Ad Widget .

ಆರೋಗ್ಯಕರ ಜೀವನಶೈಲಿಗೆ ‘ಮಾನವೀಯತೆ’ ಧ್ಯೇಯದೊಂದಿಗೆ ನಿತ್ಯ ಯೋಗ ಮಾಡಿ

ಸಮಗ್ರ ನ್ಯೂಸ್:ಹಲವು ವರ್ಷಗಳಿಂದ ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿರುವ ಯೋಗ. ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 21 ಅನ್ನು ಅನೇಕ ಭೌತಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳ ಬಗ್ಗೆ ಪ್ರಪಂಚದ ಜನರಿಗೆ ಅರಿವು ಮೂಡಿಸಲು ‘ಮಾನವೀಯತೆ’ ಎಂಬ ಧ್ಯೇಯದೊಂದಿಗೆ ‘ಅಂತರರಾಷ್ಟ್ರೀಯ ಯೋಗ ದಿನ’ವನ್ನು ಆಚರಿಸಲಾಗುತ್ತದೆ.

Ad Widget . Ad Widget .

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸ ಮತ್ತು ಯೋಗಾಸನಗಳು ಸಹಾಯ ಮಾಡುತ್ತವೆ. ಅಲ್ಲದೆ ದೇಹದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಸಾವಿರಾರು ವರ್ಷದ ಇತಿಹಾಸವಿರುವ ಯೋಗಾಭ್ಯಾಸ ಇಂದು ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚಿನ ಪ್ರಸಿದ್ಧಿಯನ್ನು ಪಡೆದಿದೆ. ಆದರೆ ಇಂದಿನ ಯುವ ಜನತೆ ಈ ಯೋಗದ ಪ್ರಯೋಜನ ಪಡೆಯದಿರುವುದು ಒಂದು ವಿಪರ್ಯಾಸವೇ ಸರಿ.

Ad Widget . Ad Widget .

ಯೋಗ ದೇಹಕ್ಕೆ ಮತ್ತು ಮೆದುಳಿಗೆ ಪ್ರಯೋಜನಕಾರಿಯಾಗಿದ್ದು, ಇದು ಸ್ನಾಯುವಿನ ಶಕ್ತಿ ಮತ್ತು ದೇಹದ ಟೋನ್ಗೆ ಸಹ ಪ್ರಯೋಜನಕಾರಿಯಾಗಿದೆ. ಯೋಗವು ಜೀವನದಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ. ಹೀಗಾಗಿ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಯೋಗದ ಬಗ್ಗೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸುತ್ತಾರೆ.

ಹೆಚ್ಚಿನ ಜನರು ಆರಂಭ ಶೂರರಾಗಿದ್ದು ಯಾವುದೇ ಹೊಸ ವಿದ್ಯೆಯನ್ನು ಕಲಿಯುವಾಗ ಆರಂಭದಲ್ಲಿ ತೋರುವ ಉತ್ಸಾಹವನ್ನು ಮುಂದಿನ ದಿನಗಳಲ್ಲಿ ತೋರುವುದಿಲ್ಲ. ಯೋಗಾಭ್ಯಾಸದಲ್ಲಿಯೂ ಹಾಗೇ. ಏಕೆಂದರೆ ಕೆಲವೊಂದು ಆಸನಗಳಿಗೆ ಸ್ವಲ್ಪ ಕಷ್ಟಪಡಬೇಕಾಗುವುದರಿಂದ ಜನರು ನಿಧಾನವಾಗಿ ಈ ಕೆಲಸವೇ ಬೇಡವೆಂದು ಯೋಗಾಸನದಿಂದ ವಿಮುಖರಾಗಿ ಬಿಡುತ್ತಾರೆ.

ಸೂರ್ಯ ನಮಸ್ಕಾರ:
ಸೂರ್ಯ ನಮಸ್ಕಾರ ಎನ್ನುವುದು ಸುಮಾರು 12 ಯೋಗಾಸನಗಳನ್ನು ಒಳಗೊಂಡಿರುವ ಒಂದು ಭಂಗಿ. ಪ್ರತಿಯೊಂದು ಭಂಗಿಯೂ ದೇಹದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ ಮತ್ತು ಬಾಗುವಿಕೆ-ಹಿಗ್ಗುವಿಕೆಗೆ ನೆರವಾಗುತ್ತದೆ. ಈ ವೇಳೆ ದೀರ್ಘ ಉಸಿರು ತೆಗೆದುಕೊಳ್ಳುವುದು ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಅಲ್ಲದೆ ಸೂರ್ಯನ ಪ್ರಭಾತ ಕಿರಣಗಳಿಗೆ ಮೈಯೊಡ್ಡಿ ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ನಿಮಗೆ ಮಾನಸಿಕ ನೆಮ್ಮದಿ ದೊರೆತು ಮನ ಪ್ರಫುಲ್ಲಗೊಳ್ಳುತ್ತದೆ.

Leave a Comment

Your email address will not be published. Required fields are marked *