Ad Widget .

ಕರಾವಳಿಗೆ ಬರಲಿದೆಯೇ ವಂದೇ ಭಾರತ್ ಎಕ್ಸ್ ಪ್ರೆಸ್?

ಸಮಗ್ರ ನ್ಯೂಸ್: ಕರ್ನಾಟಕದಲ್ಲಿನ ಎರಡು ಪ್ರಮುಖ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಕ್ಕೂ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಸೇವೆ ದೊರೆಯುವ ಸಾಧ್ಯತೆ ಇದೆ ಎಂದು ಇದೀಗ ಸುದ್ದಿಯಾಗುತ್ತಿದೆ.

Ad Widget . Ad Widget .

ಮುಂಬೈ-ಗೋವಾ ವಂದೇ ಭಾರತ್ ರೈಲನ್ನು ಉಡುಪಿ ಮತ್ತು ಮಂಗಳೂರಿಗೂ ವಿಸ್ತರಣೆ ಮಾಡುವಂತೆ ಬೇಡಿಕೆ ಕೇಳಿಬರುತ್ತಿದೆ. ಉಡುಪಿಯ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಸಚಿವೆ ಶೋಭಾ ಕರಂದ್ಲಾಜೆಗೆ ಈ ಕುರಿತು ಮನವಿ ಮಾಡಿರುವುದಾಗಿ ಒನ್ ಇಂಡಿಯಾ ಕನ್ನಡದಲ್ಲಿ ವರದಿ ಮಾಡಿದೆ. ಮುಂಬೈ-ಗೋವಾ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಜೂನ್ 3ರಂದು ಲೋಕಾರ್ಪಣೆ ಆಗಬೇಕಿತ್ತು. ಆದರೆ ಒಡಿಶಾ ರೈಲು ದುರಂತದ ಹಿನ್ನೆಲೆಯಲ್ಲಿ ಈ ಉದ್ಘಾಟನಾ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು.

Ad Widget . Ad Widget .

ಇದೀಗ ಉಡುಪಿ-ಮಂಗಳೂರಿನವರೆಗೂ ಮುಂಬೈ-ಗೋವಾ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಸೇವೆ ವಿಸ್ತರಣೆ ಮಾಡುವ ಬೇಡಿಕೆ ಮುನ್ನೆಲೆಗೆ ಬಂದಿದೆ. ಬೆಂಗಳೂರು ಹುಬ್ಬಳ್ಳಿ ವಂದೇ ಭಾರತ್ ರೈಲು ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿಯ ಸ್ಟೇಷನ್ ಗಳಲ್ಲಿ ಮಾತ್ರ ನಿಲ್ಲಲಿದೆ ಎಂದು ವರದಿಯಾಗಿದೆ.

ಜೂನ್ 26ರಂದು ಮುಂಬೈ-ಗೋವಾ, ಭೋಪಾಲ್-ಇಂಧೋರ್, ಪಾಟ್ನಾ-ರಾಂಚಿ, ಭೋಪಾಲ್ – ಜಬಲ್ಪುರಗಳಲ್ಲಿಯೂ ವಂದೇ ಭಾರತ್ ರೈಲುಗಳ ಸಂಚಾರ ಆರಂಭವಾಗಲಿದೆ.

Leave a Comment

Your email address will not be published. Required fields are marked *