Ad Widget .

ಶಕ್ತಿ ಯೋಜನೆ’ಗೆ ‘ಮಹಿಳಾ ಪ್ರಯಾಣಿಕ’ರ ಭರ್ಜರಿ ರೆಸ್ಪಾನ್ | ಜೂ.21ರಂದು 57.88 ಲಕ್ಷ ಸಂಚಾರ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರ ಜಾರಿಗೊಳಿಸಿರುವಂತ ಶಕ್ತಿ ಯೋಜನೆಗೆ ಮಹಿಳೆಯರ ರೆಸ್ಪಾನ್ ಮುಂದುವರೆದಿದೆ. ನಿನ್ನೆ ಬರೋಬ್ಬರಿ 57.88 ಲಕ್ಷ ಮಂದಿ ಯೋಜನೆಯ ಅಡಿಯಲ್ಲಿ ಸಂಚರಿಸಿ, ಪ್ರಯೋಜನ ಪಡೆದಿದ್ದಾರೆ.

Ad Widget . Ad Widget .

ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾಹಿತಿ ಬಿಡುಗಡೆ ಮಾಡಿದ್ದು, ದಿನಾಂಕ 20-06-2023ರಂದು ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲಿ 17,46,756, ಬಿಎಂಟಿಸಿಯಲ್ಲಿ 17,89,423, ಎನ್ ಡಬ್ಲ್ಯೂ ಕೆ ಆರ್ ಟಿಸಿ ಬಸ್ಸುಗಳಲ್ಲಿ 14,47,223 ಹಾಗೂ ಕೆಕೆ ಆರ್ ಟಿಸಿಯಲ್ಲಿ 8,05,072 ಮಂದಿ ಸೇರಿದಂತೆ 57,88,474 ಮಹಿಳೆಯರು ಉಚಿತವಾಗಿ ಸಂಚರಿಸಿದ್ದಾರೆ ಎಂದು ತಿಳಿಸಿದೆ.

Ad Widget . Ad Widget .

ಇನ್ನೂ ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ಮೌಲ್ಯ ಕೆ ಎಸ್ ಆರ್ ಟಿಸಿ 5,21,46,032. ಬಿಎಂಟಿಸಿ 2,27,68,534, ಎನ್ ಡಬ್ಲ್ಯೂ ಕೆ ಆರ್ ಟಿಸಿ ರೂ.3,59,28,000 ಹಾಗೂ ಕೆ ಕೆ ಆರ್ ಟಿ ಸಿ ರೂ.2,57,89,667 ಸೇರಿದಂತೆ ಒಟ್ಟು ರೂ.13,66,32,233 ವ್ಯಹಿಸಲಾಗಿದೆ.

ಅಂದಹಾಗೇ ಜೂನ್.11ರಿಂದ ಜೂನ್.20ರವರೆಗೆ ಪ್ರಯಾಣಿಸಿದಂತ ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ 4,82,48,563 ಆಗಿದೆ. ಒಟ್ಟು ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ರೂ.113,89,40,571 ಆಗಿದೆ. ಈ ಮೂಲಕ ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳಾ ಪ್ರಯಾಣಿಕರ ರೆಸ್ಪಾನ್ಸ್ ಮುಂದುವರೆದಿದೆ.

Leave a Comment

Your email address will not be published. Required fields are marked *