Ad Widget .

ಗ್ಯಾರಂಟಿ ಯೊಜನೆಗಳಿಗೆ ಆಧಾರ್ ಲಿಂಕ್| ಹೆಚ್ಚಿದ ಒತ್ತಡದಿಂದ ಕಣ್ಣೀರು ಹಾಕಿದ ಮಹಿಳಾ ಸಿಬ್ಬಂದಿ

ಸಮಗ್ರ ನ್ಯೂಸ್: ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಿಗೆ ಆಧಾರ್‌ ಕಡ್ಡಾಯ ಮಾಡಿದ್ದು, ರಾಯಚೂರಿನ ಆಧಾರ್‌ ಕೇಂದ್ರದಲ್ಲಿ ತೀವ್ರ ಒತ್ತಡ ಹೆಚ್ಚಾಗಿ ಮಹಿಳಾ ಸಿಬ್ಬಂದಿ ಸಾರ್ವಜನಿಕರ ಎದುರೇ ಕಣ್ಣೀರು ಹಾಕಿರುವ ಘಟನೆ ನಡೆದಿದೆ.

Ad Widget . Ad Widget .

ನಗರದ ಅಂಚೆ ಕಚೇರಿಯಲ್ಲಿ ತೆರೆಯಲಾಗಿದ್ದ ಆಧಾರ್‌ ಕೇಂದ್ರದಲ್ಲಿಯೇ ಸಿಬ್ಬಂದಿ ಕಣ್ಣೀರು ಸುರಿಸಿರುವ ಘಟನೆ ನಡೆದಿದೆ. ವರ್ಕ್‌ ಲೋಡ್‌ ನಿಂದಾಗಿ ಮಹಿಳಾ ಸಿಬ್ಬಂದಿ ಕಣ್ಣೀರಿಟ್ಟ ವೀಡಿಯೋ ವೈರಲ್ ಆಗಿದೆ.

Ad Widget . Ad Widget .

ಆಧಾರ್‌ ಕೇಂದ್ರದಲ್ಲಿ ಆಧಾರ್ ಲಿಂಕ್ ಸೇರಿದಂತೆ ಹಲವಾರು ತಿದ್ದುಪಡಿ ಮಾಡಿಸುವುದಕ್ಕಾಗಿ ಜನಸಂದಣಿ ಹೆಚ್ಚಾಗಿದೆ. ಆದರೆ ಕೇಂದ್ರದಲ್ಲಿ ಓರ್ವ ಮಹಿಳಾ ಸಿಬ್ಬಂದಿಯನ್ನು ಮಾತ್ರ ಕರ್ತವ್ಯಕ್ಕೆ ನಿಯೋಜಿಸಿದ್ದು ಒತ್ತಡ ಹೆಚ್ಚಾಗಿದೆ. ಸಾರ್ವಜನಿಕರು ಸೇರಿದಂತೆ ಮೇಲಧಿಕಾರಿಯಿಂದಲೂ ಒತ್ತಡ ಹೆಚ್ಚಾಗಿದ್ದರಿಂದಾಗಿ ಕಣ್ಣೀರು ಸುರಿಸಿದ್ದಾರೆ.

Leave a Comment

Your email address will not be published. Required fields are marked *