June 2023

ವಾಯುಭಾರ ಕುಸಿತ| ಜೂ. 15ರವರೆಗೆ ಭಾರೀ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಸಂಭವಿಸಿದ ಪರಿಣಾಮ ಇಂದಿನಿಂದ ಜೂನ್​ 15ರವರೆಗೂ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಅತ್ಯಧಿಕ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಉಳಿದಂತೆ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ,ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, […]

ವಾಯುಭಾರ ಕುಸಿತ| ಜೂ. 15ರವರೆಗೆ ಭಾರೀ ಮಳೆ ಸಾಧ್ಯತೆ Read More »

‘ಶಕ್ತಿ’ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ| ಇಂದಿನಿಂದ ಮಹಿಳೆಯರಿಗೆ ಬಸ್ಸ್ ನಲ್ಲಿ ರಾಜ್ಯಾದ್ಯಂತ ಉಚಿತ ಪ್ರಯಾಣ

ಸಮಗ್ರ ನ್ಯೂಸ್: ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ವಿಧಾನಸೌಧ ಮುಂಭಾಗ ಶಕ್ತಿ ಯೋಜನೆ ಉದ್ಘಾಟನಾ ಸಮಾರಂಭ ನಡೆಯಿತು. ಇಂದಿನಿಂದ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣವಿರುತ್ತದೆ. ಉಚಿತ ಪ್ರಯಾಣಕ್ಕೆ ಬಿಪಿಎಲ್​​, ಎಪಿಎಲ್​ ಎಂಬ ನಿಯಮವಿಲ್ಲ. ಯಾವುದಾದರೂ ಐಡಿ ತೋರಿಸಿದರೆ ಪ್ರಯಾಣ ಮಾಡಬಹುದು. ಸ್ಮಾರ್ಟ್​ ಕಾರ್ಡ್​ ಮಾಡಿಸಲು ಯಾರೂ ದುಡ್ಡು ಕೊಡಬೇಕಿಲ್ಲ. ಸ್ಮಾರ್ಟ್ ಕಾರ್ಡ್​​ ಮಾಡಿಸಿಕೊಳ್ಳಲು 3 ತಿಂಗಳ ಕಾಲಾವಕಾಶವಿದೆ. ಶೇ.90 ಕ್ಕಿಂತ ಹೆಚ್ಚು ಬಸ್​​ ಗಳಲ್ಲಿ ರಾಜ್ಯದ ಯಾವುದೇ ಮೂಲೆಗೆ ಮಹಿಳೆಯರು ಹೋಗಬಹುದು

‘ಶಕ್ತಿ’ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ| ಇಂದಿನಿಂದ ಮಹಿಳೆಯರಿಗೆ ಬಸ್ಸ್ ನಲ್ಲಿ ರಾಜ್ಯಾದ್ಯಂತ ಉಚಿತ ಪ್ರಯಾಣ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗ್ರಹಗತಿಗಳ ಆಧಾರದ ಮೇಲೆ ಜೂನ್‌ 11ರಿಂದ ಜೂನ್ 18ರವರೆಗಿನ ವಾರ ಭವಿಷ್ಯ ನೋಡುವುದಾದರೆ ಈ ವಾರ ಕೆಲವೊಂದು ರಾಶಿಯವರಿಗೆ ಸೂಪರ್ ಆಗಿದೆ, ಇನ್ನು ಕೆಲವು ರಾಶಿಯವರು ಸ್ವಲ್ಪ ಮುನ್ನೆಚ್ಚರಿಕೆವಹಿಸಿ. ಈ ವಾರ ನಿಮ್ಮ ರಾಶಿಗೆ ಹೇಗಿರಲಿದೆ ಎಂದು ನೋಡೋಣ: ಮೇಷ: ಜೂನ್ ತಿಂಗಳ ಮೂರನೇ ವಾರವು ಗ್ರಹಗತಿಗಳು ಹೆಚ್ಚು ಬದಲಾಗುವುದಿಲ್ಲ. ರಾಶ್ಯಾಧಿಪತಿ ಕುಜನು ಚತುರ್ಥದಲ್ಲಿ ಇದ್ದಾನೆ. ಜೊತೆಗೆ ಶುಕ್ರನ ಯೋಗವೂ ಇದೆ. ಮನೆಯಲ್ಲಿ ಸ್ವಲ್ಪ ನೆಮ್ಮದಿಯು ಇರಲಿದೆ. ಕುಜನು ನೀಚಸ್ಥಾನಕ್ಕೆ ಹೋಗಿದ್ದರಿಂದ ಸ್ವಲ್ಪ ಭೂಮಿಯ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಎನ್ಎಸ್ ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸವಾದ್ ಸುಳ್ಯ ನೇಮಕ

