ಸಮಗ್ರ ನ್ಯೂಸ್: ಮಡಿಕೇರಿ ನಗರದ ಎಲ್ಲೆಂದರಲ್ಲಿ ಅಲೆಯುತ್ತಿದ್ದ ಅಸಹಾಯಕ ವಯಾವೃದ್ದೆ ಹಾಗೂ ವಿಕಲ ಚೇತನ ವೃದರಿಗೆ ಕೊಡಗು ಹಿತರಕ್ಷಣಾ ವೇದಿಕೆ ಆಸರೆ ಕಲ್ಪಿಸಿದೆ.
ಹಲವು ದಿನಗಳಿಂದ ಮಡಿಕೇರಿ ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಹಾಗೂ ಹಾವೇರಿ ಹಾಲ್ ನ ಬಳಿ ನಗರದ ರಸ್ತೆ ಬದಿಯ ಅಂಗಡಿ ಮಳಿಗೆಗಳ ಸುರಿನಲ್ಲಿ ಮಲಗುತ್ತಿದ್ದ ವಯೋವೃದ್ಧರನ್ನು ಸಾರ್ವಜನಿಕರು ಕಂಡು ಹಿತರಕ್ಷಣಾ ವೇದಿಕೆಯ ಸದಸ್ಯರಾದ ಆಕಾಶ್ ಹಾಗೂ ಕಿರಣ್ ಅವರ ಗಮನಕ್ಕೆ ತಂದಿದ್ದರು.
ಈ ವಿಷಯವನ್ನು ಆಕಾಶ್ ಅವರು ವೇದಿಕೆಯ ಅಧ್ಯಕ್ಷರಾದ ರವಿ ಗೌಡ ಅವರ ಗಮನಕ್ಕೆ ತಂದ ಕೂಡಲೇ ವೇದಿಕೆ ವತಿಯಿಂದ ಮಡಿಕೇರಿ ನಗರದ ಶಕ್ತಿ ವೃದ್ಧಾಶ್ರಮದ ಮೇಲ್ವಿಚಾರಕರಾದ ಸತೀಶ್ ಅವರ ಗಮನಕ್ಕೆ ತಂದು ವಯೋವೃದ್ಧರನ್ನು ಶಕ್ತಿ ಆಶ್ರಮ ಕ್ಕೆ ಸೇರಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ರವಿ ಗೌಡ . ಪ್ರಧಾನ ಕಾರ್ಯದರ್ಶಿಗಳದ ಮೀನಾಜ್ ಪ್ರವೀಣ್. ಮಡಿಕೇರಿ ತಾಲೂಕು ಅಧ್ಯಕ್ಷರಾದ ನಾಗೇಶ್. ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾದ ಕವಿತಾ ಪ್ರಸಾದ್. ನಿರ್ದೇಶಕರಾದ ಲಿಲ್ಲಿ. ನಗರ ಕಾರ್ಯದರ್ಶಿಗಳಾದ ಪೂರ್ಣಿಮಾ. ಸದಸ್ಯರುಗಳಾದ ಆಕಾಶ್. ಕಿರಣ್ ಹಾಗೂ ಶಕ್ತಿ ಆಶ್ರಮದ ಮೇಲ್ವಿಚಾರಕರಾದ ಹೆಚ್ ಆರ್ ಸತೀಶ್ ಹಾಜರಿದ್ದರು.