Ad Widget .

ಎರಡು ಬಲ್ಬ್ ನ ಮನೆಗೆ ಒಂದು ಲಕ್ಷ ಬಿಲ್| ಜೆಸ್ಕಾಂ ಸಿಬ್ಬಂದಿ ರಾಕ್; ಅಜ್ಜಿ ಫುಲ್ ಶಾಕ್

ಸಮಗ್ರ ನ್ಯೂಸ್: ಸಣ್ಣ ತಗಡಿನ ಮನೆಯಲ್ಲಿ ವಾಸ, ಮನೆಯಲ್ಲಿ ಎರಡೇ ಬಲ್ಬ್, ಭಾಗ್ಯ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡು ದಿನದ ಊಟಕ್ಕೆ ಕಷ್ಟಪಡುತ್ತಾ ಬದುಕು ಸಾಗಿಸುತ್ತಿರುವ 80 ವರ್ಷದ ಅಜ್ಜಿಗೆ ಬಂದಿರುವ ವಿದ್ಯುತ್ ಬಿಲ್ಲು ಬರೋಬ್ಬರಿ 1 ಲಕ್ಷ ರೂಪಾಯಿ.

Ad Widget . Ad Widget .

ಕೊಪ್ಪಳದ ಭಾಗ್ಯನಗರದಲ್ಲಿ ಸಣ್ಣ ತಗಡಿನ ಶೆಡ್​ನಲ್ಲಿ ವಾಸವಾಗಿರುವ 90 ವಯಸ್ಸಿನ ಗಿರಿಜಮ್ಮ ಮನೆಯಲ್ಲಿ ಎರಡು ಬಲ್ಬ್ ಸಂಪರ್ಕ ಹಾಕಿಸಿಕೊಂಡಿದ್ದಾರಷ್ಟೆ. ಈ ಅಜ್ಜಿ ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದರು. ಹೀಗಾಗಿ ಜೆಸ್ಕಾಂ, 70 ರಿಂದ 80 ರೂಪಾಯಿ ಬೀಲ್ ನೀಡುತ್ತಿತ್ತು. ಆದರೆ, ಆರು ತಿಂಗಳ ಹಿಂದೆ ವೃದ್ದೆಯ ಮನೆಗೆ ಜೆಸ್ಕಾಂ ಸಿಬ್ಬಂದಿ ಮೀಟರ್ ಅಳವಡಿಸಿದ್ದು, ಇದೀಗ 6 ತಿಂಗಳಲ್ಲಿ ಅಜ್ಜಿ ಮನೆಗೆ ಬರೋಬ್ಬರಿ 1,03,315 ರೂಪಾಯಿ ಬಿಲ್ ಬಂದಿದ್ದು, ಅಜ್ಜಿ ಶಾಕ್ ಆಗಿದ್ದಾರೆ.

Ad Widget . Ad Widget .

ಈ ಅಜ್ಜಿ ಈಗ 1 ಲಕ್ಷ ರೂ. ವಿದ್ಯುತ್ ಬಿಲ್ ಹೇಗೆ ಕಟ್ಟುವುದು ಎಂದು ಕಣ್ಣೀರಿಡುತ್ತಿದ್ದಾರೆ. ಇನ್ನು ಒಂದು ತಗಡಿನ ಶೆಡ್ ಮನೆಯಲ್ಲಿ ಕೇವಲ ಎರಡು ಬಲ್ಬ್​ಗೆ ಲಕ್ಷಗಟ್ಟಲೇ ವಿದ್ಯುತ್​ ಬಿಲ್​ ಬರುತ್ತಾ ಎನ್ನುವುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯುನಿಟ್​ ವಿದ್ಯುತ್ ಫ್ರೀ ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯದ ಹಲವೆಡೆ ವಿದ್ಯುತ್​ ಬಿಲ್ ಲಕ್ಷ ಲಕ್ಷ ಬರುತ್ತಿರುವುದು ಇತ್ತೀಚೆಗೆ ವರದಿಯಾಗಿತ್ತು.

Leave a Comment

Your email address will not be published. Required fields are marked *