Ad Widget .

ಕೇಂದ್ರ ಸರ್ಕಾರದಿಂದ ಹೊಸ ನಿಯಮ| ದೇಶವ್ಯಾಪ್ತಿ ಹಗಲು – ರಾತ್ರಿಗೆ ಬೇರೆ ಬೇರೆ ವಿದ್ಯುತ್ ಬಿಲ್

ಸಮಗ್ರ ನ್ಯೂಸ್: ಇಡೀ ದೇಶದಲ್ಲಿಯೇ ವಿದ್ಯುತ್ ಬಿಲ್ ಇನ್ನು ಮುಂದೆ ಹೆಚ್ಚಾಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರವು ಶಕ್ತಿ ತೆರಿಗೆಯಲ್ಲಿ ಮಾಡಿದ ಕೆಲವೊಂದು ಪರಿಷ್ಕರಣೆಗಳು ಅದಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಬೇಸಿಗೆ ಕಾಲದಲ್ಲಿ ನೀವು ಈ ಹಿಂದೆ ಪಡೆಯುತ್ತಿದ್ದ ವಿದ್ಯುತ್ ಬಿಲ್‌ಗಿಂತ ಅಧಿಕ ವಿದ್ಯುತ್ ಬಿಲ್ ಬರುವ ಸಾಧ್ಯತೆ ಇದೆ.

Ad Widget . Ad Widget .

ಶಕ್ತಿ ತೆರಿಗೆ ನಿಯಮದಲ್ಲಿ ಕೇಂದ್ರ ಸರ್ಕಾರವು ಇತ್ತೀಚೆಗೆ ಕೆಲವೊಂದು ಬದಲಾವಣೆಗಳನ್ನು ಮಾಡಿದೆ. ಈ ಪರಿಷ್ಕರಣೆಯ ಬಳಿಕ ಬೇಸಿಗೆ ಕಾಲದಲ್ಲಿ ರಾತ್ರಿ ಹೊತ್ತಿನಲ್ಲಿ ಹವಾ ನಿಯಂತ್ರಕ (ಎಸಿ) ಮತ್ತು ಕೂಲರ್‌ಗಳನ್ನು ಬಳಸುವುದು ನಮಗೆ ದುಬಾರಿಯಾಗಲಿದೆ. ಬೇಸಿಗೆಯಲ್ಲಿ ನಾವು ಹಗಲಿನಲ್ಲಿ ಎಸಿ ಹಾಗೂ ಕೂಲರ್‌ಗಳನ್ನು ಬಳಕೆ ಮಾಡುವುದಕ್ಕಿಂತ ಅಧಿಕ ವಿದ್ಯುತ್ ದರ ರಾತ್ರಿಯಲ್ಲಿ ಬಳಕೆ ಮಾಡುವ ಎಸಿ, ಕೂಲರ್‌ಗಳಿಗೆ ಇರಲಿದೆ. ಇದು ಮುಖ್ಯವಾಗಿ ಬಿಸಿ ಪ್ರದೇಶದಲ್ಲಿ ವಾಸವಾಗಿರುವವರಿಗೆ ಅಧಿಕ ಪ್ರಭಾವ ಬೀರಲಿದೆ.

Ad Widget . Ad Widget .

ಕೇಂದ್ರ ಸರ್ಕಾರವು ವಿದ್ಯುತ್ (ಗ್ರಾಹಕರ ಹಕ್ಕು) ಕಾಯ್ದೆ, 2020ರ ಅಡಿಯಲ್ಲಿ ತಿದ್ದುಪಡಿಯನ್ನು ಮಾಡಿದೆ. ಇದರಿಂದಾಗಿ ವಿದ್ಯುತ್ ಬಿಲ್ ವಿಚಾರದಲ್ಲಿ ಪ್ರಮುಖವಾಗಿ ಎರಡು ಬದಲಾವಣೆಗಳು ಆಗಲಿದೆ. ವಿದ್ಯುತ್ ಬಿಲ್ ತೆರಿಗೆ ವ್ಯವಸ್ಥೆಯಲ್ಲಿಯೆ ಈ ಬದಲಾವಣೆಯು ಉಂಟಾಗಿದೆ. ಈ ನಿಯಮದ ಪ್ರಕಾರ ರಾತ್ರಿಯಲ್ಲಿ ಎಸಿ ಹಾಗೂ ಕೂಲರ್‌ಗಳನ್ನು ಬಳಕೆ ಮಾಡುವುದಕ್ಕೆ ಅಧಿಕ ದರವನ್ನು ಪಾವತಿ ಮಾಡಬೇಕಾಗುತ್ತದೆ.

ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ ಆದೇಶವು, “ಟಿಒಡಿ ತೆರಿಗೆ ಪದ್ಧತಿಯಡಿಯಲ್ಲಿ ಒಂದು ದಿನದಲ್ಲಿ ಸೋಲರ್ ಬಳಕೆ ಮಾಡುವ ಸಂದರ್ಭದಲ್ಲಿ ಸಾಮಾನ್ಯ ವಿದ್ಯುತ್ ಶುಲ್ಕಕ್ಕಿಂತ ಶೇಕಡ 10ರಿಂದ ಶೇಕಡ 20ರಷ್ಟು ಕಡಿಮೆ ಶುಲ್ಕವನ್ನು ಪಡೆಯಬಹುದಾಗಿದೆ. ಆದರೆ ಅತೀ ಹೆಚ್ಚಾಗಿ ವಿದ್ಯುತ್ ಬಳಸಲಾಗುವ ಸಮಯದಲ್ಲಿ ಶೇಕಡ 10ರಿಂದ ಶೇಕಡ 20ರಷ್ಟು ಅಧಿಕ ವಿದ್ಯುತ್ ಬಿಲ್ ಇರಲಿದೆ,” ಎಂದು ಉಲ್ಲೇಖ ಮಾಡಲಾಗಿದೆ.

ಅಂದರೆ ಹಗಲಿನಲ್ಲಿ ನಾವು ಬಳಸುವ ವಿದ್ಯುತ್‌ಗಿಂತ ಅಧಿಕ ಬಿಲ್ ಅನ್ನು ರಾತ್ರಿಯಲ್ಲಿ ಬಳಸುವ ವಿದ್ಯುತ್‌ಗೆ ಪಾವತಿ ಮಾಡಬೇಕಾಗುತ್ತದೆ. ಬೇಸಿಗೆ ಸಂದರ್ಭದಲ್ಲಿ ರಾತ್ರಿಯಲ್ಲಿ ಹೆಚ್ಚಾಗಿ ವಿದ್ಯುತ್ ಬಳಕೆ ಮಾಡಲಾಗುವ ಕಾರಣದಿಂದಾಗಿ ದರವು ಸಾಮಾನ್ಯವಾಗಿ ಉಳಿದ ಸೀಸನ್‌ಗಿಂತ ಅಧಿಕವಾಗಿರುತ್ತದೆ. ಆದರೆ ಈಗ ದರ ಏರಿಕೆಯಿಂದಾಗಿ ವಿದ್ಯುತ್ ಬಿಲ್ ಇನ್ನಷ್ಟು ಹೆಚ್ಚಳವಾಗಲಿದೆ.

Leave a Comment

Your email address will not be published. Required fields are marked *