ಸಮಗ್ರ ನ್ಯೂಸ್: ರಾತ್ರಿ ಮತ್ತು ಹಗಲಿನ ಊಟ ನಮ್ಮ ದಿನ ನಿತ್ಯದ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಎರಡೂ ಹೊತ್ತು ಊಟ ತಪ್ಪಿಸುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
ದಿನಕ್ಕೆ ಮೂರು ಬಾರಿ ಆಹಾರ ಸೇವನೆ ನಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ. ಮೂರು ಬಾರಿ ಆಹಾರ ಸೇವಿಸುವಾಗ ಅದರ ಮಧ್ಯೆ ಸಮಯದ ಅಂತರವಿರಬೇಕು. ಮಧ್ಯಾಹ್ನದ ಊಟದ ನಂತರ ರಾತ್ರಿ ಊಟಕ್ಕೆ ಸಾಕಷ್ಟು ಅಂತರವಿದೆ. ಆದ್ದರಿಂದ ರಾತ್ರಿ ವೇಳೆ ಊಟ ಬಿಟ್ಟರೆ ಮರುದಿನ ನಿಶ್ಯಕ್ತಿ ಉಂಟಾಗಬಹುದು. ಅಲ್ಲದೆ, ಇದರಿಂದ ಗ್ಯಾಸ್ಟ್ರಿಕ್ ನಂತಹ ಸಮಸ್ಯೆ ಬರುತ್ತದೆ.
ಶರೀರಕ್ಕೆ ಶಕ್ತಿ ತುಂಬಲು ದಿನದ ಮೂರು ಅವಧಿಯು ಸರಿಯಾದ ಸಮಯಕ್ಕೆ ಊಟ ಮಾಡುವುದನ್ನು ರೂಢಿಸಿಕೊಳ್ಳಿ. ಇದು ನಿಮ್ಮ ದೇಹವನ್ನು ಸದೃಢವಾಗಿರಿಸುತ್ತದೆ.