Ad Widget .

ಸುಳ್ಯ:ಜೂ.29 ರಂದು ಸ್ವರ್ಣ ಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ಶುಭಾರಂಭ|ಠೇವಣಾತಿಗಳಿಗೆ ಆಕರ್ಷಕ ಬಡ್ಡಿ ದರ

ಸಮಗ್ರ ನ್ಯೂ ಸ್: ಸುಳ್ಯದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಸ್ವರ್ಣ ಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿಯ ಉದ್ಘಾಟನೆ ಜೂ.29 ರಂದು ನಡೆಯಲಿದೆ.

Ad Widget . Ad Widget .

ಸುಳ್ಯ ರಥಬೀದಿಯ ವಿನಾಯಕ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಕಾರ್ಯಾರಂಭ ಮಾಡಲಿರುವ ಸ್ವರ್ಣ ಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿಯನ್ನು ಸುಳ್ಯ ವೃತ್ತ ನಿರೀಕ್ಷಕರಾದ ನವೀನ್‌ಚಂದ್ರ ಜೋಗಿ ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಯಾಗಿ ವೆಂಕಟ್ರಮಣ‌ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಸಿ.ಜಯರಾಮ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

Ad Widget . Ad Widget .

ಠೇವಣಾತಿ ಮೇಲೆ ಆಕರ್ಷಕ ಬಡ್ಡಿ ದರ:
ಸಂಸ್ಥೆಯ ಉದ್ಘಾಟನೆಯ ಪ್ರಯುಕ್ತ ಠೇವಣಾತಿಗಳ‌ ಮೇಲೆ ಆಕರ್ಷಕ ಬಡ್ಡಿ ದರ ನೀಡಲಾಗುವುದು.ನಿರಖು ಠೇವಣಿ 30 ರಿಂದ 90 ದಿನಗಳ ವರೆಗೆ .6%, 91ರಿಂದ 180 ದಿನಗಳವರೆಗೆ 6.50%, 181 ರಿಂದ 364 ದಿನಗಳವರೆಗೆ 8%, ಒಂದು ವರ್ಷ ಮೇಲ್ಪಟ್ಟು 10 % ಬಡ್ಡಿ ನೀಡಲಾಗುವುದು.

ಹಿರಿಯ ನಾಗರಿಕರಿಗೆ 0.50% ಹೆಚ್ಚುವರಿ ಬಡ್ಡಿ ನೀಡಲಾಗುತ್ತದೆ. ಸ್ವರ್ಣ ನಿಧಿ ಠೇವಣಿ 99 ತಿಂಗಳಿಗೆ
ದ್ವಿಗುಣಗೊಳ್ಳುವುದು. ಉಳಿತಾಯ ಖಾತೆಗೆ ಶೇ.4%, ಆವರ್ತನ ನಿಧಿ ಒಂದು ವರ್ಷ ಮೇಲ್ಪಟ್ಟು 9.50%, ಸ್ವರ್ಣ ದಿನ ಠೇವಣಿ(ಪಿಗ್ಮಿ-ಒಂದು ವರ್ಷ ಮೇಲ್ಪಟ್ಟು) 4%. ಬಡ್ಡಿ ನೀಡಲಾಗುತ್ತದೆ.
ಸಾಲಗಳನ್ನು ಕಡಿಮೆ ಬಡ್ಡಿ ದರದಲ್ಲಿ ತ್ವರಿತವಾಗಿ ನೀಡಲಾಗುವುದು‌.

ವಾಹನ ಸಾಲ, ಚಿನ್ನಾಭರಣ ಈಡಿನ ಸಾಲ, ಭೂ ಅಡಮಾನ ಸಾಲ, ವೇತನ ಆಧಾರಿತ ಸಾಲ, ಭೂಮಿ ಖರೀದಿ ಸಾಲ, ಜಾಮೀನು ಸಾಲ, ವ್ಯಾಪಾರ ಅಭಿವೃದ್ಧಿ ಸಾಲ, ಮನೆ ನಿವೇಶನ ಖರೀದಿ‌ ಸಾಲ, ಮನೆ ನಿರ್ಮಾಣ ಸಾಲ ನೀಡಲಾಗುತ್ತದೆ ಎಂದು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ ತಿಳಿಸಿದ್ದಾರೆ.

Leave a Comment

Your email address will not be published. Required fields are marked *