Ad Widget .

ಪಂಜ: ಪಂಚಶ್ರೀ ಜೆಸಿಐ ವತಿಯಿಂದ ಗದ್ದೆನಾಟಿ

ಸಮಗ್ರ ನ್ಯೂಸ್: ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಪಂಜದಲ್ಲಿ ಜೇಸಿಐ ಪಂಜ ಪಂಚಶ್ರೀಯ ಬೆಳ್ಳಿ ಹಬ್ಬ ಸಂಭ್ರಮದ ಸವಿನೆನಪಿಗಾಗಿ ದಾನಿಗಳಿಂದ ದೇವಳದ ಗದ್ದೆಯಲ್ಲಿ ಎರಡನೇ ವರ್ಷದ ಸಾಗುವಳಿ ಮಾಡಲಾಯಿತು. ಜೇಸಿಐ ಪಂಜ ಪಂಚಶ್ರೀ ಹಾಗೂ ಶ್ರೀ ಪರಿವಾರ ಪಂಚಲಿಗೇಶ್ವರ ದೇವಸ್ಥಾನದ ಜಂಟಿ ಆಶ್ರಯದಲ್ಲಿ ದೇವಳದ ಗದ್ದೆಗೆ ತೆರಳಿ ನಾಟಿ ಮಾಡಲಾಯಿತು.

Ad Widget . Ad Widget .

ಜೇಸಿಐ ಪಂಜ ಪಂಚಶ್ರೀಯ ಪೂರ್ವ ಅಧ್ಯಕ್ಷರಾದ ಜೇಸಿ.ತೀರ್ಥಾನಂದ ಕೊಡಂಕಿರಿಯವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ನಡೆನಡೆಯಿತು.

Ad Widget . Ad Widget .

ಈ ಸಂದರ್ಭದಲ್ಲಿ ಪಂಜ ಜೇಸಿಐ ಪಂಚಶ್ರೀಯ ರಜತ ವರ್ಷದ ಅಧ್ಯಕ್ಷ ಜೇಸಿ.ಶಿವಪ್ರಸಾದ್ ಹಾಲೆಮಜಲು, ಪೂರ್ವ ಅಧ್ಯಕ್ಷ ಶಶಿಧರ ಪಳಂಗಾಯ, ಸುದರ್ಶನ ಪಟ್ಟಾಜೆ, ಸದಸ್ಯರುಗಳಾದ ಗಗನ್ ಕಿನ್ನಿಕುಮೇರಿ, ತೀರ್ಥಪ್ರಸಾದ್ ಪಲ್ಲತಡ್ಕ ಮತ್ತು ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಆಡಳಿತ ಮಂಡಳಿ ಸದಸ್ಯರಾದ ಲಕ್ಷ್ಮಣ ಗೌಡ ಅಕ್ರಿಕಟ್ಟೆ, ಶ್ರೀಮತಿ ಸೌಮ್ಯ ರಾಮಕೃಷ್ಣ ಕರಿಕ್ಕಳ, ಪಂಬೆತ್ತಾಡಿ ಅಮೃತ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಅನಿತಾಕುಲ್ದೀಪ್ ಸುತ್ತುಕೋಟೆ, ಪೂರ್ವಾಧ್ಯಕ್ಷೆ ರತಿದೇವಿ ಜಾಕೆ ಉಪಸ್ಥಿತರಿದ್ದರು.

ಶ್ರೀ ವಿಶ್ವನಾಥ ಜಾಕೆ, ಶ್ರೀ ರಾಮಕೃಷ್ಣ ಕರಿಕ್ಕಳ, ಭಾಗೀರಥಿ ಗೋಳಿಕಟ್ಟೆ ಕುಸುಮ ಮಡಪ್ಪಾಡಿ, ರತಿ ಮಡಪ್ಪಾಡಿ ಹಾಗೂ ದೇವಳದ ಸಿಬ್ಬಂದಿಗಳಾದ ಸಂತೋಷ್, ಕೃಷ್ಣಪ್ಪ ಹಾಗೂ ಸುಂದರ ರವರು ಸಹಕರಿಸಿದರು.

Leave a Comment

Your email address will not be published. Required fields are marked *