Ad Widget .

ಬೆಳ್ಳಾರೆ ಬೂಡುದ ಸ್ವಾಮಿ ಕೊರಗಜ್ಜ ವಿಡೀಯೋ ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮ

ಸಮಗ್ರ ನ್ಯೂಸ್:ಸುಳ್ಯದ ಭಾವನಾ ಮೀಡಿಯಾ ಅರ್ಪಿಸುವ ಬೆಳ್ಳಾರೆ ಬೂಡುದ ಸ್ವಾಮಿ ಕೊರಗಜ್ಜ ವೀಡಿಯೋ ಭಕ್ತಿಗೀತೆಯನ್ನು ಬೆಳ್ಳಾರೆ ಬೂಡುದ ಸ್ವಾಮಿ ಕೊರಗಜ್ಜ ಸನ್ನಿಧಾನದಲ್ಲಿ ಬಿಡುಗಡೆಗೊಂಡಿತು.

Ad Widget . Ad Widget .

ಬೂಡು ದೇವಸ್ಥಾನದ ಪೂಜಾರಿ ಹಾಗೂ ಅಧ್ಯಕ್ಷರಾದ ಶ್ರೀ ಸುಂದರ ರವರು ಕಾರ್ಯಕ್ರಮ ಉದ್ಘಾಟಿಸಿದರು.ಸುಳ್ಯದ ಖ್ಯಾತ ಜ್ಯೋತಿಷಿ ಹಾಗೂ ಸಾಹಿತಿ ಮತ್ತು ಗಾಯಕರಾದ ಎಚ್.ಭೀಮರಾವ್ ವಾಷ್ಠರ್ ರವರು ಭಕ್ತಿಗೀತೆಯನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು . ಈ ಭಕ್ತಿಗೀತೆಗೆ ಸಂಪೂರ್ಣ ಸಹಕಾರ ನೀಡಿದ ಐವರ್ನಾಡಿನ ಪೆರುಮಾಳ್ ಲಕ್ಷ್ಮಣ್ ರವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Ad Widget . Ad Widget .

ನಿರಂಜನ್ ಕಡ್ಲಾರು ಅವರ ಸಾಹಿತ್ಯದಲ್ಲಿ ಪುಷ್ಪಾವತಿ ಎಡಮಂಗಲ ಇವರ ಗಾಯನದಲ್ಲಿ ಮೂಡಿಬಂದ ತುಳುನಾಡ ಕಾರ್ನಿಕದ ದೈವ ಕೊರಗಜ್ಜನ ಭಕ್ತಿಗೀತೆ’ ಬಿಡುಗಡೆ ಸಂದರ್ಭದಲ್ಲಿ ರಾಮಣ್ಣ ಎಡಮಂಗಲ , ವಿಜಯ್ ಪಾಟಾಜೆ , ಸಾಗರ್ ಬೆಳ್ಳಾರೆ , ಪ್ರದ್ಯುಮ್ನ , ಲಲಿತಾ ಕಡ್ಲಾರು ಇನ್ನಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *