Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗ್ರಹಗತಿಗಳ ಆಧಾರದ ಮೇಲೆ ಜೂನ್‌ 18ರಿಂದ ಜೂನ್ 25ರವರೆಗಿನ ವಾರ ಭವಿಷ್ಯ ನೋಡುವುದಾದರೆ ಈ ವಾರ ಕೆಲವೊಂದು ರಾಶಿಯವರಿಗೆ ಶುಭಫಲವಿದೆ, ಇನ್ನು ಕೆಲವು ರಾಶಿಯವರು ಸ್ವಲ್ಪ ಮುನ್ನೆಚ್ಚರಿಕೆವಹಿಸಿ. ಈ ವಾರ ನಿಮ್ಮ ರಾಶಿಗೆ ಹೇಗಿರಲಿದೆ ಎಂದು ನೋಡೋಣ…

Ad Widget . Ad Widget .

ಮೇಷ: ಈ ವಾರದಲ್ಲಿ ನೀವು ಆರ್ಥಿಕ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರುವುದು ಅಗತ್ಯ. ಅನಗತ್ಯ ಖರ್ಚುಗಳನ್ನು ಪರಿಶೀಲಿಸಿಕೊಂಡು ಅದನ್ನು ಕಡಿತಗೊಳಿಸಬೇಕಾಗುವುದು. ನಿಮ್ಮ ಕೆಲಸದ ಬಗ್ಗೆ ಮಾತನಾಡುವುದಾದರೆ, ಕಚೇರಿಯಿಂದ ದೂರವುಳಿಯುವುರಿ. ಕಚೇರಿಯ ಮೇಲುಸ್ತುವಾರಿಯವನ ಮನಃಸ್ಥಿತಿ ಸರಿಯಾಗಿಲ್ಲದೇ ನಿಮ್ಮ ಕೆಲಸವನ್ನು ಹೀಗಳೆಯಬಹುದು. ಅಂತಹ ಸಂದರ್ಭದಲ್ಲಿ ನೀವು ಕೆಲಸದ ಬಗ್ಗೆ ಸ್ವಲ್ಪವೂ ಲಕ್ಷ್ಯ ಕೊಡುವುದು ಉತ್ತಮ. ವ್ಯಾಪಾರಸ್ಥರು ಈ ವಾರ ಯಾಮಾರುವ ಸನ್ನಿವೇಶಗಳು ಬರಬಹುದು. ಹಣದ ವಿಷಯದಲ್ಲಿ ಜಾಗರೂಕರಾಗಿರಿ. ಕುಟುಂಬದ ಪರಿಸ್ಥಿತಿಯು ಸಾಮಾನ್ಯವಾಗುತ್ತವೆ. ಮನೆಯ ಹಿರಿಯರೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳುವಿರಿ. ತೃತೀಯದಲ್ಲಿ ಬುಧಾದಿತ್ಯಯೋಗವಾಗಲಿದ್ದು ನಿಮ್ಮ ಸಾಮರ್ಥ್ಯವು ಗೊತ್ತಾಗುವುದು.

Ad Widget . Ad Widget .

ವೃಷಭ: ಇದು ಜೂನ್ ತಿಂಗಳ ನಾಲ್ಕನೇ ವಾರವಾಗಿದ್ದು ನಿನಗೆ ಮಧ್ಯಫಲವಿದೆ ಎನ್ನಬಹುದು. ಸೂರ್ಯ ಹಾಗೂ ಬುಧರು ದ್ವಿತೀಯ ಸ್ಥಾನವನ್ನು ಪ್ರವೇಶಿಸುವುದರಿಂದ ತಂದೆ ಹಾಗೂ ಸಹೋದರನ ಸಹಕಾರ ಸಿಗಲಿದೆ. ಮಾತಿನ ಬಗ್ಗೆ ಸ್ವಲ್ಪ ಗಮನಬೇಕಾದೀತು. ಉದ್ಯೋಗದ ಸ್ಥಳದಲ್ಲಿ ಸಾಕಷ್ಟು ಕೆಲಸದ ಹೊರೆ ಇರುವುದು. ಸಹೋದ್ಯೊಗಿಗಳ ಜೊತೆ ಸೇರಿ ನೀವು ಅದನ್ನು ಮುಗಿಸುವಿರಿ. ಹೆಚ್ಚು ಮಾತನಾಡದೇ ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿ. ಹಿರಿಯ ಸಹೋದರನ ಜೊತೆ ವಾದಕ್ಕಿಳಿಯುವ ಸಾಧ್ಯತೆ ಇದೆ. ಗುರುವು ಸದ್ಯ ನಿಮಗೆ ಪ್ರತಿಕೂಲನಾಗಿರುವುದರಿಂದ ಹೆಜ್ಜೆ ಇಡುವಾಗ ಜಾಗರೂಕರಾಗಿರಿ. ನಿಮ್ಮವರ ಮಾತನ್ನು ನೀವು ಗೌರವಿಸಿ.

