ಬಸ್ ನಿಲ್ಲಿಸಿಲ್ಲವೆಂದು ಕಲ್ಲೆಸೆದು ‘ಶಕ್ತಿ’ ಪ್ರದರ್ಶಿಸಿದ ಮಹಿಳೆ| ಐದು ಸಾವಿರ ದಂಡಕಟ್ಟಿ ಅದೇ ಬಸ್ ನಲ್ಲಿ ಪ್ರಯಾಣ!!

ಸಮಗ್ರ ನ್ಯೂಸ್: ಬಸ್ ನಿಲ್ಲಿಸಿಲ್ಲವೆಂದು ರೊಚ್ಚಿಗೆದ್ದ ಮಹಿಳೆಯೊಬ್ಬರು ಬಸ್ ಗೆ ಕಲ್ಲು ತೂರಿದ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಬಳಿ ನಡೆದಿದೆ.

Ad Widget ... ..

ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದ ಎಕ್ಸ್ ಪ್ರೆಸ್ ಬಸ್ ಕೊಪ್ಪಳದಿಂದ-ಹೊಸಪೇಟೆಗೆ ಹೊರಟಿತ್ತು. ಇಲಕಲ್ಲ ಬಳಿಯ ಪಾಪನಳ್ಳಿ ನಿವಾಸಿ ಲಕ್ಷ್ಮಿ ಎಂಬುವರು ಬಸ್ ನಿಲ್ಲಿಸಿಲ್ಲವೆಂದು ಬಸ್ ಗೆ ಕಲ್ಲು ಎಸೆದಿದ್ದಾರೆ.

Ad Widget

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಾಗುತ್ತಿದ್ದು, ಸಾರಿಗೆ ಬಸ್ ಗಳು ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಆದರೆ ಬಸ್ ನಿಲ್ಲಿಸಿಲ್ಲ ಎಂದು ಬಸ್ ಗೆ ಕಲ್ಲು ಹೊಡೆಯುವಷ್ಟರ ಮಟ್ಟಿಗೆ ಮಹಿಳೆ ಮುಂದೆ ಬಂದಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ನೀಡಿದ್ದ 5 ಗ್ಯಾರಂಟಿಗಳ ಪೈಕಿ ‘ಶಕ್ತಿ’ ಯೋಜನೆಯನ್ನು ಕಾಂಗ್ರೆಸ್, ತಾನು ಅಧಿಕಾರಕ್ಕೆ ಬರುತ್ತಿದ್ದಂತೆ ಜಾರಿಗೆ ತಂದಿದೆ. ಈ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಸಿಗುತ್ತಿದ್ದು, ಈಗಾಗಲೇ ಕೋಟ್ಯಾಂತರ ಮಂದಿ ಇದರ ಲಾಭ ಪಡೆದಿದ್ದಾರೆ.ಜೂನ್ 11ರ ಮಧ್ಯಾಹ್ನ 1 ಗಂಟೆಯಿಂದ ಇದು ಜಾರಿಗೆ ಬಂದಿದ್ದು, 14 ದಿನಗಳಲ್ಲಿ ಅಂದರೆ ಜೂನ್ 24ರ ಶನಿವಾರ ರಾತ್ರಿ ಹನ್ನೆರಡು ಗಂಟೆಯವರೆಗೆ ಶಕ್ತಿ ಯೋಜನೆಯ ಅಡಿ 7.15 ಕೋಟಿ ಮಹಿಳೆಯರು ಪ್ರಯಾಣ ಬೆಳೆಸಿದ್ದಾರೆ.

Leave a Comment

Your email address will not be published. Required fields are marked *