ಸಮಗ್ರ ನ್ಯೂಸ್: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ನಲ್ಲಿ ಅಧಿಕ ಟೋಲ್ ಸಂಗ್ರಹಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಅಲ್ಲದೇ, ಹೆದ್ದಾರಿಯಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿವೆ ಎನ್ನುವ ಆರೋಪಗಳು ಕೇಳಿಬರುತ್ತಿದ್ದು. ಇದರ ಮಧ್ಯೆ ಈ ಹೆದ್ದಾರಿಯಲ್ಲಿ ಮತ್ತೊಂದು ಟೋಲ್ ಗೇಟ್ ಕಾರ್ಯಾರಂಭಕ್ಕೆ ಸಜ್ಜಾಗಿದೆ.
ಜುಲೈ 1ರಿಂದ ಮಂಡ್ಯ ವ್ಯಾಪ್ತಿಯ ಟೋಲ್ ಸಂಗ್ರಹ ಆರಂಭವಾಗಲಿದೆ. ಮಂಡ್ಯ ಜಿಲ್ಲೆಯ 55-134 ಕಿಮೀ ವ್ಯಾಪ್ತಿಗೆ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಇರುವ ಟೋಲ್ ಪ್ಲಾಜಾ ನಿರ್ಮಿಸಿದೆ.
ಏಕಮುಖ ಸಂಚಾರಕ್ಕೆ ನಿಗದಿ ಮಾಡಿರುವ ಟೋಲ್ ಹಣ:
ಕಾರು, ಜೀಪು, ವ್ಯಾನು – 155 ರೂ.
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 250 ರೂ.
ಟ್ರಕ್/ಬಸ್ (ಎರಡು ಆಕ್ಸಲ್ ಗಳದ್ದು) 525 ರೂ
ಮೂರು ಆಕ್ಸಲ್ ವಾಣಿಜ್ಯ ವಾಹನ – 575 ರೂ.
ಭಾರಿ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸಲ್ ವಾಹನ (4ರಿಂದ 6 ಆಲೆಕ್ಸ್ಗಳದ್ದು) – 825 ರೂ.
ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸಲ್ ಗಳದ್ದು) – 1005 ರೂ.
ಅದೇ ದಿನ ಹೋಗಿಬರುವುದಕ್ಕೆ
ಕಾರು, ಜೀಪು, ವ್ಯಾನು – 235 ರೂ
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 375 ರೂ
ಟ್ರಕ್/ಬಸ್ (ಎರಡು ಆಕ್ಸಲ್ ಗಳದ್ದು) 790 ರೂ
ಮೂರು ಆಕ್ಸಲ್ ವಾಣಿಜ್ಯ ವಾಹನ – 860 ರೂ
ಭಾರಿ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸಲ್ ವಾಹನ (4ರಿಂದ 6 ಆಲೆಕ್ಸ್ಗಳದ್ದು) – 1240 ರೂ
ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸಲ್ ಗಳದ್ದು) – 1510 ರೂ
ಮಂಡ್ಯ ಜಿಲ್ಲೆಯ ವಾಹನಗಳಿಗೆ
ಕಾರು, ಜೀಪು, ವ್ಯಾನು – 80 ರೂ.
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 125 ರೂ.
ಟ್ರಕ್/ಬಸ್ (ಎರಡು ಆಕ್ಸಲ್ ಗಳದ್ದು) 265 ರೂ.
ಮೂರು ಆಕ್ಸಲ್ ವಾಣಿಜ್ಯ ವಾಹನ – 285 ರೂ
ಭಾರಿ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸಲ್ ವಾಹನ (4ರಿಂದ 6 ಆಕ್ಸಲ್ ಗಳದ್ದು) – 415 ರೂ
ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸಲ್ ಗಳದ್ದು) – 505 ರೂ.