ಸೋಮವಾರಪೇಟೆ: ಎನ್ಐಎ ದಾಳಿ| ನೆಟ್ಟಾರ್ ಹತ್ಯೆ ಸಂಬಂಧಿಸಿ ಆರೋಪಿಗಳ ಮನೆಯಲ್ಲಿ ಮಹತ್ವದ ದಾಖಲೆ ವಶ

ಸಮಗ್ರ ನ್ಯೂಸ್: ಬಿಜೆಪಿ ಯುವಮೋರ್ಚ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಆರೋಪಿಗಳ ಸಂಬಂಧಿಕರ ಮನೆಗಳಲ್ಲಿ ರಾಷ್ಟ್ರೀಯ ತನಿಖಾ ದಳ (NIA) ತಪಾಸಣೆ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.

Ad Widget ... ..

ಸೋಮವಾರಪೇಟೆಯ ಅಬ್ದುಲ್ ನಾಸೀರ್, ಅಬ್ದುಲ್ ರೆಹಮಾನ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನೌಶಾದ್ ಅವರುಗಳ ಮನೆಯಲ್ಲಿ ದಾಳಿ ಸಂದರ್ಭದಲ್ಲಿ ಕೆಲವು ಎಲೆಕ್ಟ್ರಾನಿಕ್ಸ್ ಉಪಕರಣಗಳು ಮತ್ತು ಮಹತ್ವದ ದಾಖಲೆ ಪತ್ರಗಳು ಎನ್ಐಎ ವಶವಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆ ಈ ಮೂವರೂ ನೆರವು ನೀಡಿದ್ದಾರೆ ಎಂಬುದಕ್ಕೆ ಬಲವಾದ ಸಾಕ್ಷಿಗಳು ದೊರಕಿದೆ.

Ad Widget

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಐವರು ಆರೋಪಿಗಳಲ್ಲಿ ಸೋಮವಾರಪೇಟೆಯ ಅಬ್ದುಲ್ ನಾಸೀರ್ ಮತ್ತು ಅಬ್ದುಲ್ ರೆಹಮಾನ್ ಕೂಡ ಭಾಗಿಯಾಗಿ ಭಾಗಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಇವರಿಬ್ಬರನ್ನು ಸೇರಿದಂತೆ ಈವರೆಗೆ 22 ಮಂದಿ ಆರೋಪಿಗಳ ವಿರುದ್ದ ಎನ್ಐಎ ಚಾಜ್೯ ಶೀಟ್ ದಾಖಲಿಸಿದೆ.

ಕಳೆದ ವಷ೯ ಜುಲೈ 26 ರಂದು ಪ್ರವೀಣ್ ನೆಟ್ಟಾರ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿತ ತನಿಖೆ ಮತ್ತಷ್ಟು ಬಿರುಸಿನ ಕಾರ್ಯಚರಣೆಯನ್ನು ಆರೋಪಿಗಳ ಪತ್ತೆಗಾಗಿ ಕೈಗೊಳ್ಳಲಾಗಿದೆ ಎಂದು ಎನ್ಐಎ ಅಧಿಕೖತ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

Leave a Comment

Your email address will not be published. Required fields are marked *