Ad Widget .

ಪಂಜ: ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಸಮಗ್ರ ನ್ಯೂಸ್: ಪಂಜ ಲಯನ್ಸ್ ಕ್ಲಬ್ ಇದರ ನೂತನ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜೂ.24 ರಂದು ಪಡ್ಪಿನಂಗಡಿ ನಡ್ಕ ಶಿವಗೌರಿ ಕಲಾಮಂದಿರದಲ್ಲಿ ಜರುಗಿತು.

Ad Widget . Ad Widget .

ಸುಳ್ಯ ವೈ.ಎಸ್.ಎಂ. ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ “ಪಂಜ ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ರವರು ಯುವಜನ ಸಂಯುಕ್ತ ಮಂಡಳಿ, ಜೇಸಿ, ಯುವಕ ಮಂಡಲ, ಗ್ರಾಮ ಪಂಚಾಯತ್, ಸಹಕಾರ ಸಂಘ, ದೇವಾಲಯ ಹೀಗೆ ವಿವಿಧ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದವರು. ಮುಂದೆ ಲಯನ್ಸ್ ಸಂಸ್ಥೆಯ ಮೂಲಕ ಅವರ ತಂಡದಿಂದ ಇನ್ನಷ್ಟು ಸೇವೆ ಸಮಾಜಕ್ಕೆ ದೊರೆಯಲಿದೆ” ಎಂದು ಹೇಳಿದರು.

Ad Widget . Ad Widget .

ಇದೇ ವೇಳೆ ಜಿಲ್ಲಾ ಪ್ರಥಮ ಉಪ ರಾಜ್ಯಪಾಲೆ ಬಿ.ಎಂ.ಭಾರತಿ ಅವರನ್ನು ಮತ್ತು ಸಂಪನ್ಮೂಲ ವ್ಯಕ್ತಿಯಾದ ದಿನೇಶ್ ಮಡಪ್ಪಾಡಿಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಧವ ಗೌಡ ಜಾಕೆ, ಶ್ರೀಮತಿ ಲೀಲಾ ಮಾಧವ ಜಾಕೆ ಉಪಸ್ಥಿತರಿದ್ದರು. ಅಧಿಕಾರ ಹಸ್ತಾಂತರದ ವೇಳೆ ಪೂರ್ವ ರಾಜ್ಯಪಾಲ ಎಂ.ಬಿ.ಸದಾಶಿವ, ಮಾಜಿ ಆರ್ ಸಿ ಧರ್ಮಪಾಲ ಗೌಡ ಕಮಿಲ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಾಂತೀಯ ಅಧ್ಯಕ್ಷೆ ಸಂಧ್ಯಾ ಸಚಿತ್ ರೈ, ವಲಯಾಧ್ಯಕ್ಷ ಹಾಗೂ ಪಂಜ ಲಯನ್ಸ್ ಕ್ಲಬ್ ನಿಕಟ ಪೂರ್ವಾಧ್ಯಕ್ಷ ಸಂತೋಷ್ ಜಾಕೆ, ಕಾರ್ಯದರ್ಶಿ ನಾಗೇಶ್ ಕಿನ್ನಿಕುಮೇರಿ, ಕೋಶಾಧ್ಯಕ್ಷ ಕರುಣಾಕರ ಎಣ್ಣೆಮಜಲು, ನೂತನ ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ, ಕೋಶಾಧ್ಯಕ್ಷ ಆನಂದ ಜಳಕದಹೊಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *