June 2023

ಇಬ್ರಾಹಿಂ ಗೂನಡ್ಕರವರು ಕುಟುಂಬದೊಂದಿಗೆ ಯುರೋಪ್ ಪ್ರವಾಸ

ಸಮಗ್ರ ನ್ಯೂಸ್: ಜೂನ್ 19 ರಂದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪತ್ನಿ ಸಫಿಯಾ ಇಬ್ರಾಹಿಂ ಜೊತೆ ಪ್ರಯಾಣ ಆರಂಭಿಸಲಿರುವ ಇವರು ಲಂಡನ್ ನಲ್ಲಿ ಉದ್ಯೋಗದಲ್ಲಿರುವ ಪುತ್ರ ಶಾನ್ ಇಬ್ರಾಹಿಂ ರವರನ್ನು ಭೇಟಿಯಾಗಿ ಯುರೋಪ್ ಖಂಡದ 8 ದೇಶಗಳಾದ ಯುನೈಟಡ್ ಕಿಂಗ್ ಡಮ್, ಜರ್ಮನಿ, ನೆದರ್ ಲ್ಯಾಂಡ್, ಇಟಲಿ, ಫ್ರಾನ್ಸ್, ಬೆಲ್ಜಿಯಂ, ಆಸ್ಟ್ರಿಯಾ ಹಾಗೂ ಸ್ವಿಝರ್ ಲ್ಯಾಂಡ್ ದೇಶಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಪುತ್ರಿ ಸನಾ ಇಬ್ರಾಹಿಂ ಪತಿಯೊಂದಿಗೆ ಅಮೇರಿಕಾದ ಕ್ಯಾಲಿಫೋರ್ನಿಯದಲ್ಲಿ ನೆಲೆಸಿದ್ದಾರೆ. ಶುಭ, ಸುರಕ್ಷಿತ ಪ್ರಯಾಣ […]

ಇಬ್ರಾಹಿಂ ಗೂನಡ್ಕರವರು ಕುಟುಂಬದೊಂದಿಗೆ ಯುರೋಪ್ ಪ್ರವಾಸ Read More »

ವಿಧಾನ ಪರಿಷತ್ ಚುನಾವಣೆ| ಕಾಂಗ್ರೆಸ್ ನಿಂದ ಶೆಟ್ಟರ್ ಸೇರಿ ಮೂರು ಮಂದಿಗೆ ಟಿಕೆಟ್

ಸಮಗ್ರ ನ್ಯೂಸ್: ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಈ ಚುನಾವಣೆಯಲ್ಲಿ ಪರಾಭವಗೊಂಡರೂ ಸಹ ಜೂನ್ 30 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಪಡೆದುಕೊಂಡಿದ್ದಾರೆ. ಜೂನ್ 30ರಂದು ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಜಗದೀಶ್ ಶೆಟ್ಟರ್, ತಿಪ್ಪಣ್ಣಪ್ಪ ಕಮಕನೂರು ಹಾಗೂ ಎನ್ ಎಸ್ ಬೋಸರಾಜು ಅವಕಾಶ ಪಡೆದುಕೊಂಡಿದ್ದಾರೆ. ಸಂಖ್ಯಾಬಲದ ಆಧಾರದಲ್ಲಿ ಈ ಮೂರೂ ಸ್ಥಾನಗಳನ್ನು ಕಾಂಗ್ರೆಸ್

ವಿಧಾನ ಪರಿಷತ್ ಚುನಾವಣೆ| ಕಾಂಗ್ರೆಸ್ ನಿಂದ ಶೆಟ್ಟರ್ ಸೇರಿ ಮೂರು ಮಂದಿಗೆ ಟಿಕೆಟ್ Read More »

