Ad Widget .

ಅಪ್ಪ ಚಾಕಲೇಟ್​ಗೆ ದುಡ್ಡು ಕೊಡಲಿಲ್ಲ ಎಂದು ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ಹೋದ ಪುತ್ರಿಯರು

ಸಮಗ್ರ ನ್ಯೂಸ್: ಕಾಂಗ್ರೆಸ್​ನ ಶಕ್ತಿ ಯೋಜನೆ ಕೆಲವರಿಗೆ ಅನುಕೂಲವಾದ್ರೆ ಮತ್ತಷ್ಟು ಜನರಿಗೆ ಸಂಕಟ ತಂದಿದೆ. ಹೆಂಡತಿ ಮನೆಯಲ್ಲಿರುತ್ತಿಲ್ಲ, ಅಡುಗೆ ಮಾಡುತ್ತಿಲ್ಲ, ಬಸ್​ಗಳಲ್ಲಿ ನಮಗೆ ಸೀಟು ಸಿಗುತ್ತಿಲ್ಲ ಎಂದು ಕೆಲ ಪುರುಷರು ಬೇಸರ ಹೊರ ಹಾಕಿದ್ರೆ, ಮತ್ತೊಂದೆಡೆ ತನ್ನ ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಪೋಷಕರೊಬ್ಬರು ಕಣ್ಣೀರು ಹಾಕಿದ ಘಟನೆ ನಡೆದಿದೆ. ಅದೇರೀತಿ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉಚಿತ ಬಸ್ ಸೇವೆ ಯೋಜನೆ ಪೋಷಕರಿಗೆ ಸಂಕಷ್ಟ ತಂದಿತ್ತು.

Ad Widget . Ad Widget .

ಅಕ್ಕ-ತಂಗಿಯರಿಬ್ಬರು ತಂದೆಗೆ ಚಾಕಲೇಟ್​ಗೆ ಹಣ ಕೊಡುವಂತೆ ಕೇಳಿದ್ದಾರೆ. ತಂದೆ ಹಣ ಕೊಡದೆ ಮಕ್ಕಳ ಮೇಲೆ ರೇಗಾಡಿದ್ದಾರೆ. ಇದರಿಂದ ಕೋಪಗೊಂಡ ಇಬ್ಬರು ಪುತ್ರಿಯರು ಬಸ್ ಹತ್ತಿ ಫ್ರೀಯಾಗಿ ಧರ್ಮಸ್ಥಳಕ್ಕೆ ಪ್ರಯಾಣಿಸಿದ್ದಾರೆ. ಕೋಣನಕುಂಟೆಯಿಂದ ಧರ್ಮಸ್ಥಳಕ್ಕೆ ಹೋಗಿದ್ದಾರೆ.
ಈ ವಿಚಾರ ತಿಳಿಯದ ಪೋಷಕರು ಭಯಭೀತರಾಗಿ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಸಹೋದರಿಯರ ಹುಡುಕಾಟ ನಡೆಸಿದ ಪೊಲೀಸರು, ಮಕ್ಕಳು ನಾಪತ್ತೆಯಾದ ಎರಡು‌ ದಿನದ ಬಳಿಕ ಅಂದ್ರೆ ಜೂನ್ 18 ರಂದು ಧರ್ಮಸ್ಥಳದಲ್ಲಿ ಸಹೋದರಿಯರಿಬ್ಬರನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ಮಕ್ಕಳ ಪತ್ತೆಯಿಂದ ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *