Ad Widget .

ಟೊಮ್ಯಾಟೊ 100 ನಾಟೌಟ್; ಉಳಿದ ತರಕಾರಿಗಳೂ ಸೆಂಚುರಿ ಸನಿಹಕ್ಕೆ| ಇಲ್ಲಿದೆ ಮಾರುಕಟ್ಟೆಯ ದರಪಟ್ಟಿ

ಸಮಗ್ರ ನ್ಯೂಸ್: ಶತಕ ದಾಟಿರುವ ಟೊಮೆಟೋ ದರ ಮಂಗಳವಾರವೂ ದುಬಾರಿಯಾಗಿಯೇ ಮುಂದುವರಿದಿದ್ದು, ರಾಜ್ಯ ರಾಜಧಾನಿಯ ಪ್ರಮುಖ ಮಂಡಿಗಳಿಗೆ ತುಸು ಹೆಚ್ಚಿನ ಪ್ರಮಾಣದ ಟೊಮೆಟೋ ಬಂದಿದ್ದರಿಂದ ಬೆಲೆ ಕೊಂಚ ಇಳಿಕೆಯಾಗಿತ್ತು. ಸೋಮವಾರಕ್ಕೆ ಹೋಲಿಸಿದರೆ ಹಾಪ್‌ಕಾಮ್ಸ್‌ನಲ್ಲಿ 15 ಕಡಿಮೆಯಾಗಿ ಒಂದು ಕೆಜಿಗೆ 110ಗೆ ಮಾರಾಟವಾಗಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲೂ ಹೆಚ್ಚು ಕಡಿಮೆ ಇದೇ ದರವಿತ್ತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ದರ ನೂರರ ಗಡಿ ದಾಟಿದೆ ಹೆಚ್ಚಾಗಿದೆ ಎಂಬ ಸುದ್ದಿಯಿಂದ ದಾಸ್ತಾನಿದ್ದ ಟೊಮೆಟೋ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಂದ ಕಾರಣ ಬೆಲೆ ಸ್ವಲ್ಪ ಕಡಿಮೆಯಾಗಿತ್ತು. ಆದರೆ ಕೊಂಚ ಇಳಿದ ದರ ಸ್ಥಿರವಾಗಿ ನಿಲ್ಲುವ ಅಥವಾ ಸದ್ಯಕ್ಕೆ ಬೆಲೆ ಇಳಿಯುವ ಯಾವುದೇ ಲಕ್ಷಣವಿಲ್ಲ.

Ad Widget . Ad Widget . Ad Widget .

ಬಕ್ರೀದ್‌ ಕಾರಣಕ್ಕೆ ಸ್ವಲ್ಪ ಬೆಲೆ ಕಡಿಮೆ ಆಗಿದ್ದಿರಬಹುದು. ಇನ್ನೂ ನಾಲ್ಕೈದು ದಿನಗಳ ಕಾಲ ಹೆಚ್ಚೂ ಕಡಿಮೆ ಇದೆ ದರ ಮುಂದುವರೆಯಬಹುದು, ಆದರೆ ಇತರೆಡೆಯಿಂದ ಟೊಮೆಟೋ ಮಾರುಕಟ್ಟೆಗೆ ಬಂದಲ್ಲಿ ಮಾತ್ರ ಬೆಲೆ ನಿಯಂತ್ರಣವಾಗಬಹುದು ಎಂದು ವರ್ತಕರು ತಿಳಿಸಿದ್ದಾರೆ.

ಕೇವಲ ಒಂದೆರಡು ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ಒಂದು ಬಾಕ್ಸ್‌ಗೆ 50 ರು.ನಂತೆ ಮಾರಿ ಹೋಗಿದ್ದೇವೆ. ಈಗ ನಗರದ ಮಾರುಕಟ್ಟೆಗಳಲ್ಲಿ ಟೊಮೆಟೋಗೆ ಬೆಲೆಯೇನೋ ಇದೆ. ಆದರೆ, ನಮ್ಮ ಬಳಿ ಉತ್ಪನ್ನವೇ ಇಲ್ಲ. ಹಿಂದೆ ಮಳೆ ವೈಪರಿತ್ಯಕ್ಕೆ ಟೊಮೆಟೋ ನಾಶವಾಗಿದೆ. ಈಗ ಕಾಯಿ ಬಿಟ್ಟ ಸಸಿಗಳೂ ಇಲ್ಲ. ಹಿಂದಿನ ದಿನಗಳಲ್ಲಿನ ನಷ್ಟವನ್ನು ಈಗ ಒಂದಿಷ್ಟು ತುಂಬಿಕೊಂಡಂತಾಗುತ್ತಿದೆ ಅಷ್ಟೇ ಎಂದು ಮಾರುಕಟ್ಟೆಗೆ ಬಂದಿದ್ದ ರೈತರು ಹೇಳಿದರು.
ಬೀನ್ಸ್‌, ನವಿಲುಕೋಸು ಬೆಲೆ ಕೂಡ ಏರಿಕೆಯಾಗುತ್ತಲೇ ಇದೆ. ಇದರ ಜೊತೆಗೆ ಹಸಿಶುಂಠಿ ಕಳೆದ 12 ದಿನಗಳಲ್ಲಿ ಪುನಃ 10-15ರು. ಏರಿಕೆಯಾಗಿ ಕೆಜಿಗೆ . 270ರಷ್ಟಾಗಿದೆ. ಬ್ರಕೋಲಿ ಬೆಲೆಯಲ್ಲಿ . 30 ರು ಕಡಿಮೆಯಾಗಿದ್ದು ಸದ್ಯ . 170 ಇದೆ.

ತರಕಾರಿ ದರ:
ಟೊಮೆಟೋ ₹.110
ಬಟಾಣಿ ₹. 208
ಡಬ್ಬಲ್‌ ಬೀನ್ಸ್‌ ₹. 250
ಕ್ಯಾರೆಟ್‌ ₹.90
ಗೆಡ್ಡೆಕೋಸು ₹.80
ಹಸಿಮೆಣಸಿಕಾಯಿ ₹120

Leave a Comment

Your email address will not be published. Required fields are marked *