ನೆಟ್ಟಾರು: ಒಕ್ಕೂಟದ ಪ್ರಥಮ ತ್ರೈಮಾಸಿಕ ಸಭೆ

ಸಮಗ್ರ ನ್ಯೂಸ್: ಬೆಳ್ಳಾರೆ ವಲಯ ಮೇಲ್ವಿಚಾರಕರಾದ ಗೋಪಾಲಕೃಷ್ಣ ಸಭೆಯನ್ನು ಉದ್ದೇಶಿಸಿ ಮಾತನಾಡಿ ಯೋಜನೆಯಿಂದ ಸಿಗುವ ಸೌಲಭ್ಯಗಳನ್ನು ಸದಸ್ಯರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ನೆಟ್ಟಾರು ಪೆರುವಾಜೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯಾದ ಶ್ರೀಮತಿ ಹರಿಣಾಕ್ಷಿ, ಒಕ್ಕೂಟದ ಅಧ್ಯಕ್ಷರಾದ ಅನ್ನು, ಉಪಾಧ್ಯಕ್ಷರಾದ ಶ್ರೀಮತಿ ಪ್ರೇಮ, ಕಾರ್ಯದರ್ಶಿಯಾದ ಶ್ರೀಮತಿ ಶ್ವೇತ, ಜೊತೆ ಕಾರ್ಯದರ್ಶಿ ಅಶೋಕ್, ಕೋಶಾಧಿಕಾರಿ ಶ್ರೀಮತಿ ಹರಿಣಾಕ್ಷಿ ಹಾಗೂ ಎಲ್ಲಾ ತಂಡದ ಸದಸ್ಯರು ಉಪಸ್ಥಿತರಿದ್ದರು.

ನೆಟ್ಟಾರು: ಒಕ್ಕೂಟದ ಪ್ರಥಮ ತ್ರೈಮಾಸಿಕ ಸಭೆ Read More »

ಬಾನೆತ್ತರಕ್ಕೆ ಏರಿದ ಹಣ್ಣು ತರಕಾರಿಗಳ ಬೆಲೆ

ಸಮಗ್ರ ನ್ಯೂಸ್: ಈಗಾಗಲೇ ಪೆಟ್ರೋಲ್ – ಡೀಸೆಲ್ ದರ ಮುಗಿಲು ಮುಟ್ಟಿರುವುದರಿಂದ ಹಲವು ದಿನ ನಿತ್ಯದ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದೀಗ ಮುಂಗಾರು ಮಳೆಯ ವಿಳಂಬದ ಕಾರಣಕ್ಕೆ ಹಣ್ಣು ತರಕಾರಿಗಳ ಬೆಲೆಯು ಸಹ ದಿಢೀರ್ ಏರಿಕೆಯಾಗಿದೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದ ಹಾಗಾಗಿದೆ. ಕೇವಲ ಒಂದು ವಾರದ ಹಿಂದೆ ಕೆಲ ತರಕಾರಿಗಳ ಬೆಲೆ 10 ರೂಪಾಯಿಗಳಿಂದ 50 ರೂಪಾಯಿಗಳವರೆಗೆ ಏರಿಕೆಯಾಗಿದ್ದು, ಗ್ರಾಹಕರನ್ನು ಚಿಂತಾಜನಕ ಸ್ಥಿತಿಗೆ ಕೊಂಡೊಯ್ದಿತ್ತು. ಇದೀಗ ಹಣ್ಣುಗಳ ಬೆಲೆಯಲ್ಲೂ ಸಹ ಏರಿಕೆಯಾಗಿದ್ದು, ತಿನ್ನಲು

ಬಾನೆತ್ತರಕ್ಕೆ ಏರಿದ ಹಣ್ಣು ತರಕಾರಿಗಳ ಬೆಲೆ Read More »