ಮಿಥುನ: ಈ ವಾರ ಸೂರ್ಯ ಹಾಗೂ ಬುಧರು ನಿಮ್ಮ‌ ಮನೆಯನ್ನು ಪ್ರವೇಶಿಸಲಿದ್ದು ನೀವು ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳುವಿರಿ. ದೇಹಕ್ಕೆ ಸಂಬಂಧಪಟ್ಟ ವ್ಯಾಯಾಮವನ್ನು ನೀವು ಅನುಭವಿಗಳ ಸಲಹೆಯ ಮೇಲೆ ಮಾಡುವುದು ಒಳ್ಳೆಯದು. ಉದ್ಯೋಗಿಗಳಿಗೆ ಈ ವಾರವು ಸವಾಲಿನ ದಿನವಾಗಲಿದೆ. ದ್ವಿತೀಯದಲ್ಲಿ ಇರುವ ಕುಜ ಹಾಗೂ ಶುಕ್ರರು ನಿಮಗೆ ಬೇಕಾದ ಹಣವನ್ನು ಕೊಡಿಸುವರು. ನವಮದಲ್ಲಿ ಇರುವ ಶನಿಯು ನಿಮ್ಮ ಭಾಗ್ಯವನ್ನು ಕಡಿಮೆ ಮಾಡಿಸುವನು.‌ ಹಿರಿಯರ ವಿಚಾರದಲ್ಲಿ ಅನಾದರವನ್ನೂ ತೋರಿಸಬಹುದು. ಏಕಾದಶದಲ್ಲಿ ಇರುವ ರಾಹು ಹಾಗೂ ಗುರು ಪ್ರತಿಕೂಲವಲ್ಲದಿದ್ದರೂ ಅನುಕೂಲವೂ ಕಡಿಮೆ ಮಾಡಲಿದ್ದಾರೆ.

ಕಟಕ: ಈ ವಾರವು ನಿಮಗೆ ಸ್ವಲ್ಪ ಕಷ್ಟವೇ ಆಗಿದೆ. ಸೂರ್ಯ ಹಾಗು ಬುಧರು ದ್ವಾದಶದಲ್ಲಿ ಇದ್ದು ನಿಮಗೆ ಒಂದಿಷ್ಟು ತೊಂದರೆಯನ್ನು ಕೊಡಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಶನಿಯೂ ಅಷ್ಟಮದಲ್ಲಿ ಇದ್ದು ಸ್ವಲ್ಪಮಟ್ಟಿಗೆ ಪೀಡೆಯನ್ನೂ ಕೊಡುವನು. ನಿಮ್ಮನ್ನು ನೀವು ಬಹಳ ಗಂಭೀರವಾಗಿ ಪರಿಗಣಿಸಿಕೊಳ್ಳುವಿರಿ. ಸಹೋದ್ಯೋಗಿಗಳ ಜೊತೆ ನಿಮ್ಮ ವ್ಯವಹಾರವು ಸರಿಯಾಗಿರಲಿ. ನಿಮ್ಮ ಸಂಗಾತಿಯ ಸಲಹೆಯು ದೊಡ್ಡ ಲಾಭವನ್ನು ತಂದುಕೊಟ್ಟೀತು. ಆಹಾರ ವಿಚಾರದಲ್ಲಿ ನೀವು ಈ ವಾರ ಎಚ್ಚರಿಕೆಯಿಂದ ಇರುವುದು ಮುಖ್ಯ. ದಶಮದಲ್ಲಿ ಇರುವ ಗುರುವು ರಾಹುವಿನ ಜೊತೆಗಿದ್ದ ಕಾರಣ ಕಾರ್ಯಕ್ಷೇತ್ರದಲ್ಲಿ ಒತ್ತಡ, ಕಿರಿಕಿರಿಗಳು ಇರಬಹುದು. ಅದನ್ನು ಸರಿದೂಗಿಸುವ ಕಲೆಯನ್ನು ಕರಗತ ಮಾಡಿಕೊಳ್ಳುವ ಅಗತ್ಯವಿದೆ.

