Ad Widget .

ಅಭ್ಯರ್ಥಿ ಜಿ ಕೃಷ್ಣಪ್ಪ, ಕೆಲವು ನಾಯಕರ ದ್ವೇಷ ರಾಜಕಾರಣ| ಸುಳ್ಯ- ಕಡಬ ಕಾಂಗ್ರೇಸ್ ಮುಖಂಡರಿಂದ ಕೆಪಿಸಿಸಿ ಶಿಸ್ತುಪಾಲನ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಭೇಟಿ

ಸಮಗ್ರ ನ್ಯೂಸ್:‌ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ನಂತರ ನಡೆದ ಬೆಳವಣಿಗೆಯಲ್ಲಿ ಸುಳ್ಯ ಮತ್ತು ಕಡಬದ ಪ್ರಮುಖ ನಾಯಕರುಗಳಿಗೆ ಶೋಕಾಸ್ ನೋಟೀಸ್ ಮತ್ತು ಪಕ್ಷದಿಂದ ಉಚ್ಚಾಟನೆಯ ಆದೇಶ ಬಂದಿರುವ ಹಿನ್ನೆಲೆಯಲ್ಲಿ ವಾಸ್ತವ ವಿಚಾರವನ್ನು ಮತ್ತು ಅಭ್ಯರ್ಥಿ ಜಿ ಕೃಷ್ಣಪ್ಪ ಮತ್ತು ಕೆಲವು ನಾಯಕರ ದ್ವೇಷ ರಾಜಕಾರಣದ ಬಗ್ಗೆ ಮನವರಿಕೆ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಶಿಸ್ತು ಪಾಲನ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ರವರನ್ನು ಸುಳ್ಯ ಮತ್ತು ಕಡಬದ ನಾಯಕರು ಬೆಂಗಳೂರಿನಲ್ಲಿ ಭೇಟಿ ಮಾಡಿದರು.

Ad Widget . Ad Widget .

ಶಿಸ್ತು ಕ್ರಮದ ವಿಚಾರದ ಬಗ್ಗೆ ವಿವರಣೆ ನೀಡಿದ ಕೆಪಿಸಿಸಿ ಶಿಸ್ತುಪಾಲನ ಸಮಿತಿಯ ಅಧ್ಯಕ್ಷ ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ರವರು ಸುಳ್ಯದ ನಾಯಕರ ವಿರುದ್ಧ ನೀಡಿರುವ ಶೋಕಾಸ್ ನೋಟೀಸ್ ಮತ್ತು ಉಚ್ಚಾಟನೆಯ ಆದೇಶ ತಪ್ಪಾಗಿರುವುದರಿಂದ ಕೆಪಿಸಿಸಿ ಅಧ್ಯಕ್ಷರು ಸಹ ನನ್ನ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಒಂದು ವಾರದ ಒಳಗೆ ಕೆಪಿಸಿಸಿ ಅಧ್ಯಕ್ಷರೊಂದಿಗೆ ಚರ್ಚಿಸಿ ಆದೇಶವನ್ನು ಹಿಂಪಡೆಯುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಸಂಯೋಜಕರಾದ ಹೆಚ್ ಎಂ ನಂದಕುಮಾರ್, ಮಾಜಿ ಕೆಪಿಸಿಸಿಸದಸ್ಯ,ಡಾ. ರಘು, ಮುಖಂಡರುಗಳಾದ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಕೆ ಗೋಕುಲ್ ದಾಸ್, ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಉಷಾ ಅಂಚನ್, ಆಶಾ ಲಕ್ಷ್ಮಣ್, ಭವಾನಿಶಂಕರ್ ಕಲ್ಮಡ್ಕ, ಶಶಿಧರ್ ಎಂ ಜೆ, ಚೇತನ್ ಕಜೆಗದ್ದೆ, ಸುಧೀರ್ ದೇವಾಡಿಗ, ಫೈಜಲ್ ಕಡಬ, ಶಹೀದ್ ಪಾರೆ ಮೊದಲಾದವರು ಉಪಸ್ಥಿತರಿದ್ದರು.

Ad Widget . Ad Widget .

Leave a Comment

Your email address will not be published. Required fields are marked *