ಸಮಗ್ರ ನ್ಯೂಸಿ : ಮಲೆನಾಡಿನಲ್ಲಿ ಅನೇಕ ಸಮಾಜ ಸೇವಕರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಗುರುತುಕೊಳ್ಳುತ್ತಾರೆ.
ಕೆಲವರು ಸದ್ದಿಲ್ಲದೇ ಸಮಾಜ ಸೇವೆ ಮಾಡಿ ತೃಪ್ತಿ ಪಡುತ್ತಾರೆ ಅಂತವರ ಹಾದಿಯಲ್ಲಿ ವರುಷದ ಹಿಂದೆ ಸಮಾಜ ಸೇವೆಗಾಗಿಯೇ ತೊಡಗಿಸಿಕೊಂಡು ತೆರೆಮರೆಯಲ್ಲಿಯೇ ಸಮಾಜ ಸೇವೆಯಲ್ಲಿ ನಿರತರಾಗಿರುವ ಗಬ್ಗಲ್ ಯುವ ಗೆಳೆಯರ ಬಳಗವೂ ಒಂದು. ತೆರೆಮರೆಯಲ್ಲಿಯೇ ಸಮಾಜ ಸೇವೆಗಳನ್ನು ಮಾಡುತ್ತಾ ಮನೆ ದುರಸ್ತಿಗೆ ಬಳಗವೇ ಮನೆಗಳನ್ನು ದುರಸ್ತಿ ಮಾಡುತ್ತಾ ಬಂದಿದೆ. ಈ ಯುವ ಗೆಳೆಯರ ಬಳಗವು ಯಾವುದೇ ಪ್ರತಿಫೇಕ್ಷೆ ಅಪೇಕ್ಷಿಸದೇ ಮನೆ ಹಾನಿಯಾದವರಿಗೆ ಮನೆ ನಿರ್ಮಾಣ ಕಾರ್ಯ, ಸರ್ಕಾರಿ ಶಾಲೆಗೆ ಉಳಿವಿಗಾಗಿ ಸೇವಾ ಕಾರ್ಯ ಮಾಡುತ್ತಾ ಬರುತ್ತಿದೆ. ಗ್ರಾಮಗಳಲ್ಲಿ ಸ್ವಚ್ಚತಾ ಕಾರ್ಯಕ್ಕೂ ತಾವು ಮುಂದಾಗಿ ಬಳಗವು ಸೇವೆಯನ್ನು ನೀಡುತ್ತಿದೆ.

ಕೂವೆ ಗ್ರಾಮದ ವ್ಯಾಪ್ತಿಯ ತಲಗೂರು ಗ್ರಾಮದ ರಾಮ ಅವರ ಮನೆ ಸಂಪೂರ್ಣ ದುರಸ್ತಿ ಮಾಡಿ ರಿಪೇರಿ ಯಾವುದೇ ಇತರರ ಸಹಾಯ ಕೇಳದೇ ಬಳಗವೇ ಖರ್ಚು ಮಾಡಿ ಸೇವೆ ನೀಡಿದೆ.
35 ಜನರು ಈ ಯುವ ಗೆಳೆಯರ ಬಳಗದಲ್ಲಿದ್ದು ಬಳಗದ ಅಧ್ಯಕ್ಷ ಮಂಜುನಾಥ್ ಅವರ ಸಾರಥ್ಯದಲ್ಲಿ ಕಾರ್ಯದರ್ಶಿಗಳಾಗಿ ಯತೀಶ್,ಸುಭಾಷ್,ಮೋಹನ್,ರಂಜಿತ್,ಖಜಾಂಚಿಗಳಾಗಿ ಅರುಣ್,ಕಿರಣ್,ಅಶೋಕ್,ಅವಿನಾಶ್,ಸಂಚಾಲಕರಾಗಿ ಸತೀಶ್,ಗಣೇಶ್, ಸುದರ್ಶನ್,ಪ್ರದೀಪ್,ರಘು, ಮಂಜು ಅವರ ತಂಡ ಸಮಾಜ ಸೇವೆಗಾಗಿ ರಚನೆಯಾಗಿದೆ ಎಂದು ಅಧ್ಯಕ್ಷ ಮಂಜುನಾಥ್ ಹೇಳುತ್ತಾರೆ. ಸಮಾಜ ಸೇವೆಗಾಗಿ ಗಬ್ಗಲ್ ಯುವ ಗೆಳೆಯರ ತಂಡ ಯಾವುದೇ ಸಂಕಷ್ಟದಲ್ಲಿ ನೆರವಿಗೆ ಸನ್ನಧ್ಧವಾಗಿದೆ.

ಗ್ರಾಮೀಣ ಪ್ರದೇಶದ ಯುವಕರು ಉದಾರ ಸೇವೆ ಮಾಡಲು ಮುಂದಾಗಿರುವುದು ಸಮಾಜದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.