ಸಿಂಹ: ಈ ವಾರದಲ್ಲಿ ನಿಮ್ಮ ಆರ್ಥಿಕ ಸ್ಥಿತಿಗತಿಗಳು ಅಭಿವೃದ್ಧಿಯಾಗಬಹುದು. ನೀವು ಕುಟುಂಬದ ಜೊತೆ ಅದರಲ್ಲಿಯೂ ತಂದೆ ಹಾಗೂ ಸಹೋದರರ ಜೊತೆ ಸಾಕಷ್ಟು ಉತ್ಸಾಹದಿಂದ ಸಮಯವನ್ನು ಕಳೆಯುವಿರಿ. ಈ ವಾರ ವಿವಾಹವಾಗುವ ಮಿತ್ರನಿಗೆ ಅಚ್ಚರಿಯ ಉಡುಗೊರೆಯನ್ನು ಕೊಡುವಿರಿ. ಈ ವಾರವು ನೀವು ಮೊದಲೇ ಮಾಡಿದ ಕೆಲಸವು ತಪ್ಪಾಗಿದೆ ಎಂದು ಅನ್ನಿಸಬಹುದು. ಆದರೆ ಅದನ್ನೇ ಆಲೋಚಿಸುತ್ತಿದ್ದರೆ ಪ್ರಯೋಜನವಾಗದು. ಮುಂದಿನ ಕ್ರಮವನ್ನು ಚಿಂತಿಸುವುದು ಒಳ್ಳೆಯದು. ಆರ್ಥಿಕವಾಗಿ ಬಲಗೊಳ್ಳುವ ಇಚ್ಛೆ ಇಟ್ಟುಕೊಂಡಿರುವ ನೀವು ಆಪ್ತರ ಜೊತೆ ಕುಳಿತು ಮಾತನಾಡುವುದು ಒಳ್ಳೆಯದು. ಏಕಾದಶದಲ್ಲಿ ಸೂರ್ಯ ಹಾಗೂ ಬುಧರಿದ್ದು ನಿಮಗೆ ತಂದೆಯ ಹಾಗೂ ಸಹೋದರರಿಂದ ಅಥವಾ ಮಾತಿನಿಂದ ಸಂಪತ್ತು ಸಿಗುವಂತೆ ಮಾಡಬಹುದು. ನ್ಯಾಯವಾದಿಗಳಾಗಿದ್ದರೆ ಹೆಚ್ಚಿನ ಪ್ರಶಂಸೆಯು ಸಿಗಬಹುದು.

ಕನ್ಯಾ: ಈ ವಾರವು ನಿಮ್ಮ ಆಲೋಚನೆಯ ದಿಕ್ಕನ್ನು ಬದಲಿಸುವುದು. ನಿಮಗೆ ಎಲ್ಲವೂ ಸೋಲಿನಂತೆ ಕಂಡ ಕಾರಣ ಹೂಡಿಕೆಯನ್ನೂ ವ್ಯಾಪಾರಕ್ಕೆ ಹಾಕುವ ಹಣವನ್ನು ಎಲ್ಲವನ್ನೂ ಸದ್ಯ ನಿಲ್ಲಿಸಬೇಕೆನಿಸಬಹುದು. ನೀವು ಒಬ್ಬೊಂಟಿಯಾಗಿ ಇರುವುದನ್ನು ಗಮನಿಸಿ ಒಟ್ಟಿಗೆ ಕೆಲಸ ಮಾಡಲು ಸೂಚನೆ ಬರಬಹುದು. ಈ ವಾರ ನೀವು ಉದ್ಯಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವವರಿದ್ದೀರಿ. ಮನೆಯ ವಾತಾವರಣವೂ ಈ ವಾರ ಉತ್ತಮವಾಗಿಲ್ಲ. ಮನೆಯ ಹಿರಿಯರ ಆರೋಗ್ಯವೂ ಹದಗೆಡುವ ಸಾಧ್ಯತೆ ಇದೆ. ಹಣದ ವಿಷಯದಲ್ಲಿ ನೀವು ಧಾರಾಳಿ ಎಂದು ನಿಮ್ಮನ್ನೇ ಕೇಳಲು ಬರಬಹುದು. ಕೊಟ್ಟ ಮಾತನ್ನು ಉಳಿಸಿಕೊಳ್ಳದವ ಎಂಬ ಅಪವಾದವೂ ಬರಬಹುದು. ಸೂರ್ಯ ಹಾಗೂ ಬುಧರು ದಶಮದಲ್ಲಿ ಇದ್ದು ನಿಮ್ಮ ವೃತ್ತಿಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡಬಹುದು.

ತುಲಾ: ಈ ವಾರವು ನಿಮ್ಮ ಗುಣಮಟ್ಟ ಹೆಚ್ಚಾಗುವ ವಾರವಾಗಿದೆ. ಸದ್ಯ ಹೊಸ ವ್ಯವಹಾರವನ್ನು ಪ್ರಾರಂಭಿಸಿದ್ದರೆ, ನಿರೀಕ್ಷಿತ ಫಲವನ್ನು ಪಡೆಯಲಾಗದಿದ್ದರೆ ಚಿಂತಿಸುವ ಅಗತ್ಯವಿಲ್ಲ. ತಾಳ್ಮೆಯಿಂದ ನಿಮ್ಮ ಕೆಲಸವನ್ನು ಮುಂದುವರಿಸಿ. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವುವದಾದರೆ ಈ ವಾರ ಅಧಿಕ ಲಾಭವನ್ನು ಕಾಣಬಹುದು. ಈ ವಾರವು ಕಚೇರಿಯ ಕೆಲಸಗಳು ಬೇಗನೆ ಮುಕ್ತಾಯಗೊಳ್ಳುವುದು. ಪತ್ನಿಯ ಜೊತೆ ಸಣ್ಣ ಮಾತಿನ ಬಿರುಸೂ ನಡೆಯಬಹುದು. ನಮವಸ್ಥಾನಕ್ಕೆ ಸೂರ್ಯ ಹಾಗೂ ಬುಧರು ಬಂದ ಕಾರಣ ಸಮ್ಮಾನ, ಗೌರವ ಹಾಗೂ ನಿಮ್ಮ‌ ಮಾತು ನಡೆಯುವುದು.

ವೃಶ್ಚಿಕ: ಜೂನ್ ತಿಂಗಳ ನಾಲ್ಕನೇ ವಾರ ಸಾಮಾನ್ಯವಾಗಿ ಇರಲಿದೆ. ಕುಜ ಹಾಗೂ ಶುಕ್ರರು ನಿಮಗೆ ಅಲ್ಪ ಪುಷ್ಟಿಯನ್ನು ನೀಡುವರು. ವ್ಯಾಪರವು ಲಾಭವನ್ನು ತಂದುಕೊಟ್ಟರೂ ಮತ್ಯಾವುದೋ ರೀತಿಯಲ್ಲಿ ಅದು ಮಾಯವಾಗಬಹುದು. ಈ ವಾರ ನೀವು ವೇತನವನ್ನು ಹೆಚ್ಚು ಮಾಡಿಕೊಳ್ಳಲು ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳ ಜೊತೆ ನೀವು ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳುವಿರಿ. ಈ ವಾರ ನಿಮ್ಮ ಕಠಿಣ ಪರಿಶ್ರಮ ಹಾಗೂ ಬುದ್ಧಿವಂತಿಕೆಯಿಂದ ಉತ್ತಮ ಹಣವನ್ನು ಗಳಿಸಬಹುದು. ಕುಟುಂಬ ಜೀವನದಲ್ಲಿ ಭಾವೈಕ್ಯತೆಯ ಕೊರತೆ ಕಾಣಬಹುದು. ಸಹೋದರರ ನಡುವೆ ಭಿನ್ನಾಭಿಪ್ರಾಯ ಬರಬಹುದು. ಸೂರ್ಯನು ಅಷ್ಟಮಸ್ಥಾನಕ್ಕೆ ಪ್ರವೇಶಿಸುವನು. ಅವನ‌ ಜೊತೆ ಸ್ವಕ್ಷೇತ್ರಾಧಿಪತಿಯಾದ ಬುಧನೂ ಇರುವನು. ಜ್ವರ‌ ಮುಂತಾದ ಖಾಯಿಲೆಗಳು ಬರಬಹುದು. ಎಚ್ಚರಿಕೆಯಿಂದ ಇರಿ.

ಧನು: ಈ ವಾರವು ನಿಮಗೆ ಶುಭವಾರವಾಗುದು. ಕುಜ ಹಾಗೂ ಶುಕ್ರರನ್ನು ಬಿಟ್ಟರೆ ಉಳಿದ ಎಲ್ಲರೂ ನಿಮಗೆ ಅನುಕೂಲಕರರೇ ಆಗಿದ್ದಾರೆ. ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ನಿಮ್ಮ ಕಾಳಜಿಯನ್ನು ಕೊಡಬೇಕಾಗಬಹುದು. ನೀವು ಅನಗತ್ಯ ಒತ್ತಡಕ್ಕೆ ಬೀಳದೇ ಅಭ್ಯಾಸ ಮಾಡುವುದು ಮುಖ್ಯ. ಆರ್ಥಿಕ ವಿಚಾರದಲ್ಲಿ ಈ ವಾರವು ನಿಮಗೆ ಉತ್ತಮವಾಗಿಲ್ಲ. ನಕಾರಾತ್ಮಕ ವಿಷಯಗಳ ಬಗ್ಗೆಯೇ ಹೆಚ್ಚು ಚರ್ಚೆಯನ್ನು ಮಾಡುವಿರಿ. ನಿಮ್ಮ ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆಯಲು ನಿಮಗೆ ಅವಕಾಶ ಸಿಗಬಹುದು. ಸಮಯದಲ್ಲಿ ಇರುವ ಸೂರ್ಯ ಹಾಗು ಬುಧರು ಪತ್ನಿಯ ಪ್ರಾಬಲ್ಯವನ್ನು ಹೆಚ್ಚು ಮಾಡುವರು.

ಮಕರ: ಈ ನಾಲ್ಕನೇ ವಾರವು ನಿಮಗೆ ಅಲ್ಪ ಪ್ರಮಾಣದ ಶುಭವಿರುವುದು. ತಲೆ ಗಟ್ಟಿ ಇದೆ ಎಂದು ಬಂಡೆಗೆ ತಲೆಯನ್ನು ಕುಟ್ಟುವುದು ಮೂರ್ಖತನ. ನೀವು ಎಷ್ಟೇ ದೊಡ್ಡ ವ್ಯಾಪಾರಸ್ಥರಾಗಿದ್ದರೂ ಸಾಲ ಕೊಡುವುದನ್ನು ಈ ವಾರ ನಿಲ್ಲಿಸಿ. ಚಿಲ್ಲರೆ ವ್ಯಾಪಾರಿಗಳಿಗೆ ಈ ವಾರ ಉತ್ತಮವಿರಲಿದೆ. ಉದ್ಯೋಗಿಗಳು ಈ ವಾರ ಪೂರ್ತಿ ಕಾರ್ಯದಲ್ಲಿ ಮಗ್ನರಾಗಿರುವರು. ನಿಮ್ಮ ಕಾರ್ಯದ ಗುಣಮಟ್ಟದ ಬಗ್ಗೆ ಮಾತುಗಳು ಬರಬಹುದು. ನಿಮ್ಮ ಯೋಜನೆಯಂತೆ ಖರ್ಚು ಮಾಡಿದರೆ ಯಾವುದೇ ಸಮಸ್ಯೆಯಾಗದು. ತಂದೆಯ ಆರೋಗ್ಯವು ಹದಗೆಡುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ. ಅವರನ್ನು ಕಾಳಜಿಯಿಂದ ನೋಡಿಕೊಳ್ಳಿ. ದೇಹದಷ್ಟೇ ಮನಸ್ಸಿಗೂ ವಿಶ್ರಾಂತಿಯ ಅವಶ್ಯಕತೆವಿರಲಿದೆ. ಷಷ್ಠದಲ್ಲಿ ಇರುವ ಬುಧ ಹಾಗೂ ಸೂರ್ಯರು ಸಣ್ಣ ಕಿರಿಕಿರಿಯನ್ನು ಮಾಡಿಸಿಯಾರು. ತಾಳ್ಮೆ ಬಿಡದೇ ಮನೆಯವರ ಜೊತೆ ವರ್ತಿಸಿ.

