Ad Widget .

ಮದ್ಯಪ್ರಿಯರಿಗೊಂದು ಗುಡ್ ನ್ಯೂಸ್| ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ಮದ್ಯದ ಬೆಲೆಯನ್ನು ರಾಜ್ಯ ಸರ್ಕಾರ ಸದ್ದಿಲ್ಲದೆ ಏರಿಕೆ ಮಾಡಿದೆ ಎಂಬ ಆರೋಪವನ್ನು ಇತ್ತೀಚೆಗೆ ಪ್ರತಿಪಕ್ಷಗಳ ನಾಯಕರು ಮಾಡಿದ್ದರು. ಇದರ ಮಧ್ಯೆ ಮದ್ಯದ ಬಾಟಲಿಗಳ ಮುಚ್ಚಳದ ಮೇಲೆ ಅಂಟಿಸುವ ಅಬಕಾರಿ ಭದ್ರತಾ ಚೀಟಿ (ಇಎಎಲ್) ವೆಚ್ಚವನ್ನು ಮದ್ಯ ತಯಾರಕರ ಬದಲಿಗೆ ಗ್ರಾಹಕರಿಗೆ ವರ್ಗಾಯಿಸುವ ಆದೇಶ ಹೊರ ಬಿದ್ದಿತ್ತು.

Ad Widget . Ad Widget .

ಈವರೆಗೆ ಇದರ ವೆಚ್ಚವನ್ನು ಮದ್ಯ ತಯಾರಕರು ಭರಿಸುತ್ತಿದ್ದು ಆದರೆ ಕಳೆದ ತಿಂಗಳು ಅಬಕಾರಿ ಇಲಾಖೆಯಿಂದ ಹೊರಡಿಸಲಾಗಿದ್ದ ಆದೇಶದಲ್ಲಿ ಇದರ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲಾಗಿತ್ತು. ಇದರ ಪರಿಣಾಮ ಪ್ರತಿ ಮದ್ಯದ ಬಾಟಲಿ ಮೇಲೆ ಗ್ರಾಹಕರು ಹೆಚ್ಚುವರಿಯಾಗಿ 31.74 ಪೈಸೆಯನ್ನು ಪಾವತಿಸಬೇಕಿತ್ತು.

Ad Widget . Ad Widget .

ಅಬಕಾರಿ ಇಲಾಖೆಯ ಈ ನಿರ್ಧಾರದ ಕುರಿತು ವ್ಯಾಪಕ ವಿರೋಧ ವ್ಯಕ್ತವಾಗಿತ್ತಲ್ಲದೆ ಇದರ ಹಿಂದೆ ಅವ್ಯವಹಾರ ನಡೆದಿದೆ ಎಂದು ಹಲವರು ಆರೋಪಿಸಿದ್ದರು. ಇದೀಗ ಅಬಕಾರಿ ಇಲಾಖೆ ತನ್ನ ನಿರ್ಧಾರವನ್ನು ಬದಲಾಯಿಸಿದ್ದು, ಇಎಎಲ್ ಕುರಿತಂತೆ ಮೇ 22 ರ ಆದೇಶವನ್ನು ಹಿಂಪಡೆದಿದೆ. ಹೀಗಾಗಿ ಇನ್ನು ಮುಂದೆ ಈ ಮೊದಲಿನಂತೆ ಮದ್ಯ ತಯಾರಕರೇ ಬಾಟಲಿಗಳ ಮೇಲೆ ಅಂಟಿಸುವ ಅಬಕಾರಿ ಭದ್ರತಾ ಚೀಟಿ (ಇಎಎಲ್) ವೆಚ್ಚವನ್ನು ಭರಿಸಲಿದ್ದಾರೆ. ಈ ಮೂಲಕ ಬೆಲೆ ಏರಿಕೆಯಿಂದ ಸುಸ್ತಾಗಿದ್ದ ಎಣ್ಣೆ ಪ್ರಿಯರು ನಿಟ್ಟುಸಿರು ಬಿಡುವಂತಾಗಿದೆ.

Leave a Comment

Your email address will not be published. Required fields are marked *