June 2023

`ಗ್ಯಾರಂಟಿ’ಗಳಿಗೆ ಅರ್ಜಿ ಸಲ್ಲಿಸುವ ಮುನ್ನಾ ಎಚ್ಚರ : ಅಪ್ಪಿ ತಪ್ಪಿ ಈ ಲಿಂಕ್ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಯೇ ಖಾಲಿ!

ಸಮಗ್ರ ನ್ಯೂಸ್: ರಾಜ್ಯ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಮುನ್ನಾ ಎಚ್ಚರವಾಗಿರಿ, ಗ್ಯಾರಂಟಿಗೆ ಅರ್ಜಿ ಸಲ್ಲಿಸುವವರ ಮಾಹಿತಿ ಕದಿಯಲು ಸೈಬರ್ ಕದೀಮರು ಕಾಯುತ್ತಿದ್ದಾರೆ ಎಂದು ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕ ಸರ್ಕಾರವು ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ, ಶಕ್ತಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗೆ ಅರ್ಜಿ ಸಲ್ಲಿಕೆಗೆ ಸೇವಾಸಿಂಧು ಪೋರ್ಟಲ್ ಇದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕಳ್ಳರು, ಈಗ ಸಾಮಾಜಿಕ ಜಾಲತಾಣದಲ್ಲಿ ನಕಲಿ ಲಿಂಕ್‌ಗಳನ್ನು ಹರಿಯಬಿಡುತ್ತಿದ್ದಾರೆ. ಹೌದು, […]

`ಗ್ಯಾರಂಟಿ’ಗಳಿಗೆ ಅರ್ಜಿ ಸಲ್ಲಿಸುವ ಮುನ್ನಾ ಎಚ್ಚರ : ಅಪ್ಪಿ ತಪ್ಪಿ ಈ ಲಿಂಕ್ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಯೇ ಖಾಲಿ! Read More »

ಕೃಷ್ಣಪ್ಪರವರು ಕಾರ್ಯಕರ್ತರನ್ನು ಬೆದರಿಸಿ ಪಕ್ಷ ಒಡೆಯುವ ಯತ್ನ ಮಾಡುತ್ತಿದ್ದಾರೆ,ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿರಬೇಕು: ಭವಾನಿಶಂಕರ್ ಕಲ್ಮಡ್ಕ

ಸಮಗ್ರ ನ್ಯೂಸ್:‌ ಸುಳ್ಯದ ಪರಾಜಿತ ಅಭ್ಯರ್ಥಿ ಜಿಗಣಿ ಕೃಷ್ಣಪ್ಪರವರು ಸೋಲಿನ ಹೊಣೆಯನ್ನು ಕಾರ್ಯಕರ್ತರ ಮೇಲೆ ಹೇರಲು ಯತ್ನಿಸುತ್ತಿದ್ದಾರೆ. ಟಿಕೆಟ್ ಆಕಾಂಕ್ಷಿ ಯಾಗಿದ್ದ ನಂದಕುಮಾರ್ ರವರೊಂದಿಗೆ ಗುರುತಿಸಿಕೊಂಡವರ ನಾಯಕರ, ಕಾರ್ಯಕರ್ತರ ಮೇಲೆ ದ್ವೇಷ ಸಾಧಿಸಲು ಹೊರಟಿದ್ದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮುಖಾಂತರ ಅಮಾನತು ಆದೇಶ ಹೊರಡಿಸಿ ಕಾರ್ಯಕರ್ತರು ಮತ್ತು ನಾಯಕರ ಮೇಲೆ ಸೇಡು ತೀರಿಸಲು ಮುಂದಾಗಿದ್ದಾರೆ. ಅಲ್ಲದೆ ಇದೀಗ ಪೊಲೀಸ್ ದೂರಿನ ಮುಖಾಂತರ ನಮ್ಮ ವರ್ಚಸ್ಸು ಕುಗ್ಗಿಸುವ ತಂತ್ರ ಮಾಡುತ್ತಿದ್ದಾರೆ. ಜಿಗಣಿಯಿಂದ ಬಂದು ಇಲ್ಲಿಯ ಕಾರ್ಯಕರ್ತರ ಮೇಲೆ ಸವಾರಿ