ಉಡುಪಿ: ಬಸ್- ಬೈಕ್ ಅಪಘಾತ| ಗಂಭೀರ ಗಾಯಗೊಂಡಿದ್ದ ಯುವತಿ ಸಾವು

ಸಮಗ್ರ ನ್ಯೂಸ್: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವತಿ ಮಣಿಪಾಲದ ಮೃತಪಟ್ಟಿದ್ದಾಳೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನಿರ್ಮಿತಾ (19) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನಿರ್ಮಿತಾ ಹಾಗೂ ಶಶಾಂಕ್ ಜೂನ್ 18 ರಂದು ಬೈಕನಲ್ಲಿ ತೆರಳುತಿದ್ದಾಗ ಆಗುಂಬೆ ಘಾಟ್‌ನಲ್ಲಿ ಎದುರಿನಿಂದ ಬರುತ್ತಿದ್ದ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದರು. ಈ ದುರ್ಘಟನೆ ವೇಳೆ ಶಶಾಂಕ್ (21) ಸ್ಥಳದಲ್ಲೇ ಮೃತಪಟ್ಟಿದ್ದರು.ಇನ್ನೂ ಶಶಾಂಕ್ ಮತ್ತು ನಿರ್ಮಿತಾ ಇವರಿಬ್ಬರು ಉಡುಪಿಯ ಬಾರ್ಕೂರಿನ ನಾಗರಮಠದವರು. ಶಶಾಂಕ್ ಇಂಜಿನಿಯರಿಂಗ್

ಉಡುಪಿ: ಬಸ್- ಬೈಕ್ ಅಪಘಾತ| ಗಂಭೀರ ಗಾಯಗೊಂಡಿದ್ದ ಯುವತಿ ಸಾವು Read More »

ಪೊನ್ನಂಪೇಟೆ: ಹುಲಿ ದಾಳಿಗೆ ಎಮ್ಮೆ ಬಲಿ

ಸಮಗ್ರ ನ್ಯೂಸ್:‌ ಹುಲಿ ದಾಳಿಗೆ ಎಮ್ಮೆ ಬಲಿಯಾದ ಘಟನೆ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಬಾಡಗರಕೇರಿ ಗ್ರಾಮದಲ್ಲಿ ನಡದಿದೆ, ರೈತ ಚಂದ್ರಶೇಖರ್ ಅವರಿಗೆ ಸೇರಿದ ಎಮ್ಮೆಯನ್ನು ಮೇಯಲು ಗದ್ದೆಯಲ್ಲಿ ಕಟ್ಟಿದ್ದ ಸಂದರ್ಭ ಜೂ.18ರಂದು ಸಂಜೆ ಹುಲಿ ದಾಳಿ ನಡೆಸಿದೆ. ಎಮ್ಮೆ ಕಳೆದುಕೊಂಡಿರುವ ರೈತನಿಗೆ ಹೆಚ್ಚಿನ ಪರಿಹಾರಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪೊನ್ನಂಪೇಟೆ: ಹುಲಿ ದಾಳಿಗೆ ಎಮ್ಮೆ ಬಲಿ Read More »

ಪುತ್ತೂರು: ಬ್ಯಾನರ್ ಪ್ರಕರಣದಲ್ಲಿ ಪೊಲೀಸ್ ದೌರ್ಜನ್ಯ| ಡಿವೈಎಸ್ಪಿ ವೀರಯ್ಯ ಹಿರೇಮಠ ಜಾಮೀನಿನ ಮೇಲೆ ಬಿಡುಗಡೆ

