Ad Widget .

ಪುಟಾಣಿಗಳ ನಡುವೆ ಹೊಡೆದಾಟ| ಪೋಷಕರೇ ‘ಡೇ ಕೇರ್ ‘ ಸೆಂಟರ್ ಗೆ ಕಳುಹಿಸುವ ಮುನ್ನ ಎಚ್ಚರ

ಸಮಗ್ರ ನ್ಯೂಸ್: ಪುಟ್ಟ ಮಕ್ಕಳನ್ನು ಡೇ ಕೇರ್​ ಸೆಂಟರ್ ಗೆ ಸೇರಿಸಿ ಕೆಲಸಕ್ಕೆ ಹೋಗುವುದು ಮಹಾನಗರಗಳಲ್ಲಿ ಮಾಮೂಲಿಯಾಗಿದೆ. ಆದರೆ ಈ ಡೇ ಕೇರ್​ನಲ್ಲಿನ ಸಿಬ್ಬಂದಿ ಮಕ್ಕಳನ್ನು ಹೇಗೆ ಕೇರ್ ಮಾಡುತ್ತಾರೆ ಅನ್ನುವ ಅನುಮಾನ ಮೂಡುವಂತ ಘಟನೆಯೊಂದು ಸದ್ಯ ಬೆಂಗಳೂರಿನಲ್ಲಿ ನಡೆದಿದೆ. ನಗರದ ಚಿಕ್ಕಲಸಂದ್ರದಲ್ಲಿರುವ ಡೇ ಕೇರ್ ಸೆಂಟರ್​ನಲ್ಲಿ ದೊಡ್ಡ ಮಗು ಇನ್ನೊಂದು ಸಣ್ಣ ಮಗುವಿಗೆ ಪದೇ ಪದೇ ಹೊಡೆದಿರುವಂತಹ ಘಟನೆ ನಡೆದಿದ್ದು, ಸದ್ಯ ವಿಡಿಯೋ ವೈರಲ್​ ಆಗಿದೆ.

Ad Widget . Ad Widget .

ಡೇ ಕೇರ್ ಸೆಂಟರ್ ಅಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಆಯಾ ಒಂದು ಮಗುವನ್ನು ಹೊರಗೆ ಕರೆದುಕೊಂಡು ಹೋಗುತ್ತಾರೆ. ಈ ಸಂದರ್ಭದಲ್ಲಿ ಒಂದು ಮಗು ಇನ್ನೊಂದು ಮಗುವನ್ನು ಹಿಡಿದುಕೊಂಡು ಹೊಡೆದಿದೆ. ಸುಮಾರು ನಾಲ್ಕೈದು ನಿಮಿಷ ಹೊಡೆದರೂ ಮಕ್ಕಳನ್ನು ನೋಡಿಕೊಳ್ಳಲು ಅಲ್ಲಿಗೆ ಯಾರು ಬರುವುದಿಲ್ಲ.

Ad Widget . Ad Widget .

ವೀಡಿಯೋ ಲಿಂಕ್:

https://fb.watch/lllEF5Mo0b/?mibextid=ZbWKwL

ಈ ಹಿನ್ನೆಲೆಯಲ್ಲಿ ಡೇ ಕೇರ್ ಸೆಂಟರ್ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದು, ಟ್ವಿಟರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಸುಬ್ರಹ್ಮಣ್ಯಪುರ ಠಾಣೆಗೆ ನಗರ ಪೊಲೀಸರು ಸೂಕ್ತ ತನಿಖೆ ಮಡೆಸುವಂತೆ ಸೂಚನೆ ನೀಡಿದ್ದಾರೆ.

ಘಟನೆ ಕುರಿತು ಠಾಣೆಗೆ ದೂರು ನೀಡಲು ಬಾಲಕಿ ಪೋಷಕರು ನಿರಾಕರಿಸಿದ್ದಾರೆ. ಹಾಗಾಗಿ ಸ್ಥಳಕ್ಕೆ ಸುಬ್ರಮಣ್ಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮಾಂಟೆಸ್ಸರಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯಿಂದ ಮಾಹಿತಿ ಕಲೆಹಾಕಿದ್ದಾರೆ. ಘಟನೆ ಸಂಬಂಧ ಮುಂದಿನ ಕ್ರಮದ ಕುರಿತು ಪೊಲೀಸರು ಕಾನೂನು ತಜ್ಞರ ಮೊರೆಹೋಗಿದ್ದಾರೆ.

ವೀಡಿಯೋ ಲಿಂಕ್:

https://fb.watch/lllEF5Mo0b/?mibextid=ZbWKwL

ಸಿಟಿಜನ್ಸ್ ಮೂವ್ಮೆಂಟ್​ ಈ ಟ್ವೀಟ್​ ಮಾಡಿದ್ದು, ಮುಚ್ಚಿದ ಕೋಣೆಯೊಂದರಲ್ಲಿ ಅಂಬೆಗಾಲಿಡುವ ಮಕ್ಕಳನ್ನು ಗಮನಿಸದೆ ಬಿಡುವ ಪ್ರಿಸ್ಕೂಲ್ನ ಗೊಂದಲಕಾರಿ ವಿಡಿಯೋವನ್ನು ನಾವು ಗಮನಿಸಿದ್ದೇವೆ. ದೊಡ್ಡ ಮಗು ಇನ್ನೊಂದು ಸಣ್ಣ ಮಗುವಿಗೆ ಪದೇ ಪದೇ ಹೊಡೆದಿರುವುದನ್ನು ಕಾಣಬಹುದಾಗಿದೆ. ದಯವಿಟ್ಟು ಈ ಡೇ ಕೇರ್​ಗೆ ನಿಮ್ಮ ಮಕ್ಕಳನ್ನು ಕಳುಹಿಸಬೇಡಿ ಎಂದು ಮನವಿ ಮಾಡಿದೆ.

ವೀಡಿಯೋ ಲಿಂಕ್:

https://fb.watch/lllEF5Mo0b/?mibextid=ZbWKwL

Leave a Comment

Your email address will not be published. Required fields are marked *