ಸಮಗ್ರ ನ್ಯೂಸ್: ರಾಜ್ಯದ ಟೊಮೆಟೊ ಬಾಂಗ್ಲಾಕ್ಕೆ ರಫ್ತು ಆಗುತ್ತಿದ್ದು, ರಾಜ್ಯದಲ್ಲಿ ಟೊಮೆಟೊ ದರ ಏರಿಕೆಯಾಗಿದೆ. ಕೋಲಾರದಿಂದ ಹೊರರಾಜ್ಯಗಳಿಗೆ ರಫ್ತು ಹೆಚ್ಚಾಗುತ್ತಿದ್ದು, ಬೇರೆ ರಾಜ್ಯಗಳಲ್ಲಿ ಟೊಮೆಟೊಗೆ ಭಾರೀ ಡಿಮ್ಯಾಂಡ್ ಇದೆ. ಇದರಿಂದ ಬೆಂಗಳೂರಿಗೆ ಬಿಸಿ ತಟ್ಟಿದ್ದು, ಟೊಮೆಟೊ ಖರೀದಿ ಮಾಡಲು ಜನರು ಹಿಂದೇಟು ಹಾಕ್ತಿದ್ದಾರೆ.
ನಿನ್ನೆ ಟೊಮೆಟೊ ದರ ಕೆಜಿಗೆ 50 ರಿಂದ 60 ರೂಪಾಯಿಯಿದ್ದು, ಇವತ್ತು 70-80 ರೂಪಾಯಿ ಪ್ರತಿ ಕೆಜಿಗೆ ಇದೆ. ಟೊಮೆಟೊ ದರ ನೂರು ರೂಪಾಯಿ ಸನಿಹಕ್ಕೆ ಏರಿಕೆಯಾಗಿದ್ದು, 15 Kg ಟೊಮೆಟೊ ಬಾಕ್ಸ್ ಸಾವಿರ ಸನಿಹಕ್ಕೆ ಬಂದಿದೆ.
ಇದಲ್ಲದೆ ಒಂದೇ ವಾರದಲ್ಲಿ ಮತ್ತೆ ಕಾಯಿಪಲ್ಲೆಗಳ ದರ ಗಗನಕ್ಕೇರುವಂತೆ ಮಾಡಿದೆ. ಬದನೆಕಾಯಿ, ಬಟಾಣಿ ಹಾಗೂ ಮೆಣಸಿನಕಾಯಿ ದರ ದುಪ್ಪಟ್ಟಾಗಿದ್ದು, ಗ್ರಾಹಕರ ಜೇಬು ಸುಡುತ್ತಿದೆ. ಇತ್ತೀಚೆಗೆ ಸುರಿದ ಮಳೆಯ ಹಿನ್ನೆಲೆಯಲ್ಲಿ ತರಕಾರಿ ಕೊಳೆತಿರುವುದು ಪೂರೈಕೆ ತೀರಾ ಕಡಿಮೆಯಾಗಿದೆ. ಹೀಗಾಗಿ ಕೆ.ಆರ್.ಮಾರ್ಕೆಟ್, ಯಶವಂತಪುರ, ಮಲ್ಲೇಶ್ವರ, ಜಯನಗರ ಮಾರುಕಟ್ಟೆಗಳಲ್ಲಿ ದರ ಹೆಚ್ಚಿದೆ.
ಕಳೆದ ವಾರ ಒಂದು ಕೇಜಿಗೆ . 40 ಇದ್ದ ಬದನೇಕಾಯಿ ಹಾಗೂ ಮೆಣಸಿನಕಾಯಿ ದರ ಸೋಮವಾರ . 80 ತಲುಪಿತ್ತು. ಬಟಾಣಿ . 100ರಿಂದ . 150 ಗೆ ಏರಿಕೆಯಾಗಿದೆ. ಅದೇ ರೀತಿ ಬೀನ್ಸ್ ಹಾಗೂ ನುಗ್ಗಿಕಾಯಿ ಕಳೆದ ವಾರದಂತೆ . 100-120 ದರದಲ್ಲೇ ಮುಂದುವರಿದಿದೆ. ಕ್ಯಾರೆಟ್ ಕಳೆದ ವಾರಕ್ಕಿಂತ . 20 ಕಡಿಮೆಯಾಗಿ . 80 ಮಾರಾಟವಾಗಿದೆ. ಲಿಂಬು ದರ ಕೂಡ ಹೆಚ್ಚಾಗಿದೆ. ಬೆಳ್ಳುಳ್ಳಿ, ಬೀಟ್ರೂಟ್, ಆಲೂಗಡ್ಡೆ, ಹಾಗಲ ಕಾಯಿ, ಟೊಮೆಟೋ ದರ . 5-.10 ನಷ್ಟುಹೆಚ್ಚಾಗಿದೆ.