ಸಮಗ್ರ ನ್ಯೂಸ್: ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸವಾದ್ ಸುಳ್ಯ ಅವರನ್ನು ನೇಮಕಗೊಳಿಸಲಾಗಿದೆ. ಸುಳ್ಯದ ಗಾಂಧಿನಗರದ ಸವಾದ್ ಶಾಲಾ ದಿನಗಳಲ್ಲೇ ಕಾಂಗ್ರೆಸ್ ಬಾಲ ಸೇವಾದಳದಲ್ಲಿ ಸಕ್ರಿಯರಾಗಿದ್ದವರು.ಸುಳ್ಯದ ಕೆವಿಜಿ ನೆಹರೂ ಮೆಮೋರಿಯಲ್ ಕಾಲೇಜ್‌ನಲ್ಲಿ ಪಿಯುಸಿ ಓದುತ್ತಿರುವಾಗಲೇ ಎನ್‌ಎಸ್‌ಯುಐ ವಿದ್ಯಾರ್ಥಿ ಘಟಕಧ ಅಧ್ಯಕ್ಷರಾಗಿ, ಸುಳ್ಯ ನಗರ ಘಟಕದ ಅಧ್ಯಕ್ಷರಾಗಿ, ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ, ಸರ್ವ ಕಾಲೇಜು ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ರಾಜ್ಯ ಕಾರ್ಯದರ್ಶಿಯಾಗಿ, ದ.ಕ.ಜಿಲ್ಲಾ ಸಮಿತಿಯ ಸಂಚಾಲಕರಾಗಿ, ಎನ್‌ಎಸ್‌ಯುಐ ದ.ಕ. ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ದ.ಕ. ಜಿಲ್ಲಾಧ್ಯಕ್ಷ ರಾಗಿಯೂ

ಎನ್ಎಸ್ ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸವಾದ್ ಸುಳ್ಯ ನೇಮಕ Read More »

ಗುಂಡ್ಯ: ನಿಯಂತ್ರಣ ತಪ್ಪಿ ಹೊಳೆಗೆ ಉರುಳಿದ ಕಾರು| ಓರ್ವ ಸಾವು; ಮತ್ತೊಬ್ಬ ಗಂಭೀರ

ಸಮಗ್ರ ನ್ಯೂಸ್: ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಎರ್ಟಿಗಾ ಕಾರು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ರಸ್ತೆ ಬದಿಯ ಹೊಳೆಗೆ ಉರುಳಿ ಬಿದ್ದ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಹೊಸೂರು ನಿವಾಸಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಅಶ್ವಿನಿ ಆಂಬ್ಯುಲೆನ್ಸ್ ಮೂಲಕ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ನೀರಿನಲ್ಲಿ ಮುಳುಗಿದೆ ಎಂದು ತಿಳಿದುಬಂದಿದೆ.

ಗುಂಡ್ಯ: ನಿಯಂತ್ರಣ ತಪ್ಪಿ ಹೊಳೆಗೆ ಉರುಳಿದ ಕಾರು| ಓರ್ವ ಸಾವು; ಮತ್ತೊಬ್ಬ ಗಂಭೀರ Read More »

ಇರಲಾರದೆ ಇರುವೆ ಬಿಟ್ಕೊಂಡ ಸುಳ್ಯ ಕಾಂಗ್ರೆಸ್| ಪಕ್ಷ ವಿರೋಧಿ ಚಟುವಟಿಕೆ ಆರೋಪಿಸಿ 17 ಮಂದಿ ಅಮಾನತು

