June 2023

ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷರ ಮನೆಯಲ್ಲಿ ಗೌಪ್ಯವಾಗಿ ನಡೆಯುತ್ತಿದೆ 9ದಿನಗಳ ವಿಶಿಷ್ಟ ಹವನ

ಸಮಗ್ರ ನ್ಯೂಸ್:‌ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸೇರಿದ ಪುತ್ತೂರು ಸಮೀಪದ ಸವಣೂರಿನ ಮನೆಯಲ್ಲಿ ವಿಶೇಷ ಹವನವೊಂದನ್ನು ಸುಮಾರು 9ದಿನಗಳ ಕಾಲ ಈ ವಿಶಿಷ್ಟ ಹವನ ನಡೆಯಲಿದ್ದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಜೂ.11ರಂದು ಪ್ರಾರಂಭವಾಗಿ ಜೂ.18ರವರೆಗೆ 9 ದಿನಗಳ ಕಾಲ ನಡೆಯುವ ಈ ಹೋಮದ ನೇತ್ರತ್ವವನ್ನು ವಿದ್ವಾನ್ ಬಾಲಕೃಷ್ಣ ಕಾರಂತ್ ವಹಿಸಿದ್ದಾರೆ ಎನ್ನಲಾಗಿದೆ. ಅತ್ಯಂತ ಗೌಪ್ಯವಾಗಿ ಈ ಹವನವನ್ನು ನಡೆಸಲಾಗುತ್ತಿದ್ದು, ಯಾವ ಉದ್ದೇಶ ಪ್ರಾಪ್ತಿಗಾಗಿ ಈ ಹೋಮ ನಡೆಸಲಾಗುತ್ತಿದೆ ಎಂಬ ವಿಚಾರವನ್ನು ಗುಟ್ಟಾಗಿ ಇಡಲಾಗಿದೆ. ಒಳಗೆ ನಡೆಸಲಾಗುತ್ತಿರುವ ಧಾರ್ಮಿಕ […]

ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷರ ಮನೆಯಲ್ಲಿ ಗೌಪ್ಯವಾಗಿ ನಡೆಯುತ್ತಿದೆ 9ದಿನಗಳ ವಿಶಿಷ್ಟ ಹವನ Read More »

ಆಭರಣ ಪ್ರಿಯರಿಗೆ ಸಂತಸದ ಸುದ್ದಿ| ಬಂಗಾರ ದರ ದಿನೇದಿನೇ ಹಗುರ!!

ಸಮಗ್ರ ನ್ಯೂಸ್: ದೇಶ ವಿದೇಶಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಇಳಿಕೆ ಮುಂದುವರಿದಿದೆ. ದುಬೈನಲ್ಲಿ ಇಳಿಕೆಯ ವೇಗ ಹೆಚ್ಚಿದೆ. ಭಾರತೀಯ ರೂ ಲೆಕ್ಕದಲ್ಲಿ ದುಬೈನಲ್ಲಿ 10 ಗ್ರಾಮ್ ಚಿನ್ನದ ಬೆಲೆ 49,000 ರೂಗೆ ಬಂದಿಳಿದಿದೆ. ಭಾರತದ ವಿವಿಧೆಡೆಯೂ ಚಿನ್ನ ಅಗ್ಗಗೊಂಡಿದೆ. ಇಲ್ಲಿ ಬೆಳ್ಳಿ ಬೆಲೆ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರೆಟ್ ಚಿನ್ನದ ಬೆಲೆ 55,050 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 60,050 ರೂಪಾಯಿ ಆಗಿದೆ. 100 ಗ್ರಾಮ್

ಆಭರಣ ಪ್ರಿಯರಿಗೆ ಸಂತಸದ ಸುದ್ದಿ| ಬಂಗಾರ ದರ ದಿನೇದಿನೇ ಹಗುರ!! Read More »

