ಹಾಸನದಲ್ಲಿ ನಡುಗಿದ ಭೂಮಿ; ಮನೆಯಿಂದ ಹೊರಗೋಡಿದ ಜನತೆ

ಸಮಗ್ರ ನ್ಯೂಸ್: ಹಾಸನ ಜಿಲ್ಲೆಯ ಅರಕಲಗೂಡು ‌ಪಟ್ಟಣ ಸೇರಿದಂತೆ ‌ವಿವಿಧೆಡೆ ಮಂಗಳವಾರ ಬೆಳಿಗ್ಗೆ ಭೂಮಿ ಕಂಪಿಸಿದ್ದು, ಜನರು ಆತಂಕದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಹಾಸನ ಪಟ್ಟಣದಲ್ಲಿ ಕೆಲವು ಕಡೆ ಬೆಳಿಗ್ಗೆ 10.25, ಇನ್ನೂ ಕೆಲವು ಕಡೆ 10.34 ರ ಸಮಯದಲ್ಲಿ ಭೂಮಿ ಕಂಪಿಸಿದೆ. ಜನರಿಗೆ ಭೂಕಂಪನದ ಅನುಭವವಾಗಿದ್ದು, ಗಾಬರಿಯಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದರು.

Ad Widget ... ..

ಭೂಮಿ ಕಂಪಿಸಿದ್ದರಿಂದ ಜನರಲ್ಲಿ ಆತಂಕ ಮನೆ ಮಾಡಿದ್ದು, ಭೂಕಂಪನದ ಅನುಭವದಿಂದ ಮನೆಯ ಹೊರಗಡೆಯೇ ಸ್ಥಳೀಯರು ನಿಂತಿದ್ದರು. ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು, ಭೂಕಂಪನವೋ, ಬೇರೆ ಕಾರಣಕ್ಕೆ ಭೂಮಿ ಕಂಪಿಸಿದೆಯೋ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Ad Widget

Leave a Comment

Your email address will not be published. Required fields are marked *