Ad Widget .

KSRTC ಕಂಡಕ್ಟರ್ ಗಳಿಗೆ ಬಿಗ್ ಶಾಕ್! ಹೊಸ ರೂಲ್ಸ್ ತಂದಿರುವ ಸರ್ಕಾರ

ಸಮಗ್ರ ನ್ಯೂಸ್:ನೂತನ ಸರಕಾರ ತಂದ ಶಕ್ತಿ ಯೋಜನೆ ಈಗಾಗಲೇ ಉತ್ತಮ ಫಲಿತಾಂಶವನ್ನು ಕಂಡಿದ್ದು ಸಾಕಷ್ಟು ಮಹಿಳೆಯರು ಉಚಿತ ಪ್ರಯಾಣದ ಸಹಾಯವನ್ನು ಪಡೆದಿದ್ದಾರೆ. ಆದರೆ, ಇಲ್ಲಿ ಮಹಿಳೆಯರಿಗೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಹಾಗಾಗಿ ಇಂತಹ ಯಾವುದೇ ಸಮಸ್ಯೆಗಳು ಸಾರಿಗೆ ಇಲಾಖೆಯ ಗಮನಕ್ಕೆ ಬಂದರೆ ತಕ್ಷಣವೇ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ.

Ad Widget . Ad Widget .

ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಾರೆ ಎನ್ನುವ ಕಾರಣಕ್ಕೆ ಅವರನ್ನು ಅಪಹಾಸ್ಯ ಮಾಡಿದರೆ ಅಥವಾ ಬೇರೆ ರೀತಿಯಲ್ಲಿ ಮಹಿಳೆಯರೊಂದಿಗೆ ಅಗೌರವದಿಂದ ಅಸಭ್ಯವಾಗಿ ನಡೆದುಕೊಂಡರೆ, ಇದರ ಬಗ್ಗೆ ಬಸ್ ನಿರ್ವಾಹಕ ಅಥವಾ ಚಾಲಕರ ವಿರುದ್ಧ ಯಾವುದೇ ದೂರು ಕೇಳಿ ಬಂದರೆ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಕರ್ನಾಟಕ ರಾಜ್ಯದಲ್ಲಿ ಇರುವ ಸಮಸ್ತ ಮಹಿಳೆಯರು ಕೂಡ ರಾಜ್ಯ ಸಾರಿಗೆ ಸಂಸ್ಥೆಗಳಲ್ಲಿ ಶಕ್ತಿ ಯೋಜನೆಯ ಅಡಿಯಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು.

Ad Widget . Ad Widget .

ಚಾಲನಾ ಸಿಬ್ಬಂದಿಗಳು ಸಾರಿಗೆಯಲ್ಲಿ ಪ್ರಯಾಣಿಸುವ ಪ್ರತಿ ಮಹಿಳಾ ಪ್ರಯಾಣಿಕರೊಂದಿಗೆ ಸಹಜವಾಗಿ ಹಾಗೂ ಸೌಜನ್ಯದಿಂದ ನಡೆದುಕೊಳ್ಳಬೇಕು. ಮಹಿಳೆಯರ ಜೊತೆಗೆ ತಪ್ಪಾಗಿ ವರ್ತಿಸಿದ್ದಲ್ಲಿ ಅವರಿಗೆ ಅಗೌರವ ತೋರಿಸಿದ್ದಲ್ಲಿ, ಈ ಬಗ್ಗೆ ಮಹಿಳೆಯರು ದೂರು ನೀಡಿದರೆ ಅವರಿಗೆ ತೊಂದರೆ ಕೊಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಸಾರಿಗೆ ನಿಗಮದ ಚಾಲಕ ಮತ್ತು ನಿರ್ವಾಹಕರು ನಿಗದಿತ
ಬಸ್ ನಲ್ಲಿ ಬಸ್ ನಿಲುಗಡೆ ಇರುವ ಎಲ್ಲಾ ಪ್ರದೇಶದಲ್ಲಿ ಎಲ್ಲಾ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು, ಅದೇ ರೀತಿ ಮಹಿಳೆಯರು ಹಾಗೂ ಮಕ್ಕಳಿಗೆ ವಿಶೇಷ ಪ್ರಾಧಾನ್ಯತೆ ನೀಡಬೇಕು ಇದಕ್ಕೆ ಇಲಾಖೆಯವರು ಸಹಕರಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ.

Leave a Comment

Your email address will not be published. Required fields are marked *