Ad Widget .

ಸುಬ್ರಹ್ಮಣ್ಯ: ಕೆ. ಎಸ್.ಎಸ್. ಕಾಲೇಜಿನಲ್ಲಿ ಹಲಸು ಮೇಳ ಪ್ರದರ್ಶನ | ವಿದ್ಯಾರ್ಥಿಗಳಿಂದ ಹಲಸಿನ ಖಾದ್ಯಗಳ ಪ್ರದರ್ಶನ ಮತ್ತು ಮಾರಾಟ

ಸಮಗ್ರ ನ್ಯೂಸ್: ಸುಬ್ರಹ್ಮಣ್ಯ ಎಸ್.ಎಸ್. ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸ ಕೋಶ ಹಾಗೂ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗ ಇದರ ಆಶ್ರಯದಲ್ಲಿ ಜೂನ್ 30 ರಂದು ಹಲಸು ಮೇಳ-2023 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Ad Widget . Ad Widget .

ಕಾರ್ಯಕ್ರಮದ ಉದ್ಘಾಟನೆಯನ್ನು ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ಶ್ರೀ ಮಂಕುಡೆ ವೆಂಕಟರಮಣ ರಾವ್ ನೆರವೇರಿಸಿದರು. ಮುಖ್ಯ ಅಭ್ಯಾಗತರಾಗಿ ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಮತ್ತು ಸುಬ್ರಹ್ಮಣ್ಯ ದೇವಸ್ಥಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಡಾ.ನಿಂಗಯ್ಯ ಭಾಗವಹಿಸಿದ್ದರು.

Ad Widget . Ad Widget .

ವಿದ್ಯಾರ್ಥಿಗಳೇ ತಯಾರಿಸಿದ ಹೊಸ ರೀತಿಯ ಸ್ವಾದಿಷ್ಟವಾದ ಹಲಸಿನ ಖಾದ್ಯಗಳ ಪ್ರದರ್ಶನ ಮತ್ತು ಮಾರಾಟ ಮನಸ್ಸೆಳೆಯುತ್ತಿತ್ತು. ವಿವಿಧ ತಳಿಯ ಹಲಸಿನ ಹಣ್ಣುಗಳ ಮತ್ತು ವಿವಿಧ ಹಲಸು ತಳಿಗಳ ಸಸ್ಯ ಪ್ರದರ್ಶನ ಮತ್ತು ಮಾರಾಟ ಎಲ್ಲರ ಗಮನ ಸೆಳೆಯುತ್ತಿತ್ತು.

ಈ ಸಂದರ್ಭದಲ್ಲಿ ಕೆ.ಎಸ್.ಎಸ್. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ದಿನೇಶ್ ಕೆ., ಕಾಲೇಜಿನ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬೇರೆ ಬೇರೆ ಶಾಲೆಗಳ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಮೇಳದಲ್ಲಿ ಭಾಗವಹಿಸಿದ್ದರು.

Leave a Comment

Your email address will not be published. Required fields are marked *