಂಜ್ ಮಾಡ್ತಾರೆ ಅನ್ನೋದು ನಿಮಗೆ ಗೊತ್ತಾ? ಹಾಗಿದ್ರೆ ಯಾವರೀತಿ ಚೇಂಜ್ ಮಾಡ್ತಾರೆ ಅನ್ನೋದನ್ನು ತಿಳಿದುಕೊಳ್ಳಬೇಕಾ? ಹಾಗಾದ್ರೆ ಈ ಕೆಳಗಿನ ಮಾಹಿತಿಯನ್ನು ಓದಿ. ಕಾರುಗಳು ಮತ್ತು ಬಸ್‌ಗಳಂತೆ ರೈಲುಗಳಲ್ಲಿ ಸಹ ಕಾಲಕಾಲಕ್ಕೆ ಅಧಿಕಾರಿಗಳು ಸೇವೆ ಸಲ್ಲಿಸುತ್ತಾರೆ. ಅಂದರೆ ಕಂಟೇನರ್‌ನ ಹಾನಿಗೊಳಗಾದ ಭಾಗವನ್ನು ಸರಿಪಡಿಸುತ್ತಾರೆ. ಅದೇ ರೀತಿ ರೈಲಿನ ಚಕ್ರಗಳನ್ನು ಸಹ ಬದಲಾಯಿಸಲಾಗುತ್ತದೆ. ರೈಲುಗಳಲ್ಲಿ […]

ಕಾರಿನ ಚಕ್ರದಂತೆ ರೈಲಿನ ಟೈಯರ್ ಅನ್ನೂ ಬದಲಾಯಿಸ್ತಾರಂತೆ! ಹೇಗೆ ಗೊತ್ತಾ? Read More »

ಕೊಡಗು:ಚುನಾವಣೆಗೆ ಮೊದಲೇ ನಡೆದ ಡಾಮರೀಕರಣ ಕಳಪೆ ಆರೋಪ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜಿಲ್ಲಾ ಪಂಚಾಯಿತಿಯಿಂದ ಚುನಾವಣೆಗೆ ಮೊದಲು ಹಲವು ರಸ್ತೆಗಳನ್ನು ಡಾಮರೀಕರಣ ಮಾಡಿರುತ್ತಾರೆ. ಇದರಲ್ಲಿ ಭಾಗಶಃ ಕಳಪೆ ಕಾಮಗಾರಿಯಿಂದ ಕೂಡಿರುತ್ತದೆ ಇದಕ್ಕೆ ಸಾಕ್ಷಿ ಎಂಬುವಂತೆ ಗೌಡಳ್ಳಿ ಗ್ರಾಮದ ಪುಲಗಿರಿ ದೇವಸ್ಥಾನದ ರಸ್ತೆ 2.50 ಲಕ್ಷ ರಸ್ತೆ ಸಂಪೂರ್ಣವಾಗಿ ಹುಲ್ಲಿನಿಂದ ಕೂಡಿದ್ದು ಡಾಮರೀಕರಣ ಕೆಳಭಾಗದಿಂದ ಹುಲ್ಲು ಬರುತಿದ್ದು ಡಾಮರೀಕರಣ ಎಲ್ಲವೂ ಕಿತ್ತು ಹೋಗುತ್ತಿದೆ. ಹೆಗಳ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ 2.50 ಲಕ್ಷದ ಡಾಮರೀಕರಣ ಆಗಿರುತ್ತದೆ ಈ ರಸ್ತೆ ನಿರ್ಮಾಣವಾದ ಒಂದು ತಿಂಗಳಿನಲ್ಲೇ

ಕೊಡಗು:ಚುನಾವಣೆಗೆ ಮೊದಲೇ ನಡೆದ ಡಾಮರೀಕರಣ ಕಳಪೆ ಆರೋಪ Read More »