ಸಿಇಟಿ ಫಲಿತಾಂಶ ಪ್ರಕಟ|ಈ ಬಾರಿಯೂ ಬಾಲಕಿಯರೇ ಮೇಲುಗೈ| ಫಲಿತಾಂಶ ನೋಡೋದು ಹೀಗೆ…

ಸಮಗ್ರ ನ್ಯೂಸ್: 2023-24ನೇ ಸಾಲಿನ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ನಡೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಇಂದು(ಜೂನ್ 15) ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್​ ಅವರು ಬೆಂಗಳೂರಿನ ಮಲ್ಲೇಶ್ವರಂನ ಕೆಇಎ ಕಚೇರಿಯಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಿದ್ದು, ಈ ಬಾರಿ ಸಿಇಟಿಯಲ್ಲೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಇಂಜಿನಿಯರಿಂಗ್ ಕೋರ್ಸ್​ಗೆ- 2,03,381 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರೆ, ಕೃಷಿ ವಿಜ್ಞಾನ ಕೋರ್ಸಿಗೆ- 1,64,187, ಪಶುಸಂಗೋಪನೆ- 166756, ಯೋಗ ಮತ್ತು ನ್ಯಾಚುರೋಪತಿಗೆ- 2,06191, ಬಿ.ಪಾರ್ಮ್ ಮತ್ತು ಡಿ.ಪಾರ್ಮ್ ಕೋರ್ಸ್ ಗೆ-

ಸಿಇಟಿ ಫಲಿತಾಂಶ ಪ್ರಕಟ|ಈ ಬಾರಿಯೂ ಬಾಲಕಿಯರೇ ಮೇಲುಗೈ| ಫಲಿತಾಂಶ ನೋಡೋದು ಹೀಗೆ… Read More »

ತೀವ್ರ ಸ್ವರೂಪ ಪಡೆದುಕೊಂಡ ‘ಬಿಪರ್ ಜಾಯ್’| ಕರ್ನಾಟಕದ ಕರಾವಳಿ ಪ್ರಕ್ಷುಬ್ಧ| ಇಂದು ‘ಹೈ ವೇವ್ ಅಲರ್ಟ್’

ಸಮಗ್ರ ನ್ಯೂಸ್: ಬಿಪರ್‌ ಜಾಯ್‌ ಚಂಡಮಾರುತವು ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಲವು ದಿನಗಳವರೆಗೆ ಸೈಕ್ಲೋನ್‌ ಎಫೆಕ್ಟ್‌ ಇರಲಿದ್ದು, ಮುಂದಿನ ಐದು ದಿನಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಸಾರ್ವಜನಿಕರು ಮತ್ತು ಮೀನುಗಾರರಿಗೆ ಸೂಚನೆ ನೀಡಿದ್ದಾರೆ. ಮಂಗಳೂರು ಮತ್ತು ಮುರ್ಡೇಶ್ವರ ಕಡಲ ತೀರದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಕರ್ನಾಟಕ ಮಾತ್ರವಲ್ಲ ಗುಜರಾತ್, ಪಶ್ಚಿಮ ಬಂಗಾಳ, ಸಿಕ್ಕಿಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ,

ತೀವ್ರ ಸ್ವರೂಪ ಪಡೆದುಕೊಂಡ ‘ಬಿಪರ್ ಜಾಯ್’| ಕರ್ನಾಟಕದ ಕರಾವಳಿ ಪ್ರಕ್ಷುಬ್ಧ| ಇಂದು ‘ಹೈ ವೇವ್ ಅಲರ್ಟ್’ Read More »

