Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜೂನ್ 25 ರಿಂದ ಜುಲೈ 1 ರ ವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

Ad Widget . Ad Widget .

ಮೇಷ:
ನಿಧಾನಗತಿಯಲ್ಲಿ ನಡೆಯುತ್ತಿದ್ದ ಕೆಲಸ ಕಾರ್ಯಗಳು ಶೀಘ್ರ ಗತಿಯನ್ನು ಪಡೆಯುತ್ತದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಆತ್ಮೀಯರೊಬ್ಬರಿಂದ ಹಿನ್ನಡೆ ಉಂಟಾಗುತ್ತದೆ. ವಿಶ್ರಾಂತಿ ಎಂಬುದು ಇಲ್ಲದೆ ದೇಹಾಲಸ್ಯದಿಂದ ಬಳಲಬೇಕಾಗುತ್ತದೆ. ಆದಾಯಕ್ಕಿಂತಲೂ ಖರ್ಚು ವೆಚ್ಚಗಳು ಕೊಂಚ ಹೆಚ್ಚುತ್ತವೆ. ಬುದ್ಧಿವಂತಿಕೆಯ ನಿರ್ಧಾರಗಳು ಶುಭ ಫಲಗಳನ್ನು ಕೊಡುತ್ತವೆ. ಎಷ್ಟೇ ಸಹನಾಶೀಲರಾದರೂ ಸಿಡುಕಿನಿಂದ ವರ್ತಿಸಬೇಕಾದ ಪ್ರಸಂಗಗಳು ಎದುರಾಗಲಿವೆ. ಕಡಿಮೆ ಮಾತನಾಡಿ ಕೆಲಸವನ್ನು ಹೆಚ್ಚಿಸಲು ಪ್ರಯತ್ನಿಸಿ.

Ad Widget . Ad Widget .

ವೃಷಭ:
ತಡವಾಗಿಯಾದರೂ ಉದ್ಯೋಗದಲ್ಲಿ ನಿರೀಕ್ಷಿತ ಮಟ್ಟವನ್ನು ತಲುಪುವಿರಿ. ಹೊಸ ಕಾರ್ಯ ಯೋಜನೆಗಳು ದೊಡ್ಡ ಜವಾಬ್ದಾರಿಗಳಿಗೆ ಕಾರಣವಾಗುತ್ತದೆ. ಕುಟುಂಬದ ವಿಚಾರದಲ್ಲಿ ಯೋಚಿಸಲು ಸಮಯವಿರದು. ನಿಮ್ಮ ನೆಚ್ಚಿನ ವ್ಯಕ್ತಿಗಳ ಜೊತೆಯಲ್ಲಿ ವಿವಾಹ ನಿಶ್ಚಯವಾಗುತ್ತದೆ. ಮಕ್ಕಳಿಗೆ ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಹೆಚ್ಚಿನ ಹಣ ಬೇಕಾಗುತ್ತದೆ. ಜೀವನದಲ್ಲಿ ಅನೇಕ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಕೊಂಚ ಹಠದ ಸ್ವಭಾವವನ್ನು ಬಿಟ್ಟು ಕುಟುಂಬದ ಸದಸ್ಯರ ಸಲಹೆ ಸೂಚನೆಗಳನ್ನು ಪಾಲಿಸುವುದು ಒಳಿತು.

ಮಿಥುನ:
ಉದ್ಯೋಗದಲ್ಲಿ ಉತ್ತಮ ಯಶಸ್ಸು ಸುಲಭವಾಗಿ ದೊರೆಯುತ್ತದೆ. ಹಣಕಾಸಿನ ಕೊರತೆಯನ್ನು ನೀಗಿಸಲು ಉಪವೃತ್ತಿಯೊಂದನ್ನು ಆರಂಭಿಸುವಿರಿ. ನಿರೀಕ್ಷಿತ ಮೂಲಗಳಿಂದ ಹಣದ ಸಹಾಯ ಒದಗಿ ಬರುತ್ತದೆ. ದಾಂಪತ್ಯದಲ್ಲಿ ಪರಸ್ಪರ ಅನ್ಯೋನ್ಯತೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಹಿರಿಯ ವ್ಯಕ್ತಿಗಳ ಜೊತೆಯಲ್ಲಿ ವಾದ ವಿವಾದ ಇರುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಹಣ ಉಳಿಸುವ ಯೋಜನೆ ರೂಪಿಸುವಿರಿ. ಸ್ವಂತ ಭೂಮಿ ಅಥವಾ ಮನೆಯನ್ನು ಕೊಳ್ಳುವ ಮಾತುಕತೆ ಕುಟುಂಬದ ಸದಸ್ಯರ ಜೊತೆಯಲ್ಲಿ ನಡೆಯುತ್ತದೆ.

ಕಟಕ:
ನಿಮ್ಮ ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಾಧಿಸಲು ಸಹೋದ್ಯೋಗಿಗಳ ಸಹಾಯ ಸಹಕಾರ ಸದಾ ಕಾಲ ದೊರೆಯುತ್ತದೆ. ಕುಟುಂಬದ ಜವಾಬ್ದಾರಿಯನ್ನು ಸಂಗಾತಿಯು ನಿರ್ವಹಿಸುವ ಕಾರಣ ಮಾನಸಿಕ ಒತ್ತಡ ಇರುವುದಿಲ್ಲ. ಉದ್ಯೋಗದಲ್ಲಿನ ಬಡ್ತಿಗೆ ಸಂಬಂಧಿಸಿದ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸುವಿರಿ. ಅನಿರೀಕ್ಷಿತ ಧನ ಲಾಭವಿದೆ. ತಂದೆ ತಾಯಿಗೆ ನೀಡಿದ ಭರವಸೆಯನ್ನು ಈಡೇರಿಸಲು ಪ್ರಯತ್ನ ಪಡುವಿರಿ. ಸಾಲವನ್ನು ಕೊಡುವುದು ಮತ್ತು ತೆಗೆದುಕೊಳ್ಳುವುದು ದ್ವೇಷಕ್ಕೆ ಕಾರಣವಾಗಲಿದೆ.

ಸಿಂಹ:
ನಿಮ್ಮ ಮನಸ್ಸನ್ನಾಗಲಿ ಅಥವಾ ತೀರ್ಮಾನವನ್ನಾಗಲಿ ಬದಲಿಸಲು ಯಾರಿಂದಲೂ ಸಾಧ್ಯವಾಗದು. ನಿಮ್ಮ ಹಠದ ಸ್ವಭಾವ ಕುಟುಂಬದಲ್ಲಿನ ಬೇಸರಕ್ಕೂ ಕಾರಣವಾಗುತ್ತದೆ. ಕುಟುಂಬದ ವಿವಾದವೊಂದು ಕಾನೂನಿನ ಸಹಾಯದಿಂದ ಪರಿಹಾರವಾಗಲಿದೆ. ಉದ್ಯೋಗದಲ್ಲಿ ಸಹನೆ ಸಂಯಮದಿಂದ ವರ್ತಿಸಿದರೆ ಎಲ್ಲವೂ ಲಾಭಕರವಾಗಿರುತ್ತದೆ. ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಬಾರದು. ದಂಪತಿಗಳು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಅವಶ್ಯಕ. ಹಣಕಾಸಿನ ಸಂಸ್ಥೆಯನ್ನು ಆರಂಭಿಸುವ ಸಾಧ್ಯತೆಗಳಿವೆ.

ಕನ್ಯಾ:
ಎಂತಹ ಸಂದರ್ಭ ಎದುರಾದರೂ ಸುಲಭವಾಗಿ ಹಣವನ್ನು ಖರ್ಚು ಮಾಡುವುದಿಲ್ಲ. ಆದಾಯದಲ್ಲಿ ಹೆಚ್ಚಳ ಕಂಡು ಬರುತ್ತದೆ. ತಪ್ಪು ಮಾಡಿದವರನ್ನು ಕ್ಷಮಿಸದೆ ಟೀಕಿಸುವಿರಿ. ಉದ್ಯೋಗದ ವಿಚಾರದಲ್ಲಿ ಸ್ಥಿರವಾದ ಮನಸ್ಸಿರದು ಮತ್ತು ದಿಟ್ಟವಾದ ತೀರ್ಮಾನವನ್ನು ತೆಗೆದುಕೊಳ್ಳುವುದೂ ಇಲ್ಲ. ಉಪಯೋಗವಿಲ್ಲದ ಹಣಕಾಸಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ಅಪವಾದವನ್ನು ಎದುರಿಸುವಿರಿ. ಕುಟುಂಬದ ಸದಸ್ಯರಿಗೆ ನಿಮ್ಮ ಮೇಲೆ ಇರುವ ಪ್ರೀತಿ ಮತ್ತು ಅಭಿಮಾನವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.

ತುಲಾ:
ನೀವು ಬಯಸದೇ ಹೋದರೂ ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳು ನಿಮ್ಮ ಪರವಾಗಿ ನಿಲ್ಲುತ್ತಾರೆ. ಕುಟುಂಬದ ಜವಾಬ್ದಾರಿ ಹೆಚ್ಚಾಗಿ ಇದ್ದರು ಕುಟುಂಬದ ಸದಸ್ಯರ ಸಹಾಯ ಸಹಕಾರ ದೊರೆಯುತ್ತದೆ. ಸುಲಭದ ರೀತಿಯಲ್ಲಿ ಅವಶ್ಯಕತೆ ಇರುವಷ್ಟು ಹಣವನ್ನು ಸಂಪಾದಿಸಬಲ್ಲಿರಿ. ಹಣದ ಮೇಲೆ ದುರಾಸೆ ಇರದು ಆದರೆ ಸಮಾಜ ಸೇವೆಗಾಗಿ ಚಿಕ್ಕಪುಟ್ಟ ವ್ಯಾಪಾರ ವ್ಯವಹಾರಗಳನ್ನು ಆರಂಭಿಸುವಿರಿ. ಸಮಾಜದಲ್ಲಿ ವಿಶೇಷ ಸ್ಥಾನಮಾನ ದೊರೆಯುತ್ತದೆ.

ವೃಶ್ಚಿಕ:
ಕೈಹಿಡಿದ ವಿಚಾರಗಳಲ್ಲಿಯೂ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಹಣ ಅಥವಾ ಮಕ್ಕಳ ವಿಚಾರದಿಂದಾಗಿ ವಿವಾದವೊಂದನ್ನು ಎದುರಿಸಬೇಕಾಗುತ್ತದೆ. ಬೇಸಾಯದಲ್ಲಿ ಆಸಕ್ತಿ ಉಂಟಾಗಿ ಕೃಷಿ ಭೂಮಿಯನ್ನು ಕೊಳ್ಳುವಿರಿ. ಮಾಡುವುದೆಲ್ಲ ಸರಿ ಎಂಬ ತಪ್ಪು ಭಾವನೆಯಿಂದ ಹೊರಬರುವುದು ಒಳ್ಳೆಯದು. ಕುಟುಂಬದಲ್ಲಿ ವಿವಾಹ ಬಗ್ಗೆ ಮಾತುಕತೆಯಾಗುತ್ತದೆ. ಹೊಸ ಬಟ್ಟೆ ಮತ್ತು ಹೊಸ ವಾಹನಗಳಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುವಿರಿ.

ಧನಸ್ಸು:
ಯಾವುದೇ ವಿಚಾರಗಳಲ್ಲಿಯೂ ಸುಲಭವಾಗಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅದೃಷ್ಟವಶಾತ್ ಬಯಸಿದ್ದೆಲ್ಲ ದೊರೆಯುತ್ತದೆ. ಮಕ್ಕಳು ಸಮಾಜದಲ್ಲಿ ಗೌರವ ದೊರೆಯುವಂತಹ ಕೆಲಸವನ್ನು ಮಾಡುತ್ತಾರೆ. ಹಣಕಾಸಿನ ವಿಚಾರದಲ್ಲಿ ಹಿನ್ನಡೆ ಉಂಟಾಗದು. ವಿವಾಹದ ವಿಚಾರದಲ್ಲಿ ವಿವಾದವೊಂದು ಎದುರಾಗಬಹುದು. ಅವಿರತ ಪ್ರಯತ್ನಗಳಿಂದಾಗಿ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಉನ್ನತ ಸ್ಥಾನಮಾನ ಗಳಿಸುತ್ತಾರೆ. ಉದ್ಯೋಗ ಬದಲಿಸಲು ಸಕಾಲವಲ್ಲ.

