June 2023

ದ.ಕ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಮುಲ್ಲೈ ಮುಹಿಲನ್ ನೇಮಕ

ಸಮಗ್ರ ನ್ಯೂಸ್: ದ.ಕ.ಜಿಲ್ಲಾಧಿಕಾರಿ ರವಿ ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿ ನೂತನ ಜಿಲ್ಲಾಧಿಕಾರಿಯಾಗಿ ಸ್ಮಾರ್ಟ್ ಗವರ್ನೆನ್ಸ್ ಬೆಂಗಳೂರು ಇದರ ಕಾರ್ಯನಿರ್ವಾಹಕ ನಿರ್ದೇಶಕ ಮುಲೈ ಮುಹಿಲನ್ ಎಂ.ಪಿ. ನೇಮಕಗೊಂಡಿದ್ದಾರೆ. ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಡಾ. ಕುಮಾರ ಅವರು ಮಂಡ್ಯ ಜಿಲ್ಲಾಧಿಕಾರಿಯಾಗಿ ನೇಮಕಗೊಳಿಸಲಾಗಿದೆ. ಮುಲ್ಲೈ ಮುಹಿಲನ್ ತಮಿಳುನಾಡು ಮೂಲದವರಾಗಿದ್ದು, ದಿಂಡಿಗಲ್ ಅಣ್ಣಾ ವಿಶ್ವವಿದ್ಯಾಲಯದ ಪಿಎಸ್‌ಎನ್‌ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿನಲ್ಲಿ ಓದಿ ಕಂಪ್ಯೂಟರ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. 1986 ರಲ್ಲಿ ಜನಿಸಿದ ಅವರು […]

ದ.ಕ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಮುಲ್ಲೈ ಮುಹಿಲನ್ ನೇಮಕ Read More »

ಸಂಪಾಜೆಯಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣ

ಸಮಗ್ರ ನ್ಯೂಸ್: ಸಂಪಾಜೆ ಗ್ರಾಮದಲ್ಲಿ ಇತ್ತಿಚೇಗೆ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದು ಸಂಪಾಜೆಯ ಹೈವೆ ಹೋಟೆಲ್ ಬಳಿ ಸ್ಕೂಟರ್ ಕಳ್ಳತನವಾಗಿದೆ. ಕಲ್ಲುಗುಂಡಿ ಸಂಗಮ್ ಅಂಗಡಿ ಬಳಿ ಬೈಕ್ ಕಳ್ಳತನವಾಗಿದೆ. ಕಡೆಪಾಲದಲ್ಲಿ ಸೇತುವೆ ಬಳಿ ಕಾಮಗಾರಿ ನಡೆಯುತ್ತಿದ್ದು ಇಲ್ಲಿಂದ ಸುಮಾರ್ 4೦೦ ಲೀ ಡೀಸಲ್ ಕಳ್ಳತನವಾಗಿದೆ. ಪಂಚಾಯತ್ ಸೋಲಾರ್‌ನ ಬ್ಯಾಟರಿ ಕಳ್ಳತನ, ಗಂಗಾಧರ ನಿಡಿಂಜಿ ಯವರ ಅಂಗಡಿಯಿಂದ ಹಂಚು ಕಳ್ಳತನ ಹೀಗೆ ಹಲವಾರು ಕಳ್ಳತನ ನಡೆಯುತ್ತಿದ್ದು ಸಾರ್ವಜನಿಕ ವಲಯದಲ್ಲಿ ಜನರಿಗೆ ಭೀತಿ ಪ್ರಾರಂಭಗೊಂಡಿದೆ. ಈ ಭೀತಿಯನ್ನು ಹೋಗಲಾಡಿಸಲು ಪೋಲಿಸ್ ಇಲಾಖೆ

ಸಂಪಾಜೆಯಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣ Read More »