ಬಂಟ್ವಾಳ: ಕಾರು – ಟಿಪ್ಪರ್ ನಡುವೆ ಡಿಕ್ಕಿ| ಇತ್ತಂಡಗಳಿಂದ ಹಲ್ಲೆ; ದೂರು ದಾಖಲು

ಸಮಗ್ರ ನ್ಯೂಸ್: ಕಾರು-ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದ ವಿಚಾರವಾಗಿ ಇತ್ತಂಡದವರು ಪರಸ್ಪರ ಮಾತಿನ ಚಕಮಕಿ, ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಕಾರಿನಲ್ಲಿದ್ದ ಪುತ್ತೂರು ಕೆಮ್ಮಿಂಜೆ ಮರೀಲ್ ನಿವಾಸಿ ನಿತಿನ್ ಪಕ್ಕಳ ನೀಡಿದ ದೂರಿನ ಮೇರೆಗೆ ಬಂಟ್ವಾಳ ಅಮ್ಟೂರು ನಿವಾಸಿ ಸಾಹುಲ್ ಹಮೀದ್ ಎಂಬವರ ಮೇಲೆ ಹಾಗೂ ಸಾಹುಲ್ ಹಮೀದ್ ನೀಡಿದ ದೂರಿನ ಮೇರೆಗೆ ಪುತ್ತೂರಿನ ನಿತಿನ್ ಪಕ್ಕಳ, ಪ್ರಶಾಂತ್ ಶೆಣೈ, ಶ್ರೀರಾಮ್ ಪಕ್ಕಳ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಬಂಟ್ವಾಳ: ಕಾರು – ಟಿಪ್ಪರ್ ನಡುವೆ ಡಿಕ್ಕಿ| ಇತ್ತಂಡಗಳಿಂದ ಹಲ್ಲೆ; ದೂರು ದಾಖಲು Read More »

ಕೊಡಗು: ಸ್ನೇಕ್ ಸುರೇಶ್ ಪೂಜಾರಿ ಅವರಿಂದ ನಾಗರ ಹಾವಿನ ರಕ್ಷಣೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ನೆಲ್ಲಿ ಹುದಿಕೇರಿ ಗ್ರಾಮದ ಕುಂಬಾರ ಗುಂಡಿಯ ಸುದೀ ಅವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಬೃಹತ್ ಗಾತ್ರದ ನಾಗರಹಾವು ಕಾಣಿಸಿಕೊಂಡಿದೆ. ಬೃಹತ್ ಗಾತ್ರದ ನಾಗರಹಾವನ್ನು ಕಂಡ ಸುದೀ ಅವರು ಗುಹ್ಯ ಗ್ರಾಮದ ಉರಗ ಪ್ರೇಮಿ ಸ್ನೇಕ್ ಸುರೇಶ್ ಪೂಜಾರಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಸ್ನೇಕ್ ಸುರೇಶ್ ಮತ್ತು ಆರ್.ಆರ್.ಟಿ.ಶಶಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಲಾಯಿತು. ಹಾವು ಕಸದ ರಾಶಿಯಲ್ಲಿ ಕಂಡು ಬಂದಿತ್ತು, ಅದನ್ನು ಸುರಕ್ಷಿತವಾಗಿ ಹಿಡಿದು ರಕ್ಷಣೆ ಮಾಡುವುದರಲ್ಲಿ ಸ್ನೇಕ್

ಕೊಡಗು: ಸ್ನೇಕ್ ಸುರೇಶ್ ಪೂಜಾರಿ ಅವರಿಂದ ನಾಗರ ಹಾವಿನ ರಕ್ಷಣೆ Read More »

