Ad Widget .

ತಹಶೀಲ್ದಾರ್ ಸೊರಕೆ ಅಜಿತ್ ಕುಮಾರ್ ರೈ ಮನೆ ಮೇಲೆ ಲೋಕಾಯುಕ್ತ ದಾಳಿ| ಬೃಹತ್ ಪ್ರಮಾಣದ ನೋಟಿನ ಕಂತೆ ಪತ್ತೆ

ಸಮಗ್ರ ನ್ಯೂಸ್: ಕೆ.ಆರ್.ಪುರ ತಹಶೀಲ್ದಾರ್ ರಾಗಿದ್ದ ಅಜಿತ್ ಕುಮಾರ್ ರೈ ಸೊರಕೆ ಮನೆ ಮತ್ತು ಅವರ ನಿಕಟವರ್ತಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ ಬೃಹತ್ ಪ್ರಮಾಣದ ಹಣದ ಕಂತೆಯೇ ಪತ್ತೆಯಾದ ಬಗ್ಗೆ ವರದಿಯಾಗಿದೆ.

Ad Widget . Ad Widget .

ಇವರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಪೊಲೀಸರು ಅಜಿತ್ ಕುಮಾರ್ ರೈ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.

Ad Widget . Ad Widget .

ಲೋಕಾಯುಕ್ತ ಎಸ್ ಪಿ ಕೆ.ವಿ. ಅಶೋಕ್ ನೇತೃತ್ವದಲ್ಲಿ ಅಜಿತ್ ಅವರ ಮನೆ ಹಾಗೂ ಇತರ ಹತ್ತು ಸ್ಥಳಗಳ ಮೇಲೆ ಬುಧವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ಅಜಿತ್ ಕುಮಾರ್ ಅವರ ಮನೆಯಲ್ಲಿ ಬೃಹತ್‌ ಪ್ರಮಾಣದ ನೋಟಿನ ಕಂತೆಯೇ ಪತ್ತೆಯಾಗಿದೆ. ಅದನ್ನು ವಶಕ್ಕೆ ಪಡೆಯಲಾಗಿದೆ.

ಪುತ್ತೂರಿನ ಸರ್ವೆಯ ಸೊರಕೆಯವರಾದ ಅಜಿತ್ ಕುಮಾರ್ ರೈ ಈ ಹಿಂದೆ ಒತ್ತುವರಿದಾರರಿಗೆ ಸಹಕರಿಸಿದ್ದ ಆರೋಪದ ಮೇಲೆ ಅಮಾನತುಗೊಳಗಾಗಿದ್ದರು.

Leave a Comment

Your email address will not be published. Required fields are marked *