ಬ್ಯಾಂಕ್ ಅಧಿಕಾರಿ, ಗುಮಾಸ್ತ ಹುದ್ದೆಗೆ ಅರ್ಜಿ ಅಹ್ವಾನ

ಸಮಗ್ರ ನ್ಯೂಸ್: ಉದ್ಯೋಗಗಳ ಅವಕಾಶ ಕಡಿಮೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಐಬಿಪಿಎಸ್ (IBPS) ವತಿಯಿಂದ ರೀಜನಲ್ ರೂರಲ್ ಬ್ಯಾಂಕ್‍ಗಳಲ್ಲಿ ಖಾಲಿ ಇರುವ 8600 ಕ್ಕೂ ಹೆಚ್ಚು ಕ್ಲರಿಕಲ್ ಮತ್ತು ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ‌ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ. ಜೂನ್, 21 ರವರೆಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ https://ibps.in/ ವೀಕ್ಷಿಸಬಹುದಾಗಿದೆ. ಈಗಾಗಲೇ ಅರ್ಜಿ ಆಹ್ವಾನಿಸಿರುವ ಐಬಿಪಿಎಸ್ ರೀಜನಲ್ ರೂರಲ್ ಬ್ಯಾಂಕ್ ಕ್ಲೆರಿಕಲ್ ಮತ್ತು ಆಫೀಸರ್ಸ್ ಹುದ್ದೆಗಳ ನೇಮಕಾತಿ ಪರೀಕ್ಷೆ ಮತ್ತು

ಬ್ಯಾಂಕ್ ಅಧಿಕಾರಿ, ಗುಮಾಸ್ತ ಹುದ್ದೆಗೆ ಅರ್ಜಿ ಅಹ್ವಾನ Read More »

ಇಂದಿರಾ ಕ್ಯಾಂಟೀನ್ ನಲ್ಲಿ ಅಡುಗೆಗೆ ನೀರು ಸರಬರಾಜು ಮಾಡದ ಮಡಿಕೇರಿ ನಗರಸಭೆ

ಸಮಗ್ರ ನ್ಯೂಸ್:‌ ಮಡಿಕೇರಿ ನಗರದ ಇಂದಿರಾ ಕ್ಯಾಂಟೀನ್ ಗೆ ಜೂ.7ರಂದು ಮಧ್ಯಾಹ್ನ ಸಮಯದಲ್ಲಿ ಊಟಕ್ಕೆ ಹೋದವರಿಗೆ ನಿರಾಸೆಯಾದ ಘಟನೆ ನಡೆದಿದೆ. ಇಲ್ಲಿಯ ಇಂದಿರಾ ಕ್ಯಾಂಟೀನ್ ಗೆ ಬಡವರು ಹಾಗೂ ಕೂಲಿ ಕಾರ್ಮಿಕರು ಊಟಕ್ಕೆ ಬರುತ್ತಿದರು ಆದರೆ ಅವರಿಗೆ ಇಂದು ಊಟವಿಲ್ಲದೆ ಹಾಗೆ ಹಿಂದಿರುಗಿದರು. ಕಾರಣ ಕೇಳಿದರೆ ಇಂದು ಕರೆಂಟ್ ಇಲ್ಲ ಕುಡಿಯಲು ಹಾಗೂ ಅಡುಗೆಗೆ ನೀರಿಲ್ಲ ಎಂಬ ಉತ್ತರ ನೀಡಿದ್ದಾರೆ. ಈ ಬಗ್ಗೆ ಕೊಡಗು ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವಿಗೌಡ ಅವರು ಬಡವರ ಹಸಿವಿನ ಬೆಲೆ ಮಡಿಕೇರಿ

ಇಂದಿರಾ ಕ್ಯಾಂಟೀನ್ ನಲ್ಲಿ ಅಡುಗೆಗೆ ನೀರು ಸರಬರಾಜು ಮಾಡದ ಮಡಿಕೇರಿ ನಗರಸಭೆ Read More »

ಕೇರಳದಲ್ಲಿ ಸರ್ಕಾರದಿಂದ 20 ಲಕ್ಷ ಕುಟುಂಬಗಳಿಗೆ ಉಚಿತ ಇಂಟರ್‌ನೆಟ್‌ ಸೇವೆ

ಸಮಗ್ರ ನ್ಯೂಸ್ : ಕೇರಳವು ತನ್ನದೇ ಸ್ವಂತ ಇಂಟರ್‌ನೆಟ್‌ ಸೇವೆಯನ್ನು ಹೊಂದುವ ಮೂಲಕ ದೇಶದ ಮೊದಲ ಸರ್ಕಾರಿ ಸ್ವಾಮ್ಯದ ಅಂತರ್ಜಾಲ ಸೇವೆ ಒದಗಿಸುವ ರಾಜ್ಯ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ (K-FON)ಗೆ ಸಿಎಂ ಪಿಣರಾಯಿ ವಿಜಯನ್‌ ಚಾಲನೆ ನೀಡಿದ್ದು, ಇದು 1 Gbps ಸ್ಪೀಡ್‌ ಹೊಂದಿದೆ. ಆ ಮೂಲಕ ಸಮಾರು 20 ಲಕ್ಷ ಕುಟುಂಬಗಳಿಗೆ ಉಚಿತ ಇಂಟರ್‌ನೆಟ್‌ ಸೇವೆ ಒದಗಿಸಲಾಗುವುದು. ಜತೆಗೆ 17,412 ಸರ್ಕಾರಿ ಕಚೇರಿಗಳಿಗೆ K-FON ಸಂಪರ್ಕ ನೀಡಲಾಗಿದೆ ಎಂದು ಸಿಎಂ

