Ad Widget .

ಭೂಸೇನೆ ಯೋಧ ಮಂಡ್ಯ ಮೂಲದ ಜನಾರ್ಧನ ಗೌಡ ಸಾವು

ಸಮಗ್ರ ನ್ಯೂಸ್: ಭೂಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಕರ್ನಾಟಕದ ಯೋಧರೊಬ್ಬರು ಚಿಕಿತ್ಸೆಗೆ ಫಲಿಸದೇ ಮೃತಪಟ್ಟ ಘಟನೆ ನಡೆದಿದೆ.

Ad Widget . Ad Widget .

ಭೂಸೇನೆಯಲ್ಲಿ ಯೋಧನಾಗಿದ್ದ ಜನಾರ್ಧನ ಗೌಡ ಮೃತಪಟ್ಟಿದ್ದಾರೆ. ಮೃತ ಯೋಧ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದವರು ಎಂದು ತಿಳಿದು ಬಂದಿದೆ.

Ad Widget . Ad Widget .

ಎಂದಿನಂತೆ ತಮ್ಮ ಕೆಲಸದಲ್ಲಿ ನಿರತಾಗಿದ್ದ ಯೋಧ ಜನಾರ್ಧನ ಗೌಡ ಅವರಿಗೆ ಕಳೆದೊಂದು ವಾರದಿಂದ ಆರೋಗ್ಯದಲ್ಲಿ ಏರು ಪೇರಾಗಿತ್ತು. ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಅವರನ್ನು ಛತ್ತೀಸ್‌ಗಢದ ಆಸ್ಪತ್ರೆಗೆಗೆ ದಾಖಲಾಗಿತ್ತು. ಚಿಕಿತ್ಸೆ ನೀಡುವ ಹಂತದಲ್ಲಿಯೇ ಅವರು ಉಸಿರು ಚೆಲ್ಲಿದ್ದಾರೆ.

ಸದ್ಯ ಮೃತ ಯೋಧನ ಪಾರ್ಥಿವ ಶರೀರವನ್ನು ಜೂನ್ 24ರಂದು ಶನಿವಾರ ಮಧ್ಯಾಹ್ನ ಮಂಡ್ಯ ಜಿಲ್ಲೆಯ ಸ್ವಗ್ರಾಮಕ್ಕೆ ಛತ್ತೀಸ್‌ಗಢದಿಂದ ಬರಲಿದೆ. ಅಂದು ಸಂಜೆ ಕಿಕ್ಕೇರಿ ಗ್ರಾಮದಲ್ಲಿ ಸಕಲ ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ಜರುಗಲಿದೆ ಎಂದು ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *