Ad Widget .

ಮಳೆಗಾಲದಲ್ಲಿ ಮಕ್ಕಳ ಆರೈಕೆ ಹೀಗಿರಲಿ…

ಸಮಗ್ರ ನ್ಯೂಸ್: ಮಳೆಗಾಲ ಶುರುವಾಗಿದೆ. ಅದರ ಜೊತೆಗೆ ಮಕ್ಕಳಿಗೆ ಶಾಲೆ ಕೂಡ ಆರಂಭವಾಗಿದೆ. ನಿಧಾನಕ್ಕೆ ಶೀತ ಕೆಮ್ಮು ಕೂಡ ಅವರಲ್ಲಿ ಕಾಣಿಸಿಕೊಳ್ಳಲು ಶುರುವಾಗುತ್ತದೆ. ಮಳೆಗಾಲದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಮಳೆಗಾಲದಲ್ಲಿ ಮಕ್ಕಳ ಆರೈಕೆ ಬಗ್ಗೆ ಇಲ್ಲೊಂದಿಷ್ಟು ಮಾಹಿತಿ ಇದೆ ನೋಡಿ.

Ad Widget . Ad Widget .

ಮಳೆಗಾಲದಲ್ಲಿ ಮಕ್ಕಳಿಗೆ ಆದಷ್ಟು ಬೆಚ್ಚಗಿನ ಉಡುಪು ಹಾಕಿ. ಅವರ ಕಾಲು, ಕೈ ಎಲ್ಲಾ ಚೆನ್ನಾಗಿ ಮುಚ್ಚುವಂತಹ ಬಟ್ಟೆ ಹಾಕಿ. ಇನ್ನು ಶಾಲೆಗೆ ಹೋಗುವ ಮಕ್ಕಳಿದ್ದರೆ ರಾತ್ರಿ ಮಲಗುವಾಗ ಅವರ ಕಾಲಿಗೆ ತುಸು ಬೆಚ್ಚಗೆ ಮಾಡಿದ ಎಣ್ಣೆ ಹಚ್ಚಿ ನಂತರ ಸ್ಯಾಕ್ಸ್ ಹಾಕಿ ಮಲಗಿಸಿ.

Ad Widget . Ad Widget .

ಮಳೆಗಾಲದಲ್ಲಿ ಮಕ್ಕಳು ನೆನೆಯುವುದಕ್ಕೆ ಹೆಚ್ಚು ಇಷ್ಟಪಡುತ್ತಾರೆ. ಆದರೆ ಇದರಿಂದ ಅವರಿಗೆ ಶೀತ, ಕೆಮ್ಮು, ಜ್ವರ ಬರುವ ಸಾಧ್ಯತೆ ಇರುತ್ತದೆ. ಆದಷ್ಟು ಕೊಡೆ, ರೈನ್ ಕೋಟ್ ಇಲ್ಲದೇ ಮಕ್ಕಳನ್ನು ಹೊರಗಡೆ ಕಳುಹಿಸಬೇಡಿ.

ಇನ್ನು ಚಿಕ್ಕಮಕ್ಕಳಿದ್ದರೆ ಮಳೆಗಾಲದಲ್ಲಿ ಅವರು ಹೆಚ್ಚು ಮೂತ್ರ ವಿಸರ್ಜನೆ ಮಾಡುತ್ತಾರೆ. ಆದಷ್ಟು ಡೈಪರ್ ಅನ್ನು ಆಗಾಗ ಬದಲಾಯಿಸುತ್ತಾ ಇರಿ. ಇಲ್ಲದಿದ್ರೆ ಫಂಗಲ್ ಇನ್ ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ಬಿಸಿ ಬಿಸಿಯಾದ ಆಹಾರವನ್ನು ನೀಡಿ. ಆದಷ್ಟು ಸೊಪ್ಪು, ತರಕಾರಿಗಳನ್ನು ಬಳಸಿ ಮಾಡಿದ ಸೂಪ್ ಅವರಿಗೆ ಕೊಡಿ. ಇದು ಅವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನು ಡ್ರೈ ಫ್ರೂಟ್ಸ್ ಕೂಡ ಅವರಿಗೆ ತಿನ್ನಲು ಕೊಡಬಹುದು.

ಇನ್ನು ಮಳೆಗಾಲದಲ್ಲಿ ಮಕ್ಕಳು ನೀರನ್ನು ಕುಡಿಯಲು ಹೆಚ್ಚು ಇಷ್ಟಪಡುವುದಿಲ್ಲ. ಸರಿಯಾಗಿ ನೀರು ಕುಡಿಯದೇ ಇದ್ದರೆ ನಿರ್ಜಲಿಕರಣ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಆದಷ್ಟು ಬಿಸಿ ನೀರು ಕುಡಿಯಲು ಅವರಿಗೆ ಕೊಡಿ.

Leave a Comment

Your email address will not be published. Required fields are marked *