ಕೇರಳದಲ್ಲಿ ಸರ್ಕಾರದಿಂದ 20 ಲಕ್ಷ ಕುಟುಂಬಗಳಿಗೆ ಉಚಿತ ಇಂಟರ್‌ನೆಟ್‌ ಸೇವೆ Read More »

ಬೆಳ್ತಂಗಡಿ: ವಿಚಾರಣಾಧೀನ ಕೈದಿ ಸಾವು

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ಅಜ್ಜಿಯನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಚಿನ್ನಾಭರಣ ಹಾಗೂ ಹಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಆರೋಪಿ ಅಶೋಕ್ ಇಂದು(ಜೂ.7) ಬೆಳಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಶುಗರ್ ಹಾಗೂ ಟಿ ಬಿ ಕಾಯಿಲೆಯಿಂದ ಬಳಲುತ್ತಿದ್ದ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆತ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾನೆ. ಈತ ಸಾವನ್ನಪ್ಪಿದ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ: ವಿಚಾರಣಾಧೀನ ಕೈದಿ ಸಾವು Read More »

ಗೃಹಲಕ್ಷ್ಮಿ ಯೋಜನೆ ಮಾರ್ಗಸೂಚಿ ಪ್ರಕಟ| ಸುಳ್ಳು ಮಾಹಿತಿ ನೀಡಿದ್ರೆ ಅಸಲು ಬಡ್ಡಿ ವಾಪಾಸ್ ತಗೊಳ್ತಾರೆ ಹುಷಾರ್!!

ಸಮಗ್ರ ನ್ಯೂಸ್: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮೀ ಯೋಜನೆಯ ಮಾರ್ಗಸೂಚಿ ಪ್ರಕಟವಾಗಿದ್ದು ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿದ ಮಹಿಳೆಯರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಕುಟುಂಬದ ಯಜಮಾನಿ ಎಂದು ಬಿಪಿಎಲ್, ಎಪಿಎಲ್ ಕಾರ್ಡ್ ನಲ್ಲಿ ನಮೂದಾಗಿರುವುದು ಕಡ್ಡಾಯವಾಗಿದೆ. ಕಾರ್ಡ್ ನಲ್ಲಿ ನಮೂದಾಗಿರುವ ಯಜಮಾನಿಗೆ ಮಾತ್ರ 2000 ರೂ. ನೀಡಲಾಗುವುದು. ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಮಹಿಳೆಯರಿದ್ದರೆ ಒಬ್ಬರಿಗೆ ಮಾತ್ರ ಹಣ ನೀಡಲಾಗುವುದು. ಯಜಮಾನಿ, ಪತಿ ಆದಾಯ ತೆರಿಗೆ ಪಾವತಿದಾರರು, ಯಜಮಾನಿ ಅಥವಾ ಯಜಮಾನ ಜಿಎಸ್‌ಟಿ ಪಾವತಿದಾರರಾಗಿದ್ದರೆ

ಗೃಹಲಕ್ಷ್ಮಿ ಯೋಜನೆ ಮಾರ್ಗಸೂಚಿ ಪ್ರಕಟ| ಸುಳ್ಳು ಮಾಹಿತಿ ನೀಡಿದ್ರೆ ಅಸಲು ಬಡ್ಡಿ ವಾಪಾಸ್ ತಗೊಳ್ತಾರೆ ಹುಷಾರ್!! Read More »

ಸುಳ್ಯ : ಸರಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ವಾರ್ಷಿಕ ಕ್ರೀಡಾಕೂಟ

ಸಮಗ್ರ ನ್ಯೂಸ್: ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ವಾರ್ಷಿಕ ಕ್ರೀಡಾಕೂಟವು ಜೂ-೬ರಂದು ಕಾಲೇಜಿನ ಮೈದಾನದಲ್ಲಿ ನಡೆಯಿತು. ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕರಾದ ಶ್ರೀ ನಟರಾಜ ಎಂ ಎಸ್ ಕ್ರೀಡಾಕೂಟ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ವಹಿಸಿದ್ದರು. ವೇದಿಕೆಯಲ್ಲಿ ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ. ಜಯಶ್ರೀ ಕೆ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಮಚಂದ್ರ ಡಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕು.ಪ್ರಣಮ್ಯ ಪ್ರಾರ್ಥಿಸಿದರು. ಉಪನ್ಯಾಸಕರಾದ ರಾಮಚಂದ್ರ ಡಿ ಸ್ವಾಗತಿಸಿ, ಧನರಾಜ್ ಕುಮಾರ್

