ಉಡುಪಿ: ಬಸ್- ಬೈಕ್ ಅಪಘಾತ| ಗಂಭೀರ ಗಾಯಗೊಂಡಿದ್ದ ಯುವತಿ ಸಾವು

ಸಮಗ್ರ ನ್ಯೂಸ್: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವತಿ ಮಣಿಪಾಲದ ಮೃತಪಟ್ಟಿದ್ದಾಳೆ.

Ad Widget ... ..

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನಿರ್ಮಿತಾ (19) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನಿರ್ಮಿತಾ ಹಾಗೂ ಶಶಾಂಕ್ ಜೂನ್ 18 ರಂದು ಬೈಕನಲ್ಲಿ ತೆರಳುತಿದ್ದಾಗ ಆಗುಂಬೆ ಘಾಟ್‌ನಲ್ಲಿ ಎದುರಿನಿಂದ ಬರುತ್ತಿದ್ದ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದರು. ಈ ದುರ್ಘಟನೆ ವೇಳೆ ಶಶಾಂಕ್ (21) ಸ್ಥಳದಲ್ಲೇ ಮೃತಪಟ್ಟಿದ್ದರು.
ಇನ್ನೂ ಶಶಾಂಕ್ ಮತ್ತು ನಿರ್ಮಿತಾ ಇವರಿಬ್ಬರು ಉಡುಪಿಯ ಬಾರ್ಕೂರಿನ ನಾಗರಮಠದವರು. ಶಶಾಂಕ್ ಇಂಜಿನಿಯರಿಂಗ್ ಮುಗಿಸಿ ಗುತ್ತಿಗೆದಾರರೊಬ್ಬರ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

Ad Widget

Leave a Comment

Your email address will not be published. Required fields are marked *