ಸಮಗ್ರ ನ್ಯೂಸ್: ಆಗಸ್ಟ್‌ನಿಂದ ಹೆಚ್ಚುವರಿ ಅಕ್ಕಿಯನ್ನು ನೀಡಲಾಗುವುದು ಅಂತ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಹೆಚ್ ಮುನಿಯಪ್ಪ ಘೋಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಅಕ್ಕಿ ನೀಡುವುದಕ್ಕೆ ಸಹಕಾರವನ್ನು ನೀಡುತ್ತಿಲ್ಲ, ಹೀಗಾಗಿ ಬೇರೆ ರಾಜ್ಯಗಳಿದಂ ಅಕ್ಕಿ ಖರೀದಿಗೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಮುಂದಿನ ವಾರದಲ್ಲಿ ದರ ನಿಗದಿಯಾಗಲಿದೆ, ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಆಗಸ್ಟ್ ತಿಂಗಳಿನಿಂದ ಅಕ್ಕಿಯನ್ನು ನೀಡಲಾಗುವುದು ಅಂತ ತಿಳಿಸಿದರು. ಇದೇ ವೇಳೆ ಅವರು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿ, ಅನ್ನದಲ್ಲೂ ಕೂಡ ರಾಜ್ಯ ಸರ್ಕಾರ ರಾಜಕೀಯ ನಡೆಸುತ್ತಿದೆ ಅಂತ ತಿಳಿಸಿದರು.
ಈ ನಡುವೆ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕರುಗಳು ಕಿಡಿಕಾರುತ್ತಿದ್ದು, ಅನ್ನದಲ್ಲಿ ರಾಜಕೀಯ ಮಾಡಬಾರದು ಅಂತ ವಾಗ್ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ನೀಡಿದ ಅಶ್ವಾಸನೆಯಂತೆ ಪ್ರತಿ ಕುಟುಂಬಕ್ಕೆ ಕೇಂದ್ರದ ಐದು ಕೆಜಿ ಅಕ್ಕಿ ಜೊತೆಗೆ ರಾಜ್ಯದಿಂದ ಐದುಕೆಜಿ ಒಟ್ಟು ಹತ್ತು ಕೆಜಿ ಅಕ್ಕಿ ನೀಡುವುದಾಗಿ ಹೇಳಿತ್ತು, ಆದರೆ ಈಗ ಅಕ್ಕಿ ನೀಡುವುದರಲ್ಲಿ ವಿಳಂಬವಾಗುತ್ತಿದೆ.