ಕುಂಭ: ಈ ವಾರ ನೀವು ಆತುರದ ಸಂದರ್ಭವನ್ನು ತಪ್ಪಿಸಿಕೊಳ್ಳಿ. ಇಲ್ಲದಿದ್ದರೆ ನಿಮಗೇ ಇಂದು ತೊಂದರೆಯನ್ನು ತರಬಹುದು. ವಾಹನ ಚಾಲನೆ ಮಾಡುವಾಗಲೂ ಯಾವುದೇ ಆತುರ ಬೇಡ. ಹಣದ ಪರಿಸ್ಥಿತಿಯಲ್ಲಿ ನೀವು ಈ ವಾರ ಸುಧಾರಣೆಯನ್ನು ಕಾಣಬಹುದು. ಆಸ್ತಿಗೆ ಸಂಬಂಧಿಸಿದ ವಿಷಯದಲ್ಲಯೂ ಸಕಾರಾತ್ಮಕ ಬೆಳವಣಿಗೆ ಇರಲಿದೆ. ಕಚೇರಿಯಲ್ಲಿ ನೀವು ಈ ವಾರ ಹೆಚ್ಚಿನ ಪ್ರಗತಿಯನ್ನು ಸಾಧಿಸುವಿರಿ‌. ಶುದ್ಧ ಆಹಾರಸೇವನೆಗೆ ಹೆಚ್ಚು ಒತ್ತುಕೊಡಿ. ಪಂಚಮದಲ್ಲಿ ಬುಧಾದಿತ್ಯಯೋಗವಾಗಲಿದ್ದು ನಿಮ್ಮ ಪ್ರತಿಭೆಯ ಅನಾವರಣವೂ ಆಗಲಿದೆ.

ಮೀನ: ಈ ತಿಂಗಳ ನಾಲ್ಕನೇ ವಾರ ಕುಟುಂಬದಲ್ಲಿ ಸ್ವಲ್ಪ ಶಾಂತಿ ಇರುತ್ತದೆ. ನಿಮ್ಮ ಸಂಗಾತಿಯ ಸ್ವಭಾವವು ಕೆಲವೊಂದು ಸಂದರ್ಭದಲ್ಲಿ ಉಗ್ರವಾಗಬಹುದು. ಅದನ್ನು ಗಮನಸಿಕೊಂಡು ಮಾತನಾಡಿ. ಕ್ಷುಲ್ಲಕ ವಿಚಾರಗಳೂ ದೊಡ್ಡದಾಗುವ ಸಾಧ್ಯತೆ ಇದೆ. ಕಛೇರಿಯಲ್ಲಿ ಇನ್ನೊಬ್ಬರನ್ನು ಗೇಲಿ ಮಾಡುವಿರಿ. ಅದರ ಬದಲಿಗೆ ನಿಮ್ಮ ಕೆಲಸದ ಬಗ್ಗೆ ಗಮನಕೊಡಿ. ವ್ಯಾಪಾರಸ್ಥರು ಈ ವಾರ ಹೆಚ್ಚು ಪ್ರಯಾಣ ಮಾಡುವರು. ಇದು ನಿಮಗೆ ದಣಿವು ಮತ್ತು ಆಯಾಸವನ್ನು ಹೆಚ್ಚು ಉಂಟು ಮಾಡುತ್ತದೆ. ಆದರೆ ಅನಿವಾರ್ಯವಾಗಲಿದೆ. ಬುಧಾದಿತ್ಯರು ಚತುರ್ಥದಲ್ಲಿ ಸೇರಲಿದ್ದಾರೆ. ಕುಟುಂಬದಲ್ಲಿ ಹೆಚ್ಚಿನ ಅನುಕೂಲತೆಗಳು ಆಗಬಹುದು.

Leave a Comment

Your email address will not be published. Required fields are marked *