ಸಮಗ್ರ ನ್ಯೂಸ್: ರಸ್ತೆಗೆ ಅಡ್ಡ ಬಂದ ಮಹಿಳೆ ಪ್ರಾಣ ರಕ್ಷಿಸಿದ ಬಸ್ ಚಾಲಕ ವಿರುದ್ಧ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಡಿಪು ಭಾಗದಿಂದ ತೌಡುಗೋಳಿ ಕ್ರಾಸ್ ಮೂಲಕ ಮಂಗಳೂರು ತೆರಳುತ್ತಿದ್ದ ಗೋಪಾಲಕೃಷ್ಣ ಹೆಸರಿನ ಖಾಸಗಿ ಬಸ್ ಜೂನ್ 20ರಂದು ಮಧ್ಯಾಹ್ನ ಬರುತ್ತಿದ್ದಾಗ ಮಹಿಳೆ ಅಡ್ಡ ಬಂದ ಘಟನೆ ನಡೆದಿತ್ತು. ತೌಡುಗೋಳಿ ಕ್ರಾಸ್ ನಲ್ಲಿ ಮಹಿಳೆ ಅಡ್ಡ ಬಂದಿದ್ದು ಕೂಡಲೇ ಗಮನಿಸಿದ ಚಾಲಕ ನಾಗರಾಜ್ ಬಸ್ಸನ್ನು ಬದಿಗೆ ಸರಿಸಿ ನಿಲ್ಲಿಸಿದ್ದರು. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ನಾಗರಾಜ್ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.
ವಿಡಿಯೋದಲ್ಲಿ ಬಸ್ ವೇಗವಾಗಿ ಬರುತ್ತಿರುವುದು ದಾಖಲಾಗಿದ್ದು, ಅದನ್ನು ಅನುಸರಿಸಿ ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯೆಂದು ಹೇಳಿ ಪೊಲೀಸರು ಕೇಸು ದಾಖಲಿಸಿದ್ದಾರೆ.