ಸಮಗ್ರ ನ್ಯೂಸ್: 2023ರ ವಿಧಾನಸಭಾ ಚುನಾವಣೆಯ ಸಂದರ್ಭ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿದ್ದಾರೆಂಬ ಕಾರಣಕ್ಕೆ ಕೆಪಿಸಿಸಿ ಸಂಯೋಜಕ ನಂದಕುಮಾರ್ ಮಡಿಕೇರಿ, ಕೆಪಿಸಿಸಿ ಮುಖಂಡ ಎಂ. ವೆಂಕಪ್ಪ ಗೌಡ, ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಳ್ಳೇರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಶಿಫಾರಸ್ಸು ಮಾಡಿದೆ. ಅಲ್ಲದೇ ಸುಳ್ಯ ಮತ್ತು ಕಡಬ ಸೇರಿ ಸುಳ್ಯ ವಿಧಾನ ಸಭಾ ಕ್ಷೇತ್ರದ 17 ಮಂದಿ ಕಾಂಗ್ರೆಸ್ ಮುಖಂಡರನ್ನು ಅಮಾನತುಗೊಳಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಆದೇಶ ಮಾಡಿದೆ.

ಇರಲಾರದೆ ಇರುವೆ ಬಿಟ್ಕೊಂಡ ಸುಳ್ಯ ಕಾಂಗ್ರೆಸ್| ಪಕ್ಷ ವಿರೋಧಿ ಚಟುವಟಿಕೆ ಆರೋಪಿಸಿ 17 ಮಂದಿ ಅಮಾನತು Read More »

ನಾಳೆಯಿಂದ ರಾಜ್ಯಾದ್ಯಂತ ‘ಶಕ್ತಿ’ ಯೋಜನೆ‌ ಅಧಿಕೃತ ಜಾರಿ| ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ

ಸಮಗ್ರ ನ್ಯೂಸ್: ರಾಜ್ಯ ಸರಕಾರದ ೫ ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ನಾಳೆಯಿಂದಲೇ ಶುರುವಾಗಲಿದ್ದು, ಸ್ಟಿಕ್ಕರ್ ಇರುವ ಬಸ್ ಗಳಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸದ್ಯ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಬೇಡ.ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದು. ಆದರೆ 3 ತಿಂಗಳ ಬಳಿಕ ಸ್ಮಾರ್ಟ್ ಕಾರ್ಡ್ ಕಡ್ಡಾಯ. ಮೂರು ತಿಂಗಳ ಒಳಗಾಗಿ ಉಚಿತ ಪ್ರಯಾಣ ಮಾಡುವ ಮಹಿಳೆಯರು ಸ್ಮಾರ್ಟ್ ಕಾರ್ಡ್ ಪಡೆದಿರಬೇಕು

ನಾಳೆಯಿಂದ ರಾಜ್ಯಾದ್ಯಂತ ‘ಶಕ್ತಿ’ ಯೋಜನೆ‌ ಅಧಿಕೃತ ಜಾರಿ| ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ Read More »

ಬೆಳ್ತಂಗಡಿ: ಸಚಿವ ಮಧು ಬಂಗಾರಪ್ಪರವರನ್ನು ಭೇಟಿ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ|ಶಾಲೆಗಳಿಗೆ ಮೂಲಭೂತ ಸೌಕರ್ಯ, ಶಿಕ್ಷಕರ ಕೊರತೆಯ ಬಗ್ಗೆ ಸಚಿವರಿಗೆ ಮನವಿ

ಸಮಗ್ರನ್ಯೂಸ್: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪರವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ಮಾಡಿದರು. ಈ ವೇಳೆ ತಾಲೂಕಿನ ಸರಕಾರಿ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಒದಗಿಸಿಕೊಡುವ ಬಗ್ಗೆ ಹಾಗೂ ಕೆಲ ಶಾಲೆಗಳಲ್ಲಿ ಮುಖ್ಯೋಪಧ್ಯಾಯರು, ಶಿಕ್ಷಕರು ದೈಹಿಕ ಶಿಕ್ಷಕರ ಕೊರತೆಯ ಬಗ್ಗೆ ಸಚಿವರಿಗೆ ಮನವಿ ನೀಡಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಪೆರ್ನಾಂಡಿಸ್ ಉಪಸ್ಥಿತರಿದ್ದರು.

