Ad Widget .

ಕೆ.ಎಂ.ಎಫ್ ಅಧ್ಯಕ್ಷರಾಗಿ ಶಾಸಕ ಭೀಮಾನಾಯ್ಕ್ ಅವಿರೋಧ ಆಯ್ಕೆ

ಸಮಗ್ರ ನ್ಯೂಸ್: ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಧ್ಯಕ್ಷ ಸ್ಥಾನಕ್ಕೆ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಾನಾಯ್ಕ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Ad Widget . Ad Widget .

ಕೆಎಂಎಫ್‌ ಅಧ್ಯಕ್ಷ ಚುನಾವಣೆಗೆ ಶಾಸಕ ಭೀಮಾನಾಯ್ಕ್‌ ಒಬ್ಬರೇ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದರು. ಇವರ ವಿರೋಧವಾಗಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿ ನಾಮಪತ್ರ ಸಲ್ಲಿಕೆ ಮಾಡಿದ ಶಾಸಕ ಭೀಮಾನಾಯ್ಕ್‌ ಅವರನ್ನೇ ಅವಿರೋಧವಾಗಿ ಕೆಎಂಎಫ್‌ ಅಧ್ಯಕ್ಷರೆಂದು ಆಯ್ಕೆ ಮಾಡಿದ್ದಾರೆ.

Ad Widget . Ad Widget .

ನಾಮಪತ್ರ ಸಲ್ಲಿಕೆ ಅವಧಿ ಮುಗಿದರೂ ಭೀಮಾನಾಯ್ಕ್‌ಗೆ ವಿರೋಧವಾಗಿ ಯಾರೊಬ್ಬರೂ ನಾಮಪತ್ರ ಸಲ್ಲಿಕೆ ಮಾಡಿಲ್ಲ. ಹೀಗಾಗಿ, ಭೀಮಾನಾಯ್ಕ್‌ ಅವಿರೋಧವಾಗಿ ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಭಿಮಾನಾಯ್ಕ್‌ ಆಯ್ಕೆ ಆಗಿದ್ದಾರೆ ಎಂದು ಅಧಿಕೃತವಾಗಿ ತಿಳಿಸಿದರು. ಭೀಮಾನಾಯ್ಕ್‌ಗೆ ಅಭಿನಂದನೆ ತಿಳಿಸಲಾಗಿದ್ದು, ಮಂಡಳಿಯನ್ನು ಲಾಭದತ್ತ ನಡೆಸಬೇಕು. ಮುಖ್ಯವಾಗಿ ರೈತರಿಗೆ ಹೆಚ್ಚು ಲಾಭ ಸದ್ಯಕ್ಕೆ ಸಿಗ್ತಾ ಇಲ್ಲ. ಕೆಎಂಎಫ್ ರೈತರ ಹಿತ ಕಾಯುವ ನಿಟ್ಟಿನಲ್ಲಿ ಮುಂದಾಗಬೇಕು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಜತೆ ಸಭೆ ನಡೆಲಾಗುತ್ತದೆ ಎಂದು ತಿಳಿಸಿದರು.

Leave a Comment

Your email address will not be published. Required fields are marked *