June 2023

ಕರೆಂಟ್ ಬಿಲ್‌ ಹೆಚ್ಚಾಗಲು‌ ನಮ್ಮ ಸರ್ಕಾರ ಕಾರಣವಲ್ಲ – ಗೃಹ ಸಚಿವ ಪರಮೇಶ್ವರ್

ಸಮಗ್ರ ನ್ಯೂಸ್: ನಮ್ಮ ಸರ್ಕಾರ ಕರೆಂಟ್​ ಬಿಲ್​ ಜಾಸ್ತಿ ಮಾಡಿಲ್ಲ. ಹಿಂದಿನ ಸರ್ಕಾರದಲ್ಲಿಯೇ ವಿದ್ಯುತ್​ ದರ ಏರಿಕೆ ಮಾಡಲಾಗಿತ್ತು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್​ ಹೇಳಿದ್ದಾರೆ. ತುಮಕೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್​ ವಿದ್ಯುತ್​ ಬಿಲ್ ಏರಿಕೆ ಮಾಡಿದೆ ಎಂದು ಕೆಲವರು ಸುಮ್ಮನೆ ಕತೆ ಕಟ್ಟುತ್ತಿದ್ದಾರೆ ಎಂದು ಹೇಳಿದ್ದಾರೆ ಕರೆಂಟ್​ ಬಿಲ್​ ಜಾಸ್ತಿ ಬರೋಕೆ ನಮ್ಮ ಸರ್ಕಾರ ಕಾರಣವಲ್ಲ. ನೀವು ಯುನಿಟ್​ ಜಾಸ್ತಿ ಬಳಕೆ ಮಾಡಿದ್ದರೆ ನೀವೇ ಬಿಲ್​ ಕಟ್ಟಬೇಕು . ಹಿಂದಿನ ಸರ್ಕಾರ […]

ಕರೆಂಟ್ ಬಿಲ್‌ ಹೆಚ್ಚಾಗಲು‌ ನಮ್ಮ ಸರ್ಕಾರ ಕಾರಣವಲ್ಲ – ಗೃಹ ಸಚಿವ ಪರಮೇಶ್ವರ್ Read More »

ಬರೋಬ್ಬರಿ 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಪತ್ತೆಯಾದ ಮಕ್ಕಳು| ಅಷ್ಟು ದಿನ ಬದುಕಿದ್ದೇ ರೋಚಕ..!

ಸಮಗ್ರ ನ್ಯೂಸ್: ಅಮೆಜಾನ್‌ ಪ್ರಾಂತ್ಯದ ಅರರಾಕುವಾರಾದಿಂದ ಸ್ಯಾನ್‌ ಜೋಸ್‌ ಡೆಲ್‌ ಗುವಿಯಾರ್‌ಗೆ ಮೇ 1ರಂದು ಪ್ರಯಾಣ ಬೆಳೆಸಿದ್ದ ಒಂದೇ ಕುಟುಂಬದ 7 ಮಂದಿ ಮತ್ತು ಒಬ್ಬ ಪೈಲಟ್‌ ಇದ್ದ ʼಸೆಸ್ನಾ 206ʼ ಸಣ್ಣ ವಿಮಾನವೊಂದು ಎಂಜಿನ್‌ ವೈಫಲ್ಯಗೊಂಡು ದಟ್ಟ ಕಾಡಿನಲ್ಲಿ ಬಿದ್ದಿತ್ತು. ಈ ಘಟನೆಯಲ್ಲಿ ತಾಯಿ ಮತ್ತು ವಿಮಾನದ ಪೈಲಟ್‌ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕಾರ್ಯಾಚರಣೆ ವೇಳೆ ಕಾಡಿನಲ್ಲಿ ಮಕ್ಕಳ ಹೆಜ್ಜೆ ಗುರುತು, ಅರ್ಧ ತಿಂದ ಹಣ್ಣುಗಳು ಸೇರಿದಂತೆ ಹಲವು ಕುರುಹುಗಳು ಪತ್ತೆಯಾಗಿದ್ದು, ಹೀಗಾಗಿ ಮಕ್ಕಳು ಬದುಕಿರುವ ಸುಳಿವು