ನಾಳೆ(ಜೂ.15) ಸಿಇಟಿ ಫಲಿತಾಂಶ ಪ್ರಕಟ

ಸಮಗ್ರ ನ್ಯೂಸ್; ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕಳೆದ ಮೇ ತಿಂಗಳಲ್ಲಿ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (KCET-2023) ಫಲಿತಾಂಶ ಜೂನ್.15ರ ಗುರುವಾರದ ನಾಳೆ ಬೆಳಿಗ್ಗೆ ಪ್ರಕಟವಾಗಲಿದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ ಸಿ ಸುಧಾಕರ್ ಅವರು ಇಲ್ಲಿನ ಮಲ್ಲೇಶ್ವರದಲ್ಲಿರುವ ಪ್ರಾಧಿಕಾರದ ಕಚೇರಿ ಆವರಣದಲ್ಲಿ ಬೆಳಿಗ್ಗೆ 9:30ಕ್ಕೆ ಫಲಿತಾಂಶ ಪ್ರಕಟಿಸಲಿದ್ದಾರೆ. ಫಲಿತಾಂಶವು ಬೆಳಿಗ್ಗೆ 11ರ ನಂತರ ಕೆಇಎ ವೆಬ್ ಸೈಟ್ http://kea.kar.nic.in ದಲ್ಲಿ ಸಿಗಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ(ಜೂ.15) ಸಿಇಟಿ ಫಲಿತಾಂಶ ಪ್ರಕಟ Read More »

ಮಂಗಳೂರು:ಪೊಲೀಸ್ ಠಾಣೆಯ ಪಕ್ಕದಲ್ಲೇ ‘ಫಸ್ಟ್‌ ನೈಟ್‌’ ಸಂಭ್ರಮದ ಬ್ಯಾನರ್ ಅಳವಡಿಸಿದ ಪೋಲಿ ಗೆಳೆಯರು..! “ರಾತ್ರಿಯಿಡೀ ಹೋರಾಡಿ ಗೆದ್ದು ಬಾ” ಎಂದು ಹಾರೈಸಿದ ಬ್ಯಾನರ್ ವೈರಲ್‌..!

ಸಮಗ್ರ ನ್ಯೂಸ್: ಮದುವೆಗೆ ಶುಭಾಶಯ ಬ್ಯಾನರ್ ಹಾಕುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕನ ಫಸ್ಟ್‌ ನೈಟ್‌ ಗೆ (ಮೊದಲ ರಾತ್ರಿ) ಪೊಲೀಸ್ ಸ್ಟೇಷನ್‌ ಪಕ್ಕದಲ್ಲೇ ಸ್ನೇಹಿತರು ಬ್ಯಾನರ್‌ ಅಳವಡಿಸಿದ್ದು ಭಾರಿ ವೈರಲ್ ಆಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕದ್ರಿ ಪೊಲೀಸ್‌ ಠಾಣೆಯ ಕಂಪೌಂಡ್ ಗೋಡೆಗೆ ತಾಗಿಕೊಂಡಂತೆ ಈ ಬ್ಯಾನರ್ ಹಾಕಲಾಗಿದೆ. ಯುವಕನೊಬ್ಬನ ಮದುವೆಯ ಮೊದಲ ರಾತ್ರಿಯ ಸಂಭ್ರಮ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ. ರಾತ್ರಿಯಿಡೀ ಹೋರಾಡಿ ಗೆದ್ದು ಬಾ ಎಂದು ಗೆಳೆಯರು ಹಾರೈಸಿ ಸರಕಾರಿ

ಮಂಗಳೂರು:ಪೊಲೀಸ್ ಠಾಣೆಯ ಪಕ್ಕದಲ್ಲೇ ‘ಫಸ್ಟ್‌ ನೈಟ್‌’ ಸಂಭ್ರಮದ ಬ್ಯಾನರ್ ಅಳವಡಿಸಿದ ಪೋಲಿ ಗೆಳೆಯರು..! “ರಾತ್ರಿಯಿಡೀ ಹೋರಾಡಿ ಗೆದ್ದು ಬಾ” ಎಂದು ಹಾರೈಸಿದ ಬ್ಯಾನರ್ ವೈರಲ್‌..! Read More »

ಫ್ರೀ ಬಸ್ ನ ಲಾಭ ಪಡೆದು ಹಸುಗೂಸು ಬಿಟ್ಟು ಪ್ರಿಯತಮನ ಅರಸಿ ಬಂದ ಮಹಿಳೆ| ಹುಬ್ಬಳ್ಳಿ ಟು ಪುತ್ತೂರು ವಿಚಿತ್ರ ಲವ್ ಸ್ಟೋರಿ.!!

