Ad Widget .

ಪುತ್ತೂರು: ಇನ್ನರ್‌ವೀಲ್ ಕ್ಲಬ್ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಸಮಗ್ರ ನ್ಯೂಸ್: ಇನ್ನರ್‌ವೀಲ್ ಕ್ಲಬ್ ಪುತ್ತೂರು ಮತ್ತು ಪುತ್ತೂರು ಸಿಟಿ ಹಾಸ್ಪಿಟಲ್ ಚಾರಿಟೇಬಲ್ ಟ್ರಸ್ಟ್ ಜಂಟಿಯಾಗಿ ಜೂನ್ ೨೧ರಂದು ಪುತ್ತೂರು ಸಿಟಿ ಹಾಸ್ಪಿಟಲ್‌ನಲ್ಲಿ ಯೋಗ ದಿನಾಚರಣೆಯನ್ನು ಆಚರಿಸಿತು.

Ad Widget . Ad Widget .

ಸಂಪನ್ಮೂಲ ವ್ಯಕ್ತಿಯಾಗಿ ಡಾ. ಚೇತನ ಮುದ್ರಜೆ (ಬಿ.ಎ.ಎಮ್.ಎಸ್ ವೈ.ಐ.ಸಿ) ಸಹಕರಿಸಿದರು. ಪುತ್ತೂರು ಸಿಟಿ ಹಾಸ್ಪಿಟಲ್‌ನ ಪೂರ್ವ ಅಧ್ಯಕ್ಷರು ಶ್ರೀಮತಿ ಮಂಜುಳಾ ಭಾಸ್ಕರ್, ಮಕ್ಕಳ ತಜ್ಞ ಡಾ. ಎಮ್.ಎಸ್ ಶೆಣೈ, ಇನ್ನರ್‌ವೀಲ್ ಸಂಸ್ಥೆಯ ನಿರ್ದೇಶಕರುಗಳಾದ ಶ್ರೀಮತಿ ವಿಜಯಲಕ್ಷ್ಮಿ ಶೆಣೈ, ಶ್ರೀಮತಿ ರಾಜಿ ಬಲರಾಮ್, ಶ್ರೀಮತಿ ವೀಣಾ ಬಿ.ಕೆ, ಇನ್ನರ್‌ವೀಲ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿಕೃಷ್ಣ ಮುಳಿಯ ಹಾಗೂ ಇತರ ಇನ್ನರ್‌ವೀಲ್ ಸದಸ್ಯರು ಪಾಲ್ಗೊಂಡರು.

Ad Widget . Ad Widget .

ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆ ನಡೆಯಿತು. ಸಂಧ್ಯಾ ಸಾಯ ಪ್ರಾರ್ಥಿಸಿದರು. ವಚನ ಜಯರಾಮ್ ಧನ್ಯವಾದ ಸಮರ್ಪಿಸಿದರು.

Leave a Comment

Your email address will not be published. Required fields are marked *