Ad Widget .

ಉಜಿರೆ: ಬಸ್ ನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಗೂಂಡಾಗಿರಿ| ಬಸ್ ಅಡ್ಡ ಹಾಕಿ ದಾಂಧಲೆ; ಮೂವರು ಅರೆಸ್ಟ್

ದ.ಕ ಜಿಲ್ಲೆ ಬೆಳ್ತಂಗಡಿಯ ಚಾರ್ಮಾಡಿಯಲ್ಲಿ ವಿದ್ಯಾರ್ಥಿಗಳು ಗೂಂಡಾಗಿರಿ ನಡೆಸಿದ್ದು, ಪೊಲೀಸರ ಎದುರೇ ವ್ಯಕ್ತಿಯೋರ್ವನಿಗೆ ಹಲ್ಲೆ ಮಾಡಿದ್ದಾರೆ. ವಿದ್ಯಾರ್ಥಿಗಳಿಂದ ಗೂಂಡಾಗಿರಿ ನಡೆಸುತ್ತಿದ್ದರೂ ಮೂಕಪ್ರೇಕ್ಷಕರಂತೆ ವರ್ತಿಸಿದರು ಎಂಬ ಆರೋಪ ಕೇಳಿಬಂದಿದೆ.

Ad Widget . Ad Widget .

ಉಜಿರೆಯಿಂದ ಚಾರ್ಮಾಡಿಗೆ ಬಸ್ ನಲ್ಲಿ ವಿದ್ಯಾರ್ಥಿಗಳ ಗುಂಪು ಪ್ರಯಾಣ ಬೆಳೆಸುತ್ತಿತ್ತು. ಈ ವೇಳೆ ಚಾರ್ಮಾಡಿ ಬಳಿ ಬಸ್ ನಿಲ್ಲಿಸಲು ವಿದ್ಯಾರ್ಥಿಗಳು ಸೂಚಿಸಿದ್ದರು. ಆದರೆ ವೇಗದೂತ ಬಸ್ ಆಗಿರುವ ಕಾರಣ ಸಿಕ್ಕಸಿಕ್ಕಲ್ಲಿ ಬಸ್ ನಿಲ್ಲಿಸಲು ಸಾಧ್ಯವಿಲ್ಲ ಎಂದು ಬಸ್ ಕಂಡೆಕ್ಟರ್ ಹೇಳಿದ್ದ ಎನ್ನಲಾಗಿದೆ. ಈ ವೇಳೆ ವಿದ್ಯಾರ್ಥಿಗಳು ಮತ್ತು ಕಂಡೆಕ್ಟರ್ ನಡುವೆ ನಡೆದ ವಾಗ್ವಾದ ನಡೆದಿದೆ. ಕಂಡೆಕ್ಟರ್ ಮಾತಿಗೆ ಬಸ್ ನಲ್ಲಿದ್ದ ಪ್ರಯಾಣಿಕರೊಬ್ಬರು ಬೆಂಬಲ ಸೂಚಿಸಿದ್ದರು. ಈ ವೇಳೆ ಪ್ರಯಾಣಿಕನ ಮೇಲೆ‌ ಮುಗಿಬಿದ್ದ ವಿದ್ಯಾರ್ಥಿಗಳು, ಬೇರೆ ಯುವಕರನ್ನು ಕರೆಸಿ ಬಸ್ ಅಡ್ಡ ಹಾಕಿ ದಾಂಧಲೆ ಮೆರೆದಿದ್ದಾರೆ.

Ad Widget . Ad Widget .

ಪೊಲೀಸರ ಎದುರೇ ದಾಂಧಲೆ ಮಾಡಿದ ವಿದ್ಯಾರ್ಥಿಗಳು, ಮಹಿಳೆಯರ ಎದುರೇ ಅವ್ಯಾಚ್ಯ ಶಬ್ಧಗಳಿಂದ ಪ್ರಯಾಣಿಕನಿಗೆ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿಗಳ ಗೂಂಡಾಗಿರಿ ದೃಶ್ಯವನ್ನು ಮೊಬೈಲ್ ನಲ್ಲಿ ಬಸ್ ಪ್ರಯಾಣಿಕರು ಚಿತ್ರೀಕರಿಸಿದ್ದಾರೆ.

ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಶಬೀರ್(21) ಮಹೆರೂಪ್(22), ಮುಬಸ್ಸಿರ್(23) ಅವರನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.

Leave a Comment

Your email address will not be published. Required fields are marked *