Ad Widget .

ಮೊದಲ ರಾತ್ರಿಯೇ ಮಗು ಹೆತ್ತ ನವ ವಧು!!

ಸಮಗ್ರ ನ್ಯೂಸ್: ಮದುವೆಯಾದ ಮೊದಲನೇ ರಾತ್ರಿಯೇ ವಧು ಮಗುವಿಗೆ ಜನ್ಮ ನೀಡಿದ ಘಟನೆ ದೆಹಲಿ ಹೊರವಲಯದ ಗ್ರೇಟರ್‌ ನೊಯ್ಡಾದಲ್ಲಿ ವರದಿಯಾಗಿದೆ.

Ad Widget . Ad Widget .

ಗ್ರೇಟರ್‌ ನೊಯ್ಡಾದ ವರನಿಗೆ ತೆಲಂಗಾಣದ ಸಿಕಂದರಾಬಾದ್‌ನ ಯುವತಿಯೊಬ್ಬಳ ಜತೆಗೆ ಜೂ.26ರಂದು ಮದುವೆ ನಡೆಯಿತು. ಪ್ರಥಮ ರಾತ್ರಿಯಂದು ವಧು ತನಗೆ ಹೊಟ್ಟೆ ನೋವು ಎಂದು ಹೇಳಿದ್ದಾಳೆ. ಹುಡುಗನ ಮನೆಯವರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

Ad Widget . Ad Widget .

ತಪಾಸಣೆ ನಡೆಸಿದ ವೈದ್ಯರು, ಆಕೆ 7 ತಿಂಗಳ ಗರ್ಭಿಣಿ ಎಂದು ಹೇಳಿದ್ದಾರೆ. ಮುಂಜಾನೆ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. “ವಧುವಿಗೆ ಹೊಟ್ಟೆ ಹುಬ್ಬಿದ್ದ ಬಗ್ಗೆ ಪ್ರಶ್ನಿಸಿದಕ್ಕೆ, “ಹೊಟ್ಟೆಯಲ್ಲಿ ಕಲ್ಲಾಗಿದ್ದ ಕಾರಣ, ಇತ್ತೀಚೆಗೆ ಶಸ್ತ್ರ ಚಿಕಿತ್ಸೆ ಆಗಿರುವುದರಿಂದ ಹೊಟ್ಟೆ ಹುಬ್ಬಿದೆ’ ಎಂದು ಆಕೆಯ ಮನೆಯವರು ಸಮಜಾಯಿಷಿ ನೀಡಿದ್ದರು.

ಆಕೆ ಗರ್ಭಿಣಿಯಾಗಿರುವುದು ತಿಳಿದಿದ್ದರೂ ಆಕೆಯ ಕುಟುಂಬದವರು ವಿಷಯವನ್ನು ಮುಚ್ಚಿಟ್ಟಿದ್ದರು,” ಎಂದು ಹುಡುಗನ ಕುಟುಂಬದವರು ದೂರಿದ್ದಾರೆ. ವಧುವಿನ ಪೋಷಕರು ಬಂದು ತಾಯಿ-ಮಗುವನ್ನು ತಮ್ಮ ಜತೆಗೆ ಸಿಕಂದರಾಬಾದ್‌ಗೆ ಕರೆದುಕೊಂಡು ಹೋಗಿದ್ದಾರೆ.

Leave a Comment

Your email address will not be published. Required fields are marked *