ಬರೋಬ್ಬರಿ 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಪತ್ತೆಯಾದ ಮಕ್ಕಳು| ಅಷ್ಟು ದಿನ ಬದುಕಿದ್ದೇ ರೋಚಕ..! Read More »

ಚಿಕ್ಕಮಗಳೂರು : ಸಿಡಿಲು ಬಡಿದು ಓರ್ವ ಸಾವು| ನಾಲ್ವರಿಗೆ ಗಾಯ

ಸಮಗ್ರ ನ್ಯೂಸ್: ಸಿಡಿಲು ಬಡಿದು ಓರ್ವ ಸಾವನಪ್ಪಿದ್ದು ನಾಲ್ವರಿಗೆ ಗಾಯವಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿಪುರದಲ್ಲಿ ಸಂಭವಿಸಿದೆ. ಮೃತರನ್ನು ತರೀಕೆರೆ ತಾಲೂಕಿನ ಬಾವಿಕೆರೆಯ ಗಂಜೀಗೆರೆ ಮೂಲದ ವ್ಯಕ್ತಿ ಮುಖೇಶ್ (40) ಎಂದು ಗುರುತಿಸಲಾಗಿದೆ. ಈತ ದೇವಸ್ಥಾನಕ್ಕೆ ಆಗಮಿಸಿ ಹೊರಾಂಗಣದಲ್ಲಿ ನಿಂತಿದ್ದಾಗ ಸಿಡಿಲು ಬಡಿದಿದೆ ಎನ್ನಲಾಗಿದೆ. ಈ ವೇಳೆ ಜೊತೆಗಿದ್ದ ನಾಲ್ವರಿಗೂ ಸಿಡಿಲು ಬಡಿದಿದ್ದ ಗಾಯಳುಗಳಿಗೆ ಕಡೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ವಾಪಸ್ಸು ಕಳುಹಿಸಿದ್ದಾರೆ.

ಚಿಕ್ಕಮಗಳೂರು : ಸಿಡಿಲು ಬಡಿದು ಓರ್ವ ಸಾವು| ನಾಲ್ವರಿಗೆ ಗಾಯ Read More »

ಉಪ್ಪಿನಂಗಡಿ: ಟ್ಯಾಂಕರ್ ಲಾರಿ ಚಾಲಕನ ಮೇಲೆ ಹಲ್ಲೆ; ನಗದು ದೋಚಿ ಪರಾರಿ

ಸಮಗ್ರ ನ್ಯೂಸ್: ಟ್ಯಾಂಕರ್ ಲಾರಿಯನ್ನು ತಡೆದ ತಂಡವೊಂದು ಚಾಲಕನ‌ ಮೇಲೆ ದಾಳಿ ನಡೆಸಿ ನಗದು ದೋಚಿ ಪರಾರಿಯಾಗಿರುವ ಘಟನೆ ಉಪ್ಪಿನಂಗಡಿ ಸಮೀಪದಲ್ಲಿ ನಡೆದಿದೆ. ಸುರತ್ಕಲ್ ನಿವಾಸಿ ಆಸ್ಕರ್ ವಿನ್ಸೆಂಟ್ ಸೋನ್ಸ್ (61) ಹಲ್ಲೆಗೊಳಗಾದ ವ್ಯಕ್ತಿ. ವಿನ್ಸೆಂಟ್ ಕುಳೂರಿನಿಂದ ಟ್ಯಾಂಕರ್ ಲಾರಿಯಲ್ಲಿ ಬರುತ್ತಿದ್ದ ವೇಳೆ ಉಪ್ಪಿನಂಗಡಿ ಬಳಿ ಖಾಸಗಿ ಬಸ್‌ನಿಂದ ಇಳಿದ ವ್ಯಕ್ತಿಯೊಬ್ಬ ಟ್ಯಾಂಕರ್ ನಿಲ್ಲಿಸುವಂತೆ ಸೂಚಿಸಿದ್ದಾನೆ. ಟ್ಯಾಂಕರ್ ನಿಲ್ಲಿಸದೆ ಮುಂದೆ ಹೋದಾಗ ಕಾರೊಂದು ಬಂದು ಲಾರಿಗೆ ಅಡ್ಡ ಹಾಕಿ ಮೂವರು ವ್ಯಕ್ತಿಗಳು ಕಾರಿನಿಂದ ಇಳಿದು ಹಲ್ಲೆ ನಡೆಸಿದ್ದಾರೆ