ಸಮಗ್ರ ನ್ಯೂಸ್ : ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿಯಲ್ಲಿ ಒಂದಾದ ಶಕ್ತಿ ಯೋಜನೆ, ಮಹಿಳೆಯರಿಗೆ ಉಚಿತ ಬಸ್ಸು ಪ್ರಯಾಣ ಜಾರಿಗೆ ತಂದಿದ್ದು ಜೂ. 11 ರ ಮಧ್ಯಾಹ್ನ ರಾಜ್ಯದೆಲ್ಲೆಡೆ ಚಾಲನೆಯಾದ ಈ ಯೋಜನೆ ಮಹಿಳೆಯರ ಖುಷಿಗೆ ಕಾರಣವಾಗಿದೆ. ಆರಂಭದ ಎರಡು ದಿನದಲ್ಲೆ ಈ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದರ ನಡುವೆ ಹುಬ್ಬಳ್ಳಿಯ ವಿವಾಹಿತೆಯೊಬ್ಬಳು ತನ್ನ 11 ತಿಂಗಳ ಮಗುವನ್ನು ಮನೆಯಲ್ಲಿ ಬಿಟ್ಟು 300 ಕಿಮೀ ದೂರದಲ್ಲಿರುವ ಪ್ರಿಯಕರನನ್ನು ಹುಡುಕಿಕೊಂಡು ಬಂದಿದ್ದಾರೆ. ಪ್ರಿಯಕರನು ಹುಬ್ಬಳ್ಳಿಯವನೇ ಆಗಿದ್ದು

ಫ್ರೀ ಬಸ್ ನ ಲಾಭ ಪಡೆದು ಹಸುಗೂಸು ಬಿಟ್ಟು ಪ್ರಿಯತಮನ ಅರಸಿ ಬಂದ ಮಹಿಳೆ| ಹುಬ್ಬಳ್ಳಿ ಟು ಪುತ್ತೂರು ವಿಚಿತ್ರ ಲವ್ ಸ್ಟೋರಿ.!! Read More »

ಜೂ-25 : ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಅಂತರ್ ಜಿಲ್ಲಾ ಕರೋಕೆ ಸಂಗೀತ ಸ್ಪರ್ಧೆ

ಸಮಗ್ರ ನ್ಯೂಸ್:ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ದಿನಾಂಕ 25-6-2023 ರಂದು ಭಾನುವಾರ ದಿನ ಸುಳ್ಯದಲ್ಲಿ ಕರೋಕೆ ಸಂಗೀತ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧೆಯಲ್ಲಿ ಹಾಡಲು ಆಸಕ್ತಿ ಇರುವವರು ತಮ್ಮ ಹೆಸರು ನೋಂದಾಯಿಸಲು ಕರೆ ಮಾಡಿ . ಯಾವುದೇ ವಿಭಾಗದ ಗೀತೆಯನ್ನು ಪೂರ್ಣವಾಗಿ ಹಾಡಲು ಅವಕಾಶ ಮಾಡಿಕೊಡಲಾಗುವದು . ಕರೋಕೆ ಸಂಗೀತದಲ್ಲಿ ಒಂದೇ ಹಾಡನ್ನು ಹಾಡಬೇಕು . ಸಂಗೀತ ಇಲ್ಲದೆಯೂ ಹಾಡಬಹುದು .ಕಿರಿಯ ಗಾಯಕರು ಮತ್ತು ಹಿರಿಯ ಗಾಯಕರು ಎಂಬ ವಿಭಾಗ ಇರುವದಿಲ್ಲ . ಒಬ್ಬರಿಗೆ

ಜೂ-25 : ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಅಂತರ್ ಜಿಲ್ಲಾ ಕರೋಕೆ ಸಂಗೀತ ಸ್ಪರ್ಧೆ Read More »