ಮಡಿಕೇರಿ ನಗರೋತ್ತಾನ ಯೋಜನೆಯಲ್ಲಿ ಕಳಪೆ ಕಾಮಗಾರಿ| ಸಾರ್ವಜನಿಕರು ಆಕ್ರೋಶ

ಸಮಗ್ರ ನ್ಯೂಸ್ : ಕೊಡಗು ಜಿಲ್ಲೆಯ ಮಡಿಕೇರಿ ನಗರ ಸಭೆಗೆಯ ನಗರೋತ್ತಾನ ಯೋಜನೆಯಲ್ಲಿ ಮಡಿಕೇರಿ ನಗರದ ಹಲವು ಭಾಗದಲ್ಲಿ ರಸ್ತೆ ಮರು ಡಾಂಬರೀಕರಣ ಈಗಾಗಲೇ ಆರಂಭಿಸಿದ್ದು ಎಲ್ಲ ರಸ್ತೆ ಕಾಮಗಾರಿಗಳು ಕಳಪೆ ಕಾಮಗಾರಿ ಆಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದ್ದು ಕಾಣುತ್ತಿದೆ ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವು ಭಾಗದಲ್ಲಿ ಈಗಾಗಲೇ ಡಾಂಬರ್ ಕಿತ್ತು ಬರುತ್ತಿದ್ದು ಹಾಗೂ ಹಲವು ಭಾಗದಲ್ಲಿ ಈಗಾಗಲೇ 8-10 ತಿಂಗಳಲ್ಲಿ ನಿರ್ಮಿಸಿದಂತ ಕಾಂಗ್ರೆಟ್ ರಸ್ತೆಗಳ ಮೇಲೆ ಮತ್ತೆ ಡಾಂಬರು ಮಾಡುತ್ತಿರುವುದು ಕಂಡು

ಮಡಿಕೇರಿ ನಗರೋತ್ತಾನ ಯೋಜನೆಯಲ್ಲಿ ಕಳಪೆ ಕಾಮಗಾರಿ| ಸಾರ್ವಜನಿಕರು ಆಕ್ರೋಶ Read More »

ವಿನು ಬಳಂಜ ನಿದೇ೯ಶನದ “ಬೇರ” ಚಲನಚಿತ್ರ ಬಿಡುಗಡೆ| ಸಾಮಾಜಿಕ ಸಾಮರಸ್ಯ ಸಾರುವ ಚಿತ್ರಗಳನ್ನು ಬೆಂಬಲಿಸಬೇಕು: ಪ್ರಕಾಶ್ ಪಾಂಡೇಶ್ವರ್

ಸಮಗ್ರ ನ್ಯೂಸ್: ಎಸ್ ಎಲ್ ವಿ ಪ್ರೊಡಕ್ಷನ್ ಹೌಸ್ ನಲ್ಲಿ ದಿವಾಕರ ದಾಸ್ ನಿರ್ಮಾಣ ವಿನು ಬಳಂಜ ನಿರ್ದೇಶನದಲ್ಲಿ ತಯಾರಾದ ವಿಭಿನ್ನ ಕಥಾವಸ್ತು ಒಳಗೊ೦ಡಿರುವ “ಬೇರ“ಕನ್ನಡ ಚಲನಚಿತ್ರ ಭಾರತ್ ಮಾಲ್ ನ ಬಿಗ್ ಸಿನಿಮಾಸ್ ನಲ್ಲಿ ಶುಕ್ರವಾರ ಬೆಳಗ್ಗೆ ಬಿಡುಗಡೆ ಗೊಂಡಿತು. ಚಲನ ಚಿತ್ರ ನಿರ್ಮಾಪಕ,ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಬಳಿಕ ಮಾತಾಡಿದ ಅವರು, “ಇಂದು ಕರ್ನಾಟಕ ರಾಜ್ಯದಾದ್ಯಂತ ಬೇರ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಹಿಂದೂ ಮುಸ್ಲಿಮರ ಬಾಂಧವ್ಯದ ಕತೆ ಇರುವುದಾಗಿ ನಿರ್ದೇಶಕರು