ಉಪ್ಪಿನಂಗಡಿ: ಟ್ಯಾಂಕರ್ ಲಾರಿ ಚಾಲಕನ ಮೇಲೆ ಹಲ್ಲೆ; ನಗದು ದೋಚಿ ಪರಾರಿ Read More »

ಹನಿಮೂನ್ ಫೋಟೋ ಶೂಟ್ ವೇಳೆ ನಡೆಯಿತು ಅವಘಡ| ಮದುವೆಯಾಗಿ ಹತ್ತೇ ದಿನಕ್ಕೆ ನವದಂಪತಿಯ ದುರಂತ ಸಾವು

ಸಮಗ್ರ ನ್ಯೂಸ್: ಮದುವೆಯಾಗಿ ಹತ್ತು ದಿನಗಳೂ ಆಗಿಲ್ಲ. ಇನ್ನೂ ಮದುವೆ ಸಮಾರಂಭ ಮುಗಿದಿಲ್ಲ. ಅಷ್ಟರಲ್ಲಿ ನವದಂಪತಿ ಇಹಲೋಕ ತ್ಯಜಿಸಿದ್ದಾರೆ. ಇಬ್ಬರೂ ಜೂನ್ 1 ರಂದು ವಿವಾಹವಾಗಿ ಹನಿಮೂನ್‌ಗೆಂದು ಬಾಲಿಗೆ ಹೋಗಿದ್ದರು. ತಮ್ಮ ವೈಯಕ್ತಿಕ ಜೀವನ ಎಂಜಾಯ್‌ ಮಾಡುತ್ತಾ ವೈದ್ಯ ದಂಪತಿ ಸ್ಪೀಡ್ ಬೋಟ್ ರೈಡ್‌ನಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಲು ಸಮುದ್ರಕ್ಕೆ ಇಳಿದಿದ್ದಾರೆ. ಬಹುಶಃ ಇದು ತಮ್ಮ ಕೊನೆಯ ಸವಾರಿ ಎಂದು ಅವರು ಊಹಿಸಿರಲಿಲ್ಲ. ಮೃತ ವೈದ್ಯ ದಂಪತಿಯನ್ನು ಲೋಕೇಶ್ವರನ್ ಮತ್ತು ವಿಭೂಷಣಾ ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಜೂನ್ 1ರಂದು

ಹನಿಮೂನ್ ಫೋಟೋ ಶೂಟ್ ವೇಳೆ ನಡೆಯಿತು ಅವಘಡ| ಮದುವೆಯಾಗಿ ಹತ್ತೇ ದಿನಕ್ಕೆ ನವದಂಪತಿಯ ದುರಂತ ಸಾವು Read More »

ಹೆಬ್ರಿ: ಕಾರು-ಖಾಸಗಿ ಬಸ್ ನಡುವೆ ಭೀಕರ ಅಪಘಾತ| ಇಬ್ಬರು ಶಿಕ್ಷಕರ ದಾರುಣ ಸಾವು

ಸಮಗ್ರ ನ್ಯೂಸ್: ಹೆಬ್ರಿ ಸಮೀಪದ ಸೀತಾನದಿ ಎಂಬಲ್ಲಿ ಬಸ್ಸೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಶಿಕ್ಷಕರು ದಾರುಣವಾಗಿ ಮೃತಪಟ್ಟ ಘಟನೆ ಜೂ.11ರ ಮಧ್ಯಾಹ್ನ ನಡೆದಿದೆ. ಮೃತರನ್ನು ಉಡುಪಿ ಶಿಕ್ಷಣ ಇಲಾಖೆಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ಬಣ್ಣ ಗಾಣಿಗ ಹಾಗೂ ಉಡುಪಿ ಇಂದಿರಾ ನಗರ ಶಾಲೆಯ ದೈಹಿಕ ಶಿಕ್ಷಕ, ಸೋಮಶೇಖರ್ ಎಂದು ಗುರುತಿಸಲಾಗಿದೆ. ಇವರೊಂದಿಗೆ ಕಾರಿನಲ್ಲಿದ್ದ ಶಿಕ್ಷಕ ಸುದರ್ಶನ ಹಾಗೂ ಕಾರು ಚಾಲಕ ಸತೀಶ್ ತೀವ್ರವಾಗಿ ಗಾಯಗೊಂಡಿದ್ದಾರೆ. ಇವರಿಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ದಾವಣಗೆರೆ