ಬೆಳ್ತಂಗಡಿ: ಸಚಿವ ಮಧು ಬಂಗಾರಪ್ಪರವರನ್ನು ಭೇಟಿ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ|ಶಾಲೆಗಳಿಗೆ ಮೂಲಭೂತ ಸೌಕರ್ಯ, ಶಿಕ್ಷಕರ ಕೊರತೆಯ ಬಗ್ಗೆ ಸಚಿವರಿಗೆ ಮನವಿ Read More »

ಬೆಳ್ತಂಗಡಿ: ಮಳೆಯಿಂದಾಗಿ ಚಾಲಕರ ಹತೋಟಿ ತಪ್ಪಿ ಸರಣಿ ವಾಹನ ಪಲ್ಟಿ

ಸಮಗ್ರನ್ಯೂಸ್: ಕೊಟ್ಟಿಗೆಹಾರ ಕಡೆಯಿಂದ ಉಜಿರೆಯತ್ತ ಸಂಚರಿಸುತ್ತಿದ್ದ ಟೆಂಪೋ ಟ್ರಾವೆಲರ್ ಮತ್ತು ತರಕಾರಿ ಸಾಗಾಟದ ವಾಹನ ಚಾರ್ಮಾಡಿ ಪೇಟೆಯಲ್ಲಿ ಪಲ್ಟಿಯಾದ ಘಟನೆ ಜೂ.10 ರಂದು ನಡೆದಿದೆ. ಮಧ್ಯಾಹ್ನದ ವೇಳೆಗೆ ಅಂಗಡಿಯೊಂದರ ಮುಂಭಾಗ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಟ್ರಾವೆಲರ್ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಟಿಟಿ ಅಂಗಡಿಯಿಂದ ಅನತಿ ದೂರದಲ್ಲಿ ಪಲ್ಟಿಯಾದ ಕಾರಣ ಹೆಚ್ಚಿನ ಅನಾಹುತ ಉಂಟಾಗುವುದು ತಪ್ಪಿದೆ. ಈ ಘಟನೆ ನಡೆದ ಕೊಂಚ ಹೊತ್ತಿನಲ್ಲಿ ಇಲ್ಲಿಂದ 100ಮೀ. ಮುಂಭಾಗದಲ್ಲಿ ತರಕಾರಿ ಸಾಗಾಟದ ವಾಹನ ರಸ್ತೆ ಬದಿಗೆ ಜಾರಿ ಚರಂಡಿಗೆ

ಬೆಳ್ತಂಗಡಿ: ಮಳೆಯಿಂದಾಗಿ ಚಾಲಕರ ಹತೋಟಿ ತಪ್ಪಿ ಸರಣಿ ವಾಹನ ಪಲ್ಟಿ Read More »

ಬೆಳ್ತಂಗಡಿ: ಸೇತುವೆ ಅಡಿಯಲ್ಲಿ ಎರಡು ಕಾಣಿಕೆ ಡಬ್ಬಿಗಳು ಪತ್ತೆ..!

ಸಮಗ್ರನ್ಯೂಸ್: ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಬಜಕ್ರೆಸಾಲು ಸೇತುವೆ ಅಡಿಯಲ್ಲಿ ಎರಡು ಕಾಣಿಕೆ ಡಬ್ಬಿಗಳು ಪತ್ತೆಯಾಗಿದೆ. ಜೂ.10 ರಂದು ಮಧ್ಯಾಹ್ನ ಬಜಕ್ರೆಸಾಲು ಎಂಬಲ್ಲಿ ಸೇತುವೆಯ ಅಡಿ ಭಾಗದಲ್ಲಿ ಸ್ಥಳೀಯ ನಿವಾಸಿ ರಾಜು ಅವರು ಕಲ್ಲಿನ ಮೇಲೆ ಇರುವ ಪ್ಲಾಸ್ಟಿಕ್ ಗೋಣಿಗಳನ್ನು ಗಮನಿಸಿ ಹತ್ತಿರ ಹೋಗಿ ನೋಡಿದಾಗ ಎರಡು ಸ್ಟೀಲ್ ಡಬ್ಬಗಳು ಪತ್ತೆಯಾಗಿವೆ. ಈ ಕುರಿತು ಅವರು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆಯವರಿಗೆ ತಿಳಿಸಿದ್ದು, ಅವರು ಪೊಲೀಸ್‌ಗೆ ಮಾಹಿತಿ ನೀಡಿದ್ದಾರೆ. ಕಳೆದ ರಾತ್ರಿ ಕಾಣಿಕೆ

ಬೆಳ್ತಂಗಡಿ: ಸೇತುವೆ ಅಡಿಯಲ್ಲಿ ಎರಡು ಕಾಣಿಕೆ ಡಬ್ಬಿಗಳು ಪತ್ತೆ..! Read More »