ಮಕರ:
ಕೆಲಸ ಕಾರ್ಯಗಳಲ್ಲಿ ದುಡುಕುತನ ತೋರದೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಆದರೆ ಸುಲಭವಾಗಿ ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸುವುದೇ ಇಲ್ಲ. ಮಾತನ್ನು ಕಡಿಮೆ ಮಾಡಿ ಕೆಲಸದಲ್ಲಿ ಪಾಂಡಿತ್ಯವನ್ನು ತೋರಬೇಕಾದ ಸಂದರ್ಭ ಎದುರಾಗುತ್ತದೆ. ಮೇಲಧಿಕಾರಿಗಳ ಪ್ರೀತಿ ವಿಶ್ವಾಸವನ್ನು ಗಳಿಸುವ ಪ್ರಯತ್ನಮಾಡಿ. ಪರಿಚಯದವರು ಅಥವಾ ದೂರದ ಸಂಬಂಧಿಕರ ಜೊತೆಯಲ್ಲಿ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ಇರುವ ಹಣವನ್ನು ಖರ್ಚು ಮಾಡುವ ಮೊದಲು ಯೋಚಿಸಿ. ಆದಾಯದ ಕೊರತೆ ಕಂಡು ಬರುತ್ತದೆ.

ಕುಂಭ:
ಬಹುನಿರೀಕ್ಷಿತ ನಿಮ್ಮ ಕೆಲಸ ಕಾರ್ಯವು ಆತ್ಮೀಯರ ಸಹಾಯದಿಂದ ಪೂರ್ಣಗೊಳ್ಳುತ್ತದೆ. ನಿಮ್ಮ ಮಾತು ಮತ್ತು ನಡವಳಿಕೆಯನ್ನು ಜನಸಾಮಾನ್ಯರು ಮೆಚ್ಚುತ್ತಾರೆ. ಬಹು ದೊಡ್ಡ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವಿರಿ. ಗಣ್ಯ ವ್ಯಕ್ತಿ ಒಬ್ಬರ ಭೇಟಿ ಮಾಡಿ ಸ್ವಂತ ವ್ಯಾಪಾರ ವ್ಯವಹಾರಕ್ಕೆ ಅಡಿಪಾಯ ಹಾಕುವಿರಿ. ಪೂರ್ವಿಕರ ಆಸ್ತಿಯಲ್ಲಿ ಒಂದು ಪಾಲು ನಿಮಗೆ ದೊರೆಯುತ್ತದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.

ಮೀನ:
ಬೇಡದ ವಿಚಾರಗಳಿಗೆ ಸಮಯವನ್ನು ವ್ಯರ್ಥ ಮಾಡುವುದಿಲ್ಲ ಹಾಗೆಯೇ ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡುವುದಿಲ್ಲ. ಯಾವುದೇ ಸಮಸ್ಯೆಗಳು ಎದುರಾದರೂ ಬುದ್ಧಿವಂತಿಕೆಯಿಂದ ಅದನ್ನು ನಿಭಾಯಿಸಬಲ್ಲಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಯಾವುದೇ ಹಣಕಾಸಿಗೆ ಸಂಬಂಧಿಸಿದ ವ್ಯಾಪಾರ ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡದಿರಿ.ಬಾಳ ಸಂಗಾತಿಯ ಸಹನೆ ಮತ್ತು ಸಹಕಾರ ಜೀವನದಲ್ಲಿ ಹೊಸ ಅಧ್ಯಯನವನ್ನು ಅಧ್ಯಾಯವನ್ನು ಆರಂಭಿಸುತ್ತದೆ. ಸಂಬಂಧಿಕರೊಬ್ಬರ ಕುಟುಂಬದ ವಿವಾದವನ್ನು ಪರಿಹರಿಸಬೇಕಾಗುತ್ತದೆ.

Leave a Comment

Your email address will not be published. Required fields are marked *