ಸುಳ್ಯ : ಸರಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ವಾರ್ಷಿಕ ಕ್ರೀಡಾಕೂಟ Read More »

ಸುಳ್ಯ ತಾಲೂಕು ಆಸ್ಪತ್ರೆಗೆ ನೇಮಕಗೊಂಡಿದ್ದ ಯುವ ವೈದ್ಯೆ ಆತ್ಮಹತ್ಯೆ

ಸಮಗ್ರ ನ್ಯೂಸ್: ಸುಳ್ಯ ತಾಲೂಕು ಆಸ್ಪತ್ರೆಗೆ ನೇಮಕಗೊಂಡಿದ್ದ ಯುವ ವೈದ್ಯೆಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡು ಜಿಲ್ಲೆಯ ಬದಿಯಡ್ಕ ಸಮೀಪದ ನೀರ್ಚಾಲಿನಲ್ಲಿ ನಡೆದಿದೆ. ಎಂಬಿಬಿಎಸ್‌ ಕೋರ್ಸ್‌ ಪೂರ್ತಿಗೊಳಿಸಿ ಗ್ರಾಮೀಣ ಸೇವೆನಡೆದಿದೆ ಕಾರ್ಯ ನಿರ್ವಹಿಸುತ್ತಿದ್ದ ಕನ್ಯಪ್ಪಾಡಿ ನಿವಾಸಿ ನಿವೃತ್ತ ಕ್ಯಾಂಪ್ಕೋ ಉದ್ಯೋಗಿ ಗೋಪಾಲಕೃಷ್ಣ ಭಟ್‌ ಅವರ ಪುತ್ರಿ ಯುವ ವೈದ್ಯೆ ಡಾ. ಪಲ್ಲವಿ ಜಿ.ಕೆ. (25) ಎಂದು ಗುರುತಿಸಲಾಗಿದೆ. ಇವರು ಜೂ. 5ರಂದು ರಾತ್ರಿ ಊಟ ಮಾಡಿ ನಿದ್ದೆ ಮಾಡಿದವರು ಬೆಳಗ್ಗೆ ಎದ್ದಿರಲಿಲ್ಲ. ಇದರಿಂದ ಮನೆಯವರು ಕೊಠಡಿಯ

ಸುಳ್ಯ ತಾಲೂಕು ಆಸ್ಪತ್ರೆಗೆ ನೇಮಕಗೊಂಡಿದ್ದ ಯುವ ವೈದ್ಯೆ ಆತ್ಮಹತ್ಯೆ Read More »

ಬೆಳ್ತಂಗಡಿ ಠಾಣೆಯಿಂದ ಸಿ.ಐ. ಸತ್ಯನಾರಾಯಣ ಅಲ್ದೂರಿಗೆ

ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಆಲ್ದೂರಿನಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದ ಸತ್ಯನಾರಾಯಣ ಅವರು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮತ್ತೆ ಅಲ್ದೂರಿಗೆ ವರ್ಗಾವಣೆಗೊಂಡಿದ್ದಾರೆ. ಸತ್ಯನಾರಾಯಣ ಅವರು ವೃತ್ತ ನಿರೀಕ್ಷಕ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿ ಆಲ್ದೂರಿಗೆ ತೆರಳಿದ್ದಾರೆ‌. ಇಲಾಖಾ ಸಿಬ್ಬಂದಿಗಳು ಅವರನ್ನು ಠಾಣೆಯಲ್ಲಿ‌ ಗೌರವಿಸಿದರು. ಬೆಳ್ತಗಂಡಿ ಪೊಲೀಸ್ ಠಾಣೆಗೆ ನೂತನ ಇನ್ ಸ್ಪೆಕ್ಟರ್ ಆಗಿ ನಾಗೇಶ್ ಕದ್ರಿ ನೇಮಕಗೊಳ್ಳುವ ಸಾಧ್ಯತೆಯಿದೆ‌ ಎಂದು ತಿಳಿದು ಬಂದಿದೆ.

ಬೆಳ್ತಂಗಡಿ ಠಾಣೆಯಿಂದ ಸಿ.ಐ. ಸತ್ಯನಾರಾಯಣ ಅಲ್ದೂರಿಗೆ Read More »