ಕೃಷ್ಣಪ್ಪರವರು ಕಾರ್ಯಕರ್ತರನ್ನು ಬೆದರಿಸಿ ಪಕ್ಷ ಒಡೆಯುವ ಯತ್ನ ಮಾಡುತ್ತಿದ್ದಾರೆ,ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿರಬೇಕು: ಭವಾನಿಶಂಕರ್ ಕಲ್ಮಡ್ಕ Read More »

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸು ದಾಖಲು| ಶೀಘ್ರವೇ ಜಿಲ್ಲಾ ಕಾಂಗ್ರೆಸ್ ಮಧ್ಯಪ್ರವೇಶ ಮಾಡಿ ಅನಾಪೇಕ್ಷಿತ ವಿದ್ಯಾಮಾನಗಳನ್ನು ಸರಿಪಡಿಸಲು ಎಂ ವೆಂಕಪ್ಪ ಗೌಡ ಆಗ್ರಹ

ಸಮಗ್ರ ನ್ಯೂಸ್: ಚುನಾವಣೆಯಲ್ಲಿ ಸ್ಪರ್ಧಿಸಿರತಕ್ಕಂತಹವರು ಮತ್ತು ರಾಜಕಾರಣದಲ್ಲಿ ತೊಡಗಿಸಿಕೊಂಡವರು ಒಂದು ವೇಳೆ ಅವರು ಚುನಾವಣೆಗೆ ನಿಂತಾಗ ಆಗಿರತಕ್ಕಂತಹ ತಪ್ಪನ್ನು ಸರಿಪಡಿಸಿಕೊಂಡು ಮುಂದೆ ಅಂತಹ ತಪ್ಪುಗಳು ಆಗಬಾರದೆಂದು ಕಾರ್ಯಕರ್ತರ ಬೆನ್ನು ತಟ್ಟಿ ಪಕ್ಷವನ್ನು ಬೆಳೆಸುವುದು ಒಬ್ಬ ಬುದ್ದಿವಂತ ರಾಜಕಾರಣಿಯ ಲಕ್ಷಣ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡು ಪಕ್ಷದ ಒಳಗೆ ತೀರ್ಮಾನಮಾಡಬೇಕಾದ ಸಂಗತಿಗಳನ್ನು ಬೀದಿಗೆ ತಂದು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಮೇಲೆಯೇ ದ್ವೇಷ ಮತ್ತು ಅಸೂಯೆಯಿಂದ ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳಲ್ಲಿ ದೂರು, ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿ ಅವರ ಮೇಲೆ

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸು ದಾಖಲು| ಶೀಘ್ರವೇ ಜಿಲ್ಲಾ ಕಾಂಗ್ರೆಸ್ ಮಧ್ಯಪ್ರವೇಶ ಮಾಡಿ ಅನಾಪೇಕ್ಷಿತ ವಿದ್ಯಾಮಾನಗಳನ್ನು ಸರಿಪಡಿಸಲು ಎಂ ವೆಂಕಪ್ಪ ಗೌಡ ಆಗ್ರಹ Read More »

ಆರಂಭದ ಮಳೆಯ ನಡುವೆ ಕರ್ನಾಟಕದಲ್ಲಿ ಹೆಚ್ಚಾದ ಡೆಂಗ್ಯೂ ಪ್ರಕರಣ

ಸಮಗ್ರ ನ್ಯೂಸ್: ಈ ಬಾರಿ ಮಳೆಯ ಆರಂಭದಲ್ಲೇ ಡೆಂಗ್ಯೂ ಪ್ರಕರಣಗಳು ಕಂಡುಬಂದಿದ್ದು.ರಾಜ್ಯದಲ್ಲಿ ಈ ತಿಂಗಳು 166 ಮಂದಿ ಡೆಂಗ್ಯೂ ಜ್ವರದಿಂದ ಬಳಲಿದ್ದಾರೆ. ಪ್ರಕರಣಗಳ ಒಟ್ಟು ಸಂಖ್ಯೆ ಎರಡು ಸಾವಿರದ ಗಡಿ ದಾಟಿದ್ದು ಈ ಭಾರಿ ಈಗಾಗಲೇ 70 ಸಾವಿರಕ್ಕೂ ಅಧಿಕ ಡೆಂಗ್ಯೂ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅವರಲ್ಲಿ 23 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ 9,620 ಮಂದಿ ಡೆಂಗಿ ಜ್ವರದಿಂದ ಬಳಲಿದ್ದರು.