ಸಮಗ್ರ ನ್ಯೂಸ್: ಪುತ್ತೂರುನಲ್ಲಿ ನಡೆದಿದ್ದ ಬ್ಯಾನರ್ ಪ್ರಕರಣದಲ್ಲಿ ಯುವಕರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿರುವ ಆರೋಪ ಎದುರಿಸುತ್ತಿರುವ ಡಿವೈಎಸ್ಪಿ ಡಾ|ವೀರಯ್ಯ ಹಿರೇಮಠ ಅವರು ನ್ಯಾಯಾಲಯಕ್ಕೆ ಶರಣಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಪುತ್ತೂರಿನ ಬಸ್ ನಿಲ್ದಾಣದ ಬಳಿ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರವನ್ನೊಳಗೊಂಡ ಬ್ಯಾನರ್‌ಗೆ ಶ್ರದ್ಧಾಂಜಲಿ ಬರಹದೊಂದಿಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಯುವಕರನ್ನು ಪೊಲೀಸರು ಬಂಧಿಸಿ ಡಿವೈಎಸ್ಪಿ ಕಚೇರಿಗೆ ಕರೆದೊಯ್ದು ದೌರ್ಜನ್ಯ ನಡೆಸಿದ್ದರು

ಪುತ್ತೂರು: ಬ್ಯಾನರ್ ಪ್ರಕರಣದಲ್ಲಿ ಪೊಲೀಸ್ ದೌರ್ಜನ್ಯ| ಡಿವೈಎಸ್ಪಿ ವೀರಯ್ಯ ಹಿರೇಮಠ ಜಾಮೀನಿನ ಮೇಲೆ ಬಿಡುಗಡೆ Read More »

ಕೊಡಗು ಪತ್ರಕರ್ತರ ಸಂಘದ ವಾರ್ಷಿಕೋತ್ಸವ|ಐದು ಮಂದಿ ಪತ್ರಕರ್ತರಿಗೆ ಪ್ರಶಸ್ತಿ ವಿತರಣೆ

ಸಮಗ್ರ ನ್ಯೂಸ್: ಕೊಡಗಿನಲ್ಲಿ ವೈದ್ಯಕೀಯ ಕ್ಷೇತ್ರ ತೀರಾ ಹಿಂದುಳಿದಿದ್ದು, ಇದು ಆದಷ್ಟು ಶೀಘ್ರವಾಗಿ ಅಭಿವೃದ್ಧಿಯಾಗಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಅನುಭವಿ ತಜ್ಞ ವೈದ್ಯರು ಒಟ್ಟಾಗಿ ಚರ್ಚಿಸಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇದಕ್ಕೆ ಪೂರಕವಾಗಿ ತಾನು ಯಾವುದೇ ಸಹಾಯ ಬೇಕಾದರೂ ಮಾಡಲು ಸಿದ್ಧ ಎಂದು ನಿವೃತ್ತ ಲೆ.ಜ. ಡಾ. ಬಿ.ಎನ್.ಬಿ.ಎಂ. ಪ್ರಸಾದ್ ಅವರು‌ ಕೊಡಗು ಪತ್ರಕರ್ತರ ಸಂಘದ ವಾರ್ಷಿಕೋತ್ಸವದಲ್ಲಿ ಭರವಸೆ ನೀಡಿದರು.ಮಡಿಕೇರಿಯ ಪತ್ರಿಕಾಭವನದ ಸಭಾಂಗಣದಲ್ಲಿ ಭಾನುವಾರ ನಡೆದ ಕೊಡಗು ಪತ್ರಕರ್ತರ ಸಂಘದ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಪ್ರಶಸ್ತಿ

ಕೊಡಗು ಪತ್ರಕರ್ತರ ಸಂಘದ ವಾರ್ಷಿಕೋತ್ಸವ|ಐದು ಮಂದಿ ಪತ್ರಕರ್ತರಿಗೆ ಪ್ರಶಸ್ತಿ ವಿತರಣೆ Read More »

ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ| ಒಂದು ರೂಪಾಯಿಯನ್ನೂ ಪಡೆಯದೇ ನಿರಪರಾದಿಗೆ ನ್ಯಾಯ ಕೊಡಿಸಿದ ಯುವ ವಕೀಲರು