ವಿನು ಬಳಂಜ ನಿದೇ೯ಶನದ “ಬೇರ” ಚಲನಚಿತ್ರ ಬಿಡುಗಡೆ| ಸಾಮಾಜಿಕ ಸಾಮರಸ್ಯ ಸಾರುವ ಚಿತ್ರಗಳನ್ನು ಬೆಂಬಲಿಸಬೇಕು: ಪ್ರಕಾಶ್ ಪಾಂಡೇಶ್ವರ್ Read More »

ಸುಳ್ಯ:ಪೊಲೀಸ್ ಠಾಣಾ ಉಪ ನಿರೀಕ್ಷಕರಾಗಿ ಈರಯ್ಯ ದೂಂತೂರು

ಸಮಗ್ರ ನ್ಯೂಸ್: ಸುಳ್ಯ ಪೊಲೀಸ್ ಠಾಣಾ ಉಪ ನಿರೀಕ್ಷಕರಾಗಿ ಈರಯ್ಯ ದೂಂತೂರು ಅವರನ್ನು ನೇಮಕ‌ ಮಾಡಿ ಸರಕಾರ ಆದೇಶ ಮಾಡಿದೆ. ಕಳೆದ ಎರಡು ವರ್ಷಗಳಿಂದ ದಿಲೀಪ್ ಸುಳ್ಯ ಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇದೀಗ 2014ನೇ ಬ್ಯಾಚ್‌ನ ಅಧಿಕಾರಿಯಾದ ಈರಯ್ಯ ದೂಂತೂರು ಅವರು ನೇಮಕ ಗೊಂಡಿದ್ದಾರೆ. ಇನ್ನೂ ಇವರು ಅವರು ಬಂಟ್ವಾಳ ಹಾಗೂ ವಿಟ್ಲದಲ್ಲಿ ಪ್ರೊಬೇಷನರಿ ಎಸ್‌ಐ ಆಗಿ ಬಳಿಕ ಬೆಳ್ಳಾರೆ ಠಾಣೆಯಲ್ಲಿ ಉಪನಿರೀಕ್ಷಕರಾಗಿದ್ದರು. ಬಳಿಕ ಉಪ್ಪಿನಂಗಡಿ, ಶಿರಸಿಯಲ್ಲಿ ಕರ್ತವ್ಯ ನಿರ್ವಹಿಸಿ ಈಗ ಕುಂದಾಪುರದಲ್ಲಿ ಎಸ್‌ಐ ಆಗಿ

ಸುಳ್ಯ:ಪೊಲೀಸ್ ಠಾಣಾ ಉಪ ನಿರೀಕ್ಷಕರಾಗಿ ಈರಯ್ಯ ದೂಂತೂರು Read More »

15 ವೃದ್ಧರನ್ನು ಬಲಿತೆಗೆದುಕೊಂಡ ಟ್ರಕ್| ಕ್ಯಾಸಿನೋಗೆ ತೆರಳುತ್ತಿದ್ದವರು ಮಸಣಕ್ಕೆ

ಸಮಗ್ರ ನ್ಯೂಸ್: ಕ್ಯಾಸಿನೊಗೆ ತೆರಳುತ್ತಿದ್ದ ಹಿರಿಯ ನಾಗರಿಕರ ಮೇಲೆ ಟ್ರಕ್ ಹರಿದು, ಕನಿಷ್ಠ 15 ಮಂದಿ ವೃದ್ಧರು ಸಾವನ್ನಪ್ಪಿದ್ದ ಘಟನೆ ಕೆನಡಾದಲ್ಲಿ ನಡೆದಿದೆ. ಗುರುವಾರ ವೃದ್ಧರ ತಂಡ ಪ್ರಯಾಣಿಸುತ್ತಿದ್ದ ವಾಹನಕ್ಕೆ ಸೆಮಿ ಟ್ರೈಲರ್ ಟ್ರಕ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ವಿನ್ನಿಪೆಗ್ ಫ್ರೀ ಪ್ರೆಸ್ ಪತ್ರಿಕೆಯನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಕೆನಡಾದಲ್ಲಿ ಟ್ರಕ್ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಕನಿಷ್ಠ 15 ವೃದ್ಧರು ಸಾವನ್ನಪ್ಪಿದ್ದಾರೆ, ವಿನ್ನಿಪೆಗ್‌ನ ಪಶ್ಚಿಮಕ್ಕೆ 170 ಕಿಮೀ ದೂರದ ನೈಋತ್ಯ

15 ವೃದ್ಧರನ್ನು ಬಲಿತೆಗೆದುಕೊಂಡ ಟ್ರಕ್| ಕ್ಯಾಸಿನೋಗೆ ತೆರಳುತ್ತಿದ್ದವರು ಮಸಣಕ್ಕೆ Read More »

ಗುಜರಾತ್ ಕರಾವಳಿಗೆ ಅಪ್ಪಳಿಸಿದ ಬಿಪರ್ ಜಾಯ್| ಬಿರುಗಾಳಿ ; ರಕ್ಕಸ ಅಲೆಗಳಿಗೆ ಕರಾವಳಿ ತತ್ತರ

ಸಮಗ್ರ ನ್ಯೂಸ್: ಬಿಪರ್​ಜಾಯ್ ಚಂಡಮಾರುತ ಗುರುವಾರ ರಾತ್ರಿ ಗುಜರಾತ್​ನ ಸೌರಾಷ್ಟ್ರ ಮತ್ತು ಕಛ್ ಕರಾವಳಿಗೆ ಅಪ್ಪಳಿಸಿದೆ. 125 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಈ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಹಲವೆಡೆ ಅನಾಹುತಗಳು ಸಂಭವಿಸಿವೆ. ಕಛ್, ದೇವಭೂಮಿ ದ್ವಾರಕಾ, ಪೋರಬಂದರ್, ಜಾಮ್ಗರ ಮತ್ತು ಮೊರ್ಬಿ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಗಾಳಿ, ಮಳೆ ಆಗುತ್ತಿದೆ. ತಗ್ಗು ಪ್ರದೇಶಗಳು ಮುಳುಗಡೆ ಆಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಸಮುದ್ರದಲ್ಲಿ 2-3 ಮೀಟರ್ ಎತ್ತರದ

ಗುಜರಾತ್ ಕರಾವಳಿಗೆ ಅಪ್ಪಳಿಸಿದ ಬಿಪರ್ ಜಾಯ್| ಬಿರುಗಾಳಿ ; ರಕ್ಕಸ ಅಲೆಗಳಿಗೆ ಕರಾವಳಿ ತತ್ತರ Read More »

ಹಾವು ತಿನ್ನುತ್ತಿರುವ ಜಿಂಕೆ; ವಿಡಿಯೋ ವೈರಲ್

ಸಮಗ್ರ ನ್ಯೂಸ್: ಜಿಂಕೆಗಳು ಪ್ರಾಥಮಿಕವಾಗಿ ಸಸ್ಯಹಾರಿ ಪ್ರಾಣಿಗಳು. ಹುಲ್ಲು ಸೊಪ್ಪು, ಎಲೆಗಳನ್ನು ತಿನ್ನುತ್ತಾ ಬದುಕುತ್ತವೆ. ಜಿಂಕೆಗಳನ್ನು ಇತರ ಪ್ರಾಣಿಗಳು ಬೇಟೆಯಾಡುತ್ತವೇ ಹೊರತು, ಈ ಸಾದು ಪ್ರಾಣಿ ಇತರ ಜೀವಿಗಳಿಗೆ ತೊಂದರೆ ನೀಡುವುದಿಲ್ಲ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಜಿಂಕೆಯು ಹಾವನ್ನು ತಿನ್ನುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ವಿಡಿಯೋವನ್ನು ಫಿಗೆನ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಾನು ಮೊದಲ ಬಾರಿಗೆ ಜಿಂಕೆಯೊಂದು ಹಾವನ್ನು ತಿನ್ನುವುದನ್ನು ನೋಡಿದ್ದು, ಜಿಂಕೆಗಳು ಹುಲ್ಲು ತಿನ್ನುವುದಿಲ್ಲವೇ? ಎಂಬ ಶೀರ್ಷಿಕೆಯನ್ನು