ಆರಂಭದ ಮಳೆಯ ನಡುವೆ ಕರ್ನಾಟಕದಲ್ಲಿ ಹೆಚ್ಚಾದ ಡೆಂಗ್ಯೂ ಪ್ರಕರಣ Read More »

ಕೊಡಗು ಕಾಡಾನೆ ದಾಳಿ| ಕಾರ್ಮಿಕ ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್:ಕೊಡಗು ಜಿಲ್ಲೆಯ ಅಮ್ಮತ್ತಿ ಸಮೀಪದ ಇಂಜಿಲಗೇರಿಯ ಪುಲಿಯೇರಿ ಕೆ.ಕೆ.ಅಯ್ಯಪ್ಪ ಅವರ ತೋಟದ ಬಳಿ ಘಟನೆ ಜೂನ್ 15ರಂದು ಸಂಜೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಕಾಡಾನೆ ದಾಳಿ ನಡೆಸಿದೆ. ಗಂಭೀರ ಗಾಯಗೊಂಡ ಗಾಯಾಳುವನ್ನು ಸುರೇಶ್‌ ಅಮ್ಮತ್ತಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವಿರಾಜಪೇಟೆಯ ಶಾಸಕ ಎ.ಎಸ್‌.ಪೊನ್ನಣ್ಣ ಅವರ ಸೂಚನೆ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿದ ಕಾಂಗ್ರೆಸ್ ರಾಜ್ಯ ವಕ್ತಾರ ಸಂಕೇತ್‌ ಪೂವಯ್ಯ ಅವರು ಅಮ್ಮತ್ತಿಯ ಪುಲಿಯೇರಿ ಕಾಫಿ ಬೆಳೆಗಾರ ಕೆ.ಕೆ.ಅಯ್ಯಪ್ಪ ಅವರ ತೋಟದಲ್ಲಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಸುವಂತೆ

ಕೊಡಗು ಕಾಡಾನೆ ದಾಳಿ| ಕಾರ್ಮಿಕ ಆಸ್ಪತ್ರೆಗೆ ದಾಖಲು Read More »

ಗುಜರಾತ್ ಗೆ ಅಪ್ಪಳಿಸಿ ದುರ್ಬಲಗೊಂಡ ಬಿಪರ್ ಜಾಯ್| ರಾಜಸ್ಥಾನ, ಸೌರಾಷ್ಟ್ರದಲ್ಲಿ ಭಾರೀ ಮಳೆ

ಸಮಗ್ರ ನ್ಯೂಸ್: ಗುಜರಾತ್ ಕರಾವಳಿ ತೀರಕ್ಕೆ ಅಪ್ಪಳಿಸಿರುವ ಬಿಪರ್‌ಜಾಯ್ ಚಂಡಮಾರುತದಿಂದಾಗಿ ಸೌರಾಷ್ಟ್ರ, ಕಚ್ ಮತ್ತು ಉತ್ತರ ಗುಜರಾತ್‌ನ ಪಕ್ಕದ ಪ್ರದೇಶಗಳು ಪ್ರಸ್ತುತದಲ್ಲಿ ಅತ್ಯಧಿಕ ಮಳೆ ಸುರಿಯುತ್ತಿದೆ. ಈ ಸೈಕ್ಲೋನ್ ಚಂಡಮಾರುತವು ಸಂಜೆಯಿಂದ ರಾಜಸ್ಥಾನದ ಪಕ್ಕದ ಭಾಗಗಳತ್ತ ಸಾಗಲಿದೆ. ಗುರುವಾರ ರಾತ್ರಿ ಗುಜರಾತ್‌ಗೆ ಅಪ್ಪಳಿಸಿದ ‘ಅತ್ಯಂತ ತೀವ್ರ’ ಚಂಡಮಾರುತ ಬಿಪರ್‌ಜೋಯ್ ಈಗ ‘ಸೈಕ್ಲೋನಿಕ್’ ಚಂಡಮಾರುತವಾಗಿ ದುರ್ಬಲಗೊಂಡಿದೆ. ಇಲ್ಲಿನ ಕರಾವಳಿ ಭಾಗದ ಭುಜ್‌ನಿಂದ ಪಶ್ಚಿಮ-ವಾಯುವ್ಯಕ್ಕೆ 30 ಕಿಲೋ ಮೀಟರ್ ದೂರದಲ್ಲಿ ಕೇಂದ್ರೀಕೃತವಾಗಿದೆ ಎಂದು ಐಎಂಡಿ ನಿರ್ದೇಶಕ ಡಾ. ಮೃತ್ಯುಂಜಯ್ ಮಹಾಪಾತ್ರ

ಗುಜರಾತ್ ಗೆ ಅಪ್ಪಳಿಸಿ ದುರ್ಬಲಗೊಂಡ ಬಿಪರ್ ಜಾಯ್| ರಾಜಸ್ಥಾನ, ಸೌರಾಷ್ಟ್ರದಲ್ಲಿ ಭಾರೀ ಮಳೆ Read More »

(Weather report)ಹವಾಮಾನ ಸಮಾಚಾರ| ಜೂ.21ರ ವರೆಗೆ ರಾಜ್ಯದಲ್ಲಿ ಸಾಧಾರಣ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಇಂದಿನಿಂದ ಜೂ.21 ರವರೆಗೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಜೂನ್ 18ರ ಬಳಿಕ ಮುಂಗಾರು ಪ್ರಬಲವಾಗಲಿದ್ದು ಜೂನ್ 21ರ ವರೆಗೆ ಮಳೆಯಾಗಲಿದೆ, ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಿಗೆ ಮಳೆಯಾರ್ಭಟ ಜೋರಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ತುಮಕೂರು, ಹಾಸನ, ಮಂಡ್ಯ ಹಾಗೂ ಜೂನ್ 19 ರಂದು ಬೆಂಗಳೂರು ಗ್ರಾಮಾಂತರ,

(Weather report)ಹವಾಮಾನ ಸಮಾಚಾರ| ಜೂ.21ರ ವರೆಗೆ ರಾಜ್ಯದಲ್ಲಿ ಸಾಧಾರಣ ಮಳೆ ಸಾಧ್ಯತೆ Read More »

(Free adhaar update) ಉಚಿತ ಆಧಾರ್ ಅಪ್ ಡೇಟ್ ಗೆ ಅವಧಿ ವಿಸ್ತರಣೆ| ಸೆ.14ರವರೆಗೂ ಇದೆ ಅವಕಾಶ| ನೀವೇ ಮಾಡ್ಕೋಬಹುದು ಆಧಾರ್ ತಿದ್ದುಪಡಿ

ಸಮಗ್ರ ನ್ಯೂಸ್: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ದಾಖಲೆಗಳ ಉಚಿತ ಆಧಾರ್ ನವೀಕರಣವನ್ನು ಜೂನ್ 14 ರಿಂದ ಸೆಪ್ಟೆಂಬರ್ 14, 2023 ರವರೆಗೆ 3 ತಿಂಗಳವರೆಗೆ ವಿಸ್ತರಿಸಿದೆ. 15 ಮಾರ್ಚ್‌ನಿಂದ ಸೆಪ್ಟೆಂಬರ್ 14, 2023 ರವರೆಗೆ ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳನ್ನು ನೀವು ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್‌ಡೇಟ್ ಮಾಡಬಹುದು. ಈ ಮೊದಲು ಜೂನ್ 14, 2023 ಆಗಿತ್ತು. UIDAI ವೆಬ್‌ಸೈಟ್ ಪ್ರಕಾರ, ‘ಜನಸಂಖ್ಯಾ ಮಾಹಿತಿಯ ನಿಖರತೆಗಾಗಿ ದಯವಿಟ್ಟು ಆಧಾರ್ ಅನ್ನು ನವೀಕರಿಸಿ. ಅದನ್ನು

(Free adhaar update) ಉಚಿತ ಆಧಾರ್ ಅಪ್ ಡೇಟ್ ಗೆ ಅವಧಿ ವಿಸ್ತರಣೆ| ಸೆ.14ರವರೆಗೂ ಇದೆ ಅವಕಾಶ| ನೀವೇ ಮಾಡ್ಕೋಬಹುದು ಆಧಾರ್ ತಿದ್ದುಪಡಿ Read More »

