ಸಮಗ್ರ ನ್ಯೂಸ್: ಕೆಲವರಿಗೆ ಎರಡು ಬಾರಿ ಬ್ರಶ್ ಮಾಡಿದರೂ ಬಾಯಿಯ ದುರ್ವಾಸನೆ ದೂರವಾಗುವುದಿಲ್ಲ. ಇದಕ್ಕಾಗಿ ಮೌತ್ ವಾಶ್ ಉಪಯೋಗಿಸೋದು ಸಾಮಾನ್ಯ. ಆದ್ರೆ ಪ್ರತಿ ಬಾರಿ ಮೌತ್ ವಾಶ್ ಅನ್ನು ಮೆಡಿಕಲ್ ನಿಂದಲೇ ಕೊಂಡು ತರಬೇಕಿಲ್ಲ. ಮನೆಯಲ್ಲೂ ಮೌತ್ ವಾಶ್ ತಯಾರಿಸಬಹುದು, ಹೇಗೆನ್ನುತ್ತೀರಾ?
ಬಾಯಿಯ ದುರ್ವಾಸನೆ ಇರುವಂಥವರು ಊಟವಾದ ಬಳಿಕ ಉಗುರು ಬೆಚ್ಚಗಿನ ನೀರಿಗೆ ಅರ್ಧ ಚಿಟಿಕೆ ಉಪ್ಪು ಹಾಕಿ ಬಾಯಿ ತೊಳೆಯಿರಿ. ಎರಡು ಬಾರಿ ಬಾಯಿ ಮುಕ್ಕಳಿಸಿ ಬಳಿಕ ಉಗಿಯಿರಿ. ಇದು ಬಾಯಿ ಕಲ್ಮಶಗಳನ್ನು ಮತ್ತು ಬ್ಯಾಕ್ಟೀರಿಯಾಗಳನ್ನು ದೂರ ಮಾಡುತ್ತದೆ.
ಒಂದು ಚಮಚದಷ್ಟು ಶುದ್ಧ ತೆಂಗಿನೆಣ್ಣೆಯನ್ನು ಬಾಯಿಗೆ ಹಾಕಿಕೊಂಡು ಅದನ್ನು ನಿಮ್ಮ ನಾಲಗೆ ಸಹಾಯದಿಂದ ಬಾಯಿಯೊಳಗಿನ ಎಲ್ಲಾ ಭಾಗಕ್ಕೂ ಸ್ಪರ್ಶವಾಗುವಂತೆ ಮಾಡಿ. ಇದನ್ನು ಕನಿಷ್ಠ ಹತ್ತು ನಿಮಿಷ ಬಾಯಿಯಲ್ಲಿ ಇಟ್ಟುಕೊಂಡು ಬಳಿಕ ಉಗಿಯಿರಿ. ಇದು ಒಸಡನ್ನು ಗಟ್ಟಿಗೊಳಿಸಿ ದೇಹದ ವಿಷಕಾರಿ ಅಂಶಗಳನ್ನು ದೂರಮಾಡುತ್ತದೆ.
ಲವಂಗ ಮತ್ತು ದಾಲ್ಚಿನಿ ಎಣ್ಣೆಯನ್ನೂ ಮೌತ್ ಫ್ರೆಶ್ ನರ್ ಆಗಿ ಬಳಸಬಹುದು. ಇದು ಬಾಯಿಯಲ್ಲಿ ಕುಳಿ ಇದ್ದವರಿಗೆ ಬಹಳ ಒಳ್ಳೆಯದು. ಬೇಕಿಂಗ್ ಸೋಡಾ ಬೆರೆಸಿದ ನೀರಿನಿಂದ ಬಾಯಿ ಮುಕ್ಕಳಿಸಿದರೂ ದುರ್ವಾಸನೆ ದೂರವಾಗುತ್ತದೆ.