ಸಮಗ್ರ ನ್ಯೂಸ್: ಬೆನ್ನು ನೋವು ಎಂದು ಹೋದ ಯುವತಿಗೆ ಇಲ್ಲಸಲ್ಲದ ಚಿಕಿತ್ಸೆ ಮಾಡಿ ಯುವತಿಯ ಜೀವ ತೆಗೆದಿದ್ದಾರೆ ಎನ್ನಲಾದ ಘಟನೆ ಉಡುಪಿಯ ಸಿಟಿ ಆಸ್ಪತ್ರೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ನಿಖಿತಾ ಎಂದು ಗುರುತಿಸಲಾಗಿದೆ.
ಈಕೆ ವಿದ್ಯಾರ್ಥಿಯಾಗಿದ್ದು ಕೆಲ ದಿನಗಳ ಹಿಂದೆ ಬೆನ್ನು ನೋವು ಎಂದು ಪರೀಕ್ಷೆ ಮಾಡಿಸಲು ಉಡುಪಿಯಲ್ಲಿರುವ ಸಿಟಿ ಆಸ್ಪತ್ರೆಗೆ ಹೋಗಿದ್ದಳು. ಈ ವೇಲೆ ಅಲ್ಲಿಯ ವೈದ್ಯರು ಆಕೆಯನ್ನು ಪರೀಕ್ಷೆ ಮಾಡಿ ನಿನಗೆ ಅರ್ನಿಯಾ, ಅಪೆಂಡಿಕ್ಸ್ ಇದೆ ಎಂದು ಇತ್ಯಾದಿ ಇಲ್ಲ ಸಲ್ಲದ ಗುಣಮಟ್ಟದ ಪರೀಕ್ಷೆಗಳನ್ನು ಮಾಡಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಚಿಕಿತ್ಸೆಯಲ್ಲಿ ವೈದ್ಯರು ಮಾಡಿದ ಎಡವಟ್ಟಿನಿಂದ ಆಕೆ ಸಾವನಪ್ಪಿದ್ದಾಳೆ ಎನ್ನಲಾಗಿದೆ. ಬಳಿಕ ಅಕೆಯ ಶವವನ್ನು ಹಿಂತಿರುಗಿಸಿದ್ದು, ತಮ್ಮ ತಪ್ಪಿನಿಂದ ಜೀವ ಹೋದ ಕಾರಣ ಬಿಲ್ ಕಟ್ಟುವುದು ಬೇಡ ಎಂದು ಮನೆಯವರಿಗೆ ಹೇಳಿದ್ದಾರೆ.
ಮೃತ ಯುವತಿಯ ಮನೆಯವರು ಬಡ ಕುಟುಂಬದವರಾಗಿದ್ದು, ಮಗಳ ಸಾವಿನಿಂದ ಕಂಗಾಲಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೊಸ್ಟರ್‌ಗಳು ಮತ್ತು ವಾಯಿಸ್ ರೆಕಾರ್ಡ್ ಹರಿದಾಡುತ್ತಿದ್ದು ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಅಮಾಯಕ ಹೆಣ್ಣುಮಗಳ ಜೀವ ತೆಗೆದ ಸಿಟಿ ಆಸ್ಪತ್ರೆಯನ್ನು ಸಂಬಂಧಪಟ್ಟ ಆಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಜಾಲತಾಣಗಳಲ್ಲಿ ಆಗ್ರಹ ವ್ಯಕ್ತವಾಗಿದೆ.