Ad Widget .

ಇಂದು ದ್ವಿತೀಯ PUC ಪೂರಕ ಪರೀಕ್ಷೆ ಫಲಿತಾಂಶ| ರಿಸಲ್ಟ್ ನೋಡೋದು ಹೇಗೆ‌ ಗೊತ್ತಾ?

ಸಮಗ್ರ ನ್ಯೂಸ್: ಮೇ, ಜೂನ್ 2023ರಂದು ನಡೆಸಲಾದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಜೂ.20ರ ಮಂಗಳವಾರದಂದು ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ.

Ad Widget . Ad Widget .

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ದಿನಾಂಕ 23-05-2023 ರಿಂದ 03-06-2023ರಂದು ನಡೆಸಲಾಗಿತ್ತು. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯವು ಮುಕ್ತಾಯವಾಗಿದ್ದು, ಈ ಹಿನ್ನಲೆಯಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ.

Ad Widget . Ad Widget .

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ವಿದ್ಯಾರ್ಥಿಗಳು ಮಂಡಳಿಯ ಜಾಲತಾಣ http://karresults.nic.in ನಲ್ಲಿ ಬೆಳಿಗ್ಗೆ 11 ಗಂಟೆಯ ನಂತರ ವೀಕ್ಷಿಸಬಹುದಾಗಿದೆ. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಹಾಜರಾತಿ ಕೊರತೆಯಿಂದ ವಾರ್ಷಿಕ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೂ ಇದೇ ಮೊದಲ ಬಾರಿಗೆ ಅವಕಾಶವನ್ನು ನೀಡಲಾಗಿತ್ತು.

ಸಿಇಟಿ ಮೂಲಕ ಕನ್ನಡ ಭಾಷಾ ಪರೀಕ್ಷೆಯನ್ನು ದಿನಾಂಕ 22-05-202ರಂದು ನಡೆಸಿದ್ದರಿಂದ, ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಪರಿಷ್ಕರಿಸಿ ದಿನಾಂಕ 23-05-2023ರಿಂದ 03-06-2023ರವರೆಗೆ ನಡೆಸಲಾಗಿತ್ತು. ಇದೀಗ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

Leave a Comment

Your email address will not be published. Required fields are marked *