ಹೆಬ್ರಿ: ಕಾರು-ಖಾಸಗಿ ಬಸ್ ನಡುವೆ ಭೀಕರ ಅಪಘಾತ| ಇಬ್ಬರು ಶಿಕ್ಷಕರ ದಾರುಣ ಸಾವು Read More »

ಸುಳ್ಯ: ‘ಶಕ್ತಿ’ ಯೋಜನೆಗೆ ಚಾಲನೆ ನೀಡುವ ವೇಳೆ ಕೈ ನಾಯಕರ “ಸ್ವಶಕ್ತಿ” ಪ್ರದರ್ಶನ| ಮತ್ತೊಮ್ಮೆ ಬೀದಿಗೆ ಬಂದ ಕಾಂಗ್ರೆಸ್ ನ ಒಳಜಗಳ

ಸಮಗ್ರ ನ್ಯೂಸ್: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಗೆ ಚಾಲನೆ ನೀಡುವ ವೇಳೆ ಸುಳ್ಯ ಕಾಂಗ್ರೆಸ್ ನಲ್ಲಿ ನಾಯಕರ ಸ್ವಶಕ್ತಿ ಪ್ರದರ್ಶನ(!) ನಡೆದಿದೆ. ಈ ಮೂಲಕ ಕಾಂಗ್ರೆಸ್ ನ ನಾಯಕರ ಒಳಜಗಳ ಬೀದಿಗೆ ಬಿದ್ದಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ‌ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆ ‘ಶಕ್ತಿ’ಗೆ ಚಾಲನೆ ನೀಡಲಾಗಿದೆ. ಸುಳ್ಯದಲ್ಲಿ ಈ ಕಾರ್ಯಕ್ರಮದ ಉದ್ಘಾಟನೆ ವೇಳೆ ಸ್ವತಃ ಕಾಂಗ್ರೆಸ್ ನಾಯಕರು ಕಿತ್ತಾಟ ನಡೆಸಿರುವುದುಗಾಗಿ ತಿಳಿದುಬಂದಿದೆ. ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಕ್ತಿ ಯೋಜನೆಯ ಚಾಲನಾ

ಸುಳ್ಯ: ‘ಶಕ್ತಿ’ ಯೋಜನೆಗೆ ಚಾಲನೆ ನೀಡುವ ವೇಳೆ ಕೈ ನಾಯಕರ “ಸ್ವಶಕ್ತಿ” ಪ್ರದರ್ಶನ| ಮತ್ತೊಮ್ಮೆ ಬೀದಿಗೆ ಬಂದ ಕಾಂಗ್ರೆಸ್ ನ ಒಳಜಗಳ Read More »

ಸುಳ್ಯ: ಸರಕಾರದ ಮಹತ್ವಾಕಾಂಕ್ಷೆಯ “ಶಕ್ತಿ ” ಯೋಜನೆಗೆ ಚಾಲನೆ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದ ಸುಳ್ಯ ಘಟಕ ವ್ಯಾಪ್ತಿಯಲ್ಲಿ “ಶಕ್ತಿ” ಯೋಜನೆಗೆ ಚಾಲನೆ ಕಾರ್ಯಕ್ರಮ ರವಿವಾರ ಸುಳ್ಯ ಬಸ್ ನಿಲ್ದಾಣದಲ್ಲಿ ನಡೆಯಿತು. ಸುಳ್ಯ ತಹಶೀಲ್ದಾರ್ ಮಂಜುನಾಥ್ ಜಿ. ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಕ್ತಿ ಯೋಜನೆ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು ಮಹಿಳೆಯರಿಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳಿ ಶುಭಹಾರೈಸಿದರು. ಸುಳ್ಯ ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ “ಶಕ್ತಿ” ಯೋಜನೆಗೆ ಚಾಲನೆ ನೀಡಿದರು. ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ತಾಲೂಕು ಪಂಚಾಯತ್

