Ad Widget .

ಬೆಳ್ತಂಗಡಿ: ಅಂಗನವಾಡಿಯಿಂದ ಪುಟಾಣಿಗಳಿಗೆ ಕೊಟ್ಟ ಮೊಟ್ಟೆಯೊಳಗೆ ಮರಿ! ಗುಣಮಟ್ಟ ಕಳೆದ ಆಹಾರದ ವಿರುದ್ಧ ಪೋಷಕರ ಆಕ್ರೋಶ

ಸಮಗ್ರ ನ್ಯೂಸ್: ಅಂಗನವಾಡಿ ಶಾಲಾ ಮಕ್ಕಳಿಗೆ ಸರ್ಕಾರದಿಂದ ಕೊಡಮಾಡುವ ಪೌಷ್ಟಿಕ ಆಹಾರ ಮೊಟ್ಟೆಯಲ್ಲಿ ಬೇಯಿಸಿದಾಗ ಮರಿ ಪತ್ತೆಯಾದ ಪ್ರಕರಣವೊಂದು ಬೆಳ್ತಂಗಡಿ ತಾಲೂಕಿನ ರೆಖ್ಯ, ಅರಸಿನಮಕ್ಕಿಯಲ್ಲಿ ಬೆಳಕಿಗೆ ಬಂದಿದೆ.

Ad Widget . Ad Widget .

ಕಳೆದ ಕೆಲ ವರ್ಷಗಳಿಂದ ಶಾಲಾ ಮಕ್ಕಳಿಗೆ ಹಾಲು, ಮೊಟ್ಟೆ,ದವಸ ಧಾನ್ಯಗಳನ್ನು ಅಂಗನವಾಡಿ ಮೂಲಕ ಎಲ್ಲಾ ಮನೆಗಳಿಗೂ ತಲುಪಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಅಪೌಷ್ಟಿಕತೆ ನೀಗಿಸುವ ಸರ್ಕಾರದ ಉತ್ತಮ ಕಾರ್ಯದಿಂದ ಬೆಳೆಯುವ ಮಕ್ಕಳು ಪೌಷ್ಟಿಕವಾಗಿ ಬೆಳೆಯುತ್ತಾರೆ ಎನ್ನುವ ಯೋಜನೆ ಇಲಾಖೆಯದ್ದು. ಇದಕ್ಕಾಗಿ ಇದೆಲ್ಲದರ ಲೆಕ್ಕಾಚಾರ, ವಿತರಣೆ ಹೊಣೆ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹೊರಿಸಿ ಕಾರ್ಯಕ್ರಮ ರೂಪಿಸಲಾಗುತ್ತಿದೆ.

Ad Widget . Ad Widget .

ಆದರೆ ರೆಖ್ಯ ಗ್ರಾಮದ ಎಂಜಿರ-ಕಟ್ಟೆ ಅಂಗನವಾಡಿ ಕೇಂದ್ರದಿಂದ ವಿತರಣೆಯಾಗಿದ್ದ ಮೊಟ್ಟೆಯನ್ನು ಪಡೆದುಕೊಂಡಿದ್ದ ಮಗುವಿನ ಮನೆಯಲ್ಲಿ ಬೇಯಿಸಿದಾಗ ಗುಣಮಟ್ಟದ ಮೊಟ್ಟೆ ಕಳಪೆಯಾಗಿದ್ದು, ಮೊಟ್ಟೆಯೊಳಗೆ ಹೆಪ್ಪುಗಟ್ಟಿದ ರಕ್ತ, ಅದಾಗಲೇ ಹೊರಬರಬೇಕಿದ್ದ ಮರಿ ಎಲ್ಲಾ ಕಂಡುಬಂದಿತ್ತು.

ಈ ಸುದ್ದಿ ವೈರಲ್ ಆಗಿದ್ದು, ಮೊಟ್ಟೆ ಪಡೆದುಕೊಂಡಿದ್ದ ಪ್ರತೀ ಮನೆಯಲ್ಲೂ ಗುಣಮಟ್ಟ, ಸಂಬಂಧಪಟ್ಟವರ ನಿರ್ಲಕ್ಷ್ಯಕ್ಕೆ ಆಕ್ರೋಶ ಹೊರಬಿತ್ತು. ಈ ವಿಚಾರ ಅರಸಿನಮಕ್ಕಿ ಗ್ರಾ.ಪಂ ನ ವಾರ್ಡ್ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಮುಂದಿನ ಗ್ರಾಮಸಭೆಯಲ್ಲೂ ಚರ್ಚೆಗೆ ಬರಲಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ.

ಆದರೆ ಅಂಗನವಾಡಿ ಕಾರ್ಯಕರ್ತೆ ಅಂತಹ ಯಾವುದೇ ಘಟನೆ ನಡೆದಿಲ್ಲ, ನಮ್ಮ ಗಮನಕ್ಕೆ ಬರಲಿಲ್ಲ ಎಂದಿದ್ದಾರೆ. ಒಟ್ಟಾರೆ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿರುವ ಈ ಮೊಟ್ಟೆ ಮಸಾಲ ಇನ್ನೆಲ್ಲಿಗೆ ತಲುಪುತ್ತೊ ಕಾದುನೋಡಬೇಕಿದೆ.

Leave a Comment

Your email address will not be published. Required fields are marked *