ಸಾವಿನ ದಾರಿ ತೋರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ| ಸಮಯ ಉಳಿಸುವ ಜೊತೆಗೆ ಆಯುಷ್ಯವೂ ಕಡಿಮೆ!!
ಸಮಗ್ರ ನ್ಯೂಸ್: ದುಬಾರಿ ಟೋಲ್ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿರುವ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ವೇ ಈಗ ಸಾವಿನ ಹೆದ್ದಾರಿಯಾಗುತ್ತಿದೆ. ಬೆಂಗಳೂರು-ಮೈಸೂರು ನಗರಗಳನ್ನು ಬೆಸೆಯುವ ಈ ಹೆದ್ದಾರಿಯಲ್ಲಿ ಪ್ರಯಾಣಿಸಿದರೆ ಪ್ರಯಾಣ ಸಮಯ ಕಡಿಮೆಯಾಗುತ್ತದೆ ಎಂದು ಪ್ರಯಾಣಿಸುವ ಪ್ರಯಾಣಿಕರು ತಮ್ಮ ಆಯುಷ್ಯವನ್ನೇ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಜನವರಿಯಿಂದ ಇಲ್ಲಿಯವರೆಗೂ 105 ಜನ ಪ್ರಾಣ ಕಳೆದುಕೊಂಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ 50, ಮಂಡ್ಯ ಜಿಲ್ಲೆಯಲ್ಲಿ 55 ಜನ ಸಾವನ್ನಪ್ಪಿದ್ದಾರೆ. ರಾಮನಗರ ಜಿಲ್ಲೆಯಲ್ಲಿಯೇ 243 ಅಪಘಾತಗಳು ಸಂಭವಿಸಿದ್ದು 190 ಜನರಿಗೆ ಗಾಯಗಳಾಗಿವೆ. ಸದಾ ಒಂದಿಲ್ಲೊಂದು […]