ಸುಳ್ಯ: ಸರಕಾರದ ಮಹತ್ವಾಕಾಂಕ್ಷೆಯ “ಶಕ್ತಿ ” ಯೋಜನೆಗೆ ಚಾಲನೆ Read More »

ಕಾಪು: ಬಸ್ – ಬೈಕ್ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಸಮಗ್ರ ನ್ಯೂಸ್: ಬಸ್ ಮತ್ತು ಬೈಕ್ ನಡುವೆ ರಾಷ್ಟೀಯ ಹೆದ್ದಾರಿ 66ರ ಪೂರ್ವ ಭಾಗದ ಸರ್ವಿಸ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಜೂ.11 ರಂದು ಬೆಳಿಗ್ಗೆ ನಡೆದಿದೆ. ಮೃತರು ಹೂವಿನ ವ್ಯಾಪಾರಸ್ಥರಾದ ಕಟಪಾಡಿ ಸರಕಾರಿ ಗುಡ್ಡೆ ನಿವಾಸಿ ಇಕ್ಬಾಲ್ (32) ಎಂದು ಗುರುತಿಸಲಾಗಿದೆ. ಬಸ್‌ ಉಡುಪಿಯಿಂದ ಮಂಗಳೂರು ಕಡೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಸಾರ್ವಜನಿಕರ ಸಹಕಾರದಿಂದ ಆಸ್ಪತ್ರೆಗೆ ಸಾಗಿಸಲಾಗಿದೆ.ಕಾಪು ಪೊಲೀಸರು ಸ್ಥಳಕ್ಕ ಆಗಮಿಸಿ ಪರಿಶೀಲನೆ

ಕಾಪು: ಬಸ್ – ಬೈಕ್ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು Read More »

ಉತ್ಪಾದನೆಯಲ್ಲಿ ಕೊರತೆ | ಮೊಟ್ಟೆ ದರದಲ್ಲಿ ಏರಿಕೆ

ಸಮಗ್ರ ನ್ಯೂಸ್: ತಾಪಮಾನ ಅಧಿಕವಾದ ಕಾರಣ ಕೋಳಿಗಳು ಹೆಚ್ಚಿನ ಪ್ರಮಾಣದಲ್ಲಿ ಸಾಯುತ್ತಿವೆ. ಶೆಡ್ ಗಳಲ್ಲಿ ಬಿಸಿ ಗಾಳಿ ಕಾರಣದಿಂದ ಕೋಳಿಗಳಿಗೆ ರೋಗ ಬಾಧೆ ಹೆಚ್ಚಾಗಿದೆ. ಇದರ ಪರಿಣಾಮ ಮೊಟ್ಟೆ ಉತ್ಪಾದನೆ ಮೇಲೆ ಉಂಟಾಗಿದೆ. ಹೀಗಾಗಿ ಮೊಟ್ಟೆಯ ದರ ಏರಿಕೆಯಾಗಿದೆ. ಬೇಸಿಗೆಯಲ್ಲಿ ಕೋಳಿಗಳು ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ತಿನ್ನುತ್ತವೆ. ಹೆಚ್ಚಾಗಿ ನೀರು ಕುಡಿಯುವುದರಿಂದ ಮೊಟ್ಟೆ ಇಡುವ ಪ್ರಮಾಣ ಕಡಿಮೆಯಾಗಿರುತ್ತದೆ. ಹೀಗಾಗಿ ಮೊಟ್ಟೆ ಉತ್ಪಾದನೆ ಕುಂಠಿತವಾಗಿದೆ. ಸಾರಿಗೆ ವೆಚ್ಚ ಕೂಡ ದುಬಾರಿಯಾಗಿದ್ದು, ಮೊಟ್ಟೆಯ ದರ 50 ರಿಂದ 60 ಪೈಸೆಯಷ್ಟು

ಉತ್ಪಾದನೆಯಲ್ಲಿ ಕೊರತೆ | ಮೊಟ್ಟೆ ದರದಲ್ಲಿ ಏರಿಕೆ Read More »