ಬಂಟ್ವಾಳ: ಕೌಟುಂಬಿಕ ಮನಸ್ತಾಪ| ಪತ್ನಿ, ಮಾವನಿಗೆ ಚೂರಿ ಇರಿದು ವ್ಯಕ್ತಿ ಪರಾರಿ

ಸಮಗ್ರ ನ್ಯೂಸ್: ಕುಟುಂಬದ ಮನಸ್ತಾಪದ ವಿಚಾರಕ್ಕೆ ಸಂಬಂಧಿಸಿ ಪತ್ನಿ ಹಾಗೂ ಮಾವನಿಗೆ ಆರೋಪಿ ಪತಿ ಚೂರಿಯಿಂದ ಇರಿದು ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ತುಂಬೆ ಜಂಕ್ಷನ್‌ ನಲ್ಲಿ ನಡೆದಿದೆ. ಜೂನ್ 15 ರಂದು ರಾತ್ರಿ 10.30 ರ ಸುಮಾರಿಗೆ ತುಂಬೆ ನಿವಾಸಿಗಳಾದ ರಾಜೀವ ಹಾಗೂ ಅವರ ಪುತ್ರಿ ದಿವ್ಯ ಅವರು ಅಟೋ ರಿಕ್ಷಾದಲ್ಲಿ ಮನೆಯಿಂದ ಬಂಟ್ವಾಳ ‌ಕಡೆಗೆ ಆಗಮಿಸುವ ವೇಳೆ ದಿವ್ಯಳ ಗಂಡ ಆರೋಪಿ ಕುಮಾರ ಆಟೋವನ್ನು ತುಂಬೆ ಜಂಕ್ಷನ್ ನಲ್ಲಿ ತಡೆದು,

ಬಂಟ್ವಾಳ: ಕೌಟುಂಬಿಕ ಮನಸ್ತಾಪ| ಪತ್ನಿ, ಮಾವನಿಗೆ ಚೂರಿ ಇರಿದು ವ್ಯಕ್ತಿ ಪರಾರಿ Read More »

ಬೀದರ್: ಶಾಲಾ ಬಸ್ ತಡೆದು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ| ನಾಲ್ವರು ಹುಡುಗರ ಬಂಧನ

ಸಮಗ್ರ ನ್ಯೂಸ್: ಕೆಲವು ಹುಡುಗರು ಸೇರಿಕೊಂಡು ಶಾಲಾ ಬಸ್‌ನ್ನು ಅಡಗಟ್ಟಿಬಸ್‌​ನ​ಲ್ಲಿದ್ದ ಅಪ್ರಾಪ್ತ ಬಾಲಕಿ​ಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಹಿನ್ನೆ​ಲೆ​ ಪೋಕ್ಸೋ ಕಾಯ್ದೆ​ಯಡಿ ಪ್ರಕ​ರಣ ದಾಖ​ಲಿ​ಸಿ​ಕೊಂಡು ನಾಲ್ವ​ರನ್ನು ಬಂಧಿಸಿ ನ್ಯಾಯಾಂಗ ಬಂಧ​ನಕ್ಕೆ ಒಪ್ಪಿ​ಸಿದ ಘಟನೆ ಬೀದರ್ ನ‌ ಭಾಲ್ಕಿ ತಾಲೂಕಿನ ಡಾವರಗಾಂವ ದಲ್ಲಿ ನಡೆದಿದೆ. ಗುರು​ವಾರ ಸಂಜೆ 6ರ ಸುಮಾ​ರಿಗೆ ಕಾಲೇಜಿನ ವಿದ್ಯಾರ್ಥಿ ಅಭಿಶೇಕ ಸಂತೋಷ ಮದರಗಾಂವೆ ಹಾಗೂ ಆತನ ಐದಾರು ಜನ ಸ್ನೇಹಿತರು ಕೂಡಿ 4 ಬೈಕ್‌​ಗಳ ಮೇಲೆ ಶಾಲಾ ಬಸ್ಸಿಗೆ ಅಡ್ಡಗಟ್ಟಿನಿಲ್ಲಿಸಿ ಒಮ್ಮೇಲೆ ಬಸ್ಸಿನೊಳಗೆ ಬಂದು

ಬೀದರ್: ಶಾಲಾ ಬಸ್ ತಡೆದು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ| ನಾಲ್ವರು ಹುಡುಗರ ಬಂಧನ Read More »