ಹಾವು ತಿನ್ನುತ್ತಿರುವ ಜಿಂಕೆ; ವಿಡಿಯೋ ವೈರಲ್ Read More »

ಹವಾಮಾನ ವರದಿ| ರಾಜ್ಯದಲ್ಲಿ ಇಂದು ಸಾಧಾರಣ ಮಳೆ ನಿರೀಕ್ಷೆ

ಸಮಗ್ರ ನ್ಯೂಸ್: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದು, ಶುಕ್ರವಾರದ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುರುವಾರ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಕೊಡಗು ಜಿಲ್ಲೆಯ ಮಡಿಕೇರಿ, ಭಾಗಮಂಡಲದಲ್ಲಿ ತಲಾ 2 ಸೆಂಟಿ ಮೀಟರ್ ಮಳೆಯಾಗಿದೆ ಎಂದು ತಿಳಿಸಿದೆ. ಜೂನ್.16ರ ಇಂದು ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಕೆಲವು ಭಾಗಗಳಲ್ಲಿಯೂ ಮಳೆಯಾಗಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕೆಲವು

ಹವಾಮಾನ ವರದಿ| ರಾಜ್ಯದಲ್ಲಿ ಇಂದು ಸಾಧಾರಣ ಮಳೆ ನಿರೀಕ್ಷೆ Read More »

ಹೀಗೂ ಕರೆಂಟ್ ಬಿಲ್ ನೀಡೋದಾ!?| ಮೆಸ್ಕಾಂ ಸಿಬ್ಬಂದಿ ಎಡವಟ್ಟಿನಿಂದ ಗ್ರಾಹಕ ಕಂಗಾಲು

ಸಮಗ್ರ ನ್ಯೂಸ್: ಮೀಟರ್​ ರೀಡರ್​ ಮಾಡಿದ ತಪ್ಪು ಗ್ರಹಿಕೆಯಿಂದಾಗಿ ವ್ಯಕ್ತಿಯೊಬ್ಬರಿಗೆ 7 ಲಕ್ಷ ರೂ. ಕರೆಂಟ್​ ಬಿಲ್​ ಅನ್ನು ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಸದಾಶಿವ ಆಚಾರ್ಯ ಅವರಿಗೆ 7.71 ಲಕ್ಷ ರೂ.ಮೌಲ್ಯದ ಕರೆಂಟ್​ ಬಿಲ್​ ನೀಡುವ ಮೂಲಕ ಮೆಸ್ಕಾಂ ಮೀಟರ್ ರೀಡರ್​ ಶಾಕ್​ ಕೊಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸದಾಶಿವ ಆಚಾರ್ಯ ತಿಂಗಳಿಗೆ ನಮ್ಮ ಮನೆಯ ಕರೆಂಟ್​ ಬಿಲ್​ ಸರಾಸರಿ ಮೂರು ಸಾವಿರ ರೂಪಾಯಿ ಬರುತ್ತಿತ್ತು. ಪ್ರತಿ ತಿಂಗಳು

ಹೀಗೂ ಕರೆಂಟ್ ಬಿಲ್ ನೀಡೋದಾ!?| ಮೆಸ್ಕಾಂ ಸಿಬ್ಬಂದಿ ಎಡವಟ್ಟಿನಿಂದ ಗ್ರಾಹಕ ಕಂಗಾಲು Read More »