ಸಮಗ್ರ ನ್ಯೂಸ್: ದೇಶವನ್ನೇ ಬೆಚ್ಚಿಬೀಳಿಸಿದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕೊನೆಗೂ ನಿರಪರಾಧಿಗೆ ನ್ಯಾಯ ಸಿಕ್ಕಿದೆ. ಸಂತೋಷ್‌ ರಾವ್‌ ಸುಮಾರು 11 ವರ್ಷಗಳ ಕಾಲ ಅನುಭವಿಸಿದ್ದ ಜೈಲು ಶಿಕ್ಷೆಯಿಂದ ಕೊನೆಗೂ ಮುಕ್ತಿ ದೊರಕಿದೆ. 1 ರೂಪಾಯಿಯನ್ನೂ ತೆಗೆದುಕೊಳ್ಳದೇ ನಿರಪರಾಧಿಗೆ ನ್ಯಾಯ ಕೊಡಿಸಲು ಶ್ರಮಿಸಿದ್ದ ಪುತ್ತೂರು ಮೂಲದ ಮೋಹಿತ್ ಕುಮಾರ್ ಹಾಗೂ ನವೀನ್ ಕುಮಾರ್ ಪದ್ಯಾಣ ಅವರಿಗೆ ಎಲ್ಲೆಡೆಯಿಂದಲೂ ಪ್ರಶಂಸೆ, ಮೆಚ್ಚುಗೆ ವ್ಯಕ್ತವಾಗುತ್ತಿದೆ. 2012ರಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ವಿದ್ಯಾರ್ಥಿನಿ

ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ| ಒಂದು ರೂಪಾಯಿಯನ್ನೂ ಪಡೆಯದೇ ನಿರಪರಾದಿಗೆ ನ್ಯಾಯ ಕೊಡಿಸಿದ ಯುವ ವಕೀಲರು Read More »

ತುಂಗೆಯಲ್ಲಿ ಈಜಲು ತೆರಳಿದ ಉಪನ್ಯಾಸಕರು ನೀರುಪಾಲು

ಸಮಗ್ರ ನ್ಯೂಸ್: ನಿಟ್ಟೆಯ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಉಪನ್ಯಾಸಕರು ತುಂಗಾ ನದಿಗೆ ಈಜಲು ತೆರಳಿದ್ದಾಗ, ನೀರಿನ ಸೆಳೆತಕ್ಕೆ ಸಿಲುಕಿ ಬಾರದಲೋಕಕ್ಕೆ ಪಯಣ ಬೆಳೆಸಿದ್ದಾರೆ. ಸದ್ಯ ಒಬ್ಬ ಉಪನ್ಯಾಸಕರ ಮೃತದೇಹ ಪತ್ತೆಯಾಗಿದೆ. ಮೃತ ದುರ್ದೈವಿಗಳು ಕಾರ್ಕಳ ನಿಟ್ಟೆ ಕಾಲೇಜಿನಲ್ಲಿ ಉಪನ್ಯಾಸಕರಾದ ಪುನೀತ್‌ (38 ವರ್ಷ) ಮತ್ತು ಬಾಲಾಜಿ (36 ವರ್ಷ) ಎಂದು ಗುರುತಿಸಲಾಗಿದೆ. ಇಬ್ಬರು ಉಪನ್ಯಾಸಕರು ತಮ್ಮ ಗೆಳಯರೊಂದಿಗೆ ಪ್ರವಾಸಕ್ಕೆ ಹೋಗಿದ್ದರು. ತೀರ್ಥಹಳ್ಳಿಯ ತೀರ್ಥಮತ್ತೂರು ಮಠದ ಸಮೀಪ ಇರುವ ಹೋಂ ಸ್ಟೇಯಲ್ಲಿ ಉಳಿದುಕೊಂಡಿದ್ದರು. ತೀರ್ಥಹಳ್ಳಿ ಪೊಲೀಸರು ಮತ್ತು

ತುಂಗೆಯಲ್ಲಿ ಈಜಲು ತೆರಳಿದ ಉಪನ್ಯಾಸಕರು